spot_img
spot_img

ಸರ್ವ ಕಾರ್ಯಗಳ ಯಶಸ್ಸಿನ ಗುಟ್ಟೆ ಶ್ರದ್ಧೆ

Must Read

- Advertisement -

ಶ್ರದ್ಧೆ ಇಲ್ಲದ ಕೆಲಸ ಸುವಾಸನೆ ಇಲ್ಲದ ಹೂವಿನಂತೆ ನಾವು ಜೀವನದಲ್ಲಿ ಯಾವುದೇ ಕೆಲಸ ಯಶಸ್ಸು  ನಾವು ಆ ಕೆಲಸದ ಮೇಲೆ ಇಟ್ಟಿರುವ ಶ್ರದ್ಧೆ ಯ ಮೇಲೆ ಅವಲಂಬಿಸಿರುತ್ತದೆ. ಅದೇ ಶ್ರದ್ಧೆ ಮಾನವನನ್ನು ಎತ್ತರಕ್ಕೆ ಕೊಂಡೊಯುತ್ತದೆ. ಸಾಮಾನ್ಯ  ಮನುಷ್ಯನನ್ನು ಶ್ರೇಷ್ಠ ಮನುಷ್ಯನನ್ನಾಗಿ ಮಾಡುವುದು ಶ್ರದ್ಧೆಯಾಗಿದೆ.

ಶ್ರದ್ಧೆ ಇಲ್ಲದೆ ಬದುಕಿನಲ್ಲಿ ಏನನ್ನು? ಪೂರ್ಣ ಸಾಧಿಸಲಾಗದು. ಮಾನವ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಶ್ರದ್ಧೆಯನ್ನು ಹೊಂದಿರಲೆ ಬೇಕಾಗುತ್ತದೆ. ಜೀವನದಲ್ಲಿ ನಾವು ಒಂದು ಮಹತ್ವ ನಿರ್ಧಾರವನ್ನು ತೆಗೆದುಕೊಂಡು  ಆದರೆ ಅದು ಒಂದು ಹಂತದಲ್ಲಿ ನಾವು ಮಾಡಿದು ತಪ್ಪು ಎನ್ನಿಸಿದರೆ ಕಾರಣ ನಮ್ಮ ನಿರ್ಧಾರದಂತೆ ಅದರ ಮೇಲೆ ಶ್ರದ್ಧೆ ಇರಲಿಲ್ಲ ಎಂದರ್ಥವಾಗುತ್ತದೆ.

ನಾವು ಹೀಗೆಯೇ ಇರಬೇಕು ಇದೇ ರೀತಿಯಲ್ಲಿ ಬಾಳಬೇಕು ಎಂದು ಪ್ಲಾನ್ ಮಾಡಿಕೊಂಡಿರುತ್ತೆವೆ.ಅದು ಸಾದ್ಯವಾಗದಿದ್ದಾಗ ದೈವದ ಮೇಲೆ ಹಾಕಿ ಜಾರಿಕೊಳ್ಳುವುದು ಸರ್ವೆ ಸಾಮಾನ್ಯ .ಆದರೆ ನಿಜವಾದ ಕಾರಣ ಅದರ ಪೂರ್ಣತೆಯ ಕಡೆಯವರೆಗೆ ನಮ್ಮಲ್ಲಿ ಶ್ರದ್ಧೆ ಇರದೆ ಇರುವುದು ಮುಖ್ಯ ಕಾರಣವಾಗಿದೆ ಎಂಬುದನ್ನು ಮರೆಯುತ್ತೆವೆ.ನಮ್ಮ ಯಶಸ್ಸಿಗೆ ದಾರಿ ಸೂಚಕವೆ ಶ್ರದ್ಧೆ. ಶ್ರದ್ಧೆಯಿಂದ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾದ್ಯ.ಮಕ್ಕಳಲ್ಲಿ ಕೂಡಾ ಬಾಲ್ಯದಿಂದ ಶ್ರದ್ಧೆಯನ್ನು ಬೆಳೆಸಬೇಕು. ಅದು ಸ್ವಚ್ಛ, ಸುಂದರ, ಪವಿತ್ರವಾಗಿರಬೇಕು. ನಿಷ್ಠೆ ಮತ್ತು ನಿಸ್ವಾರ್ಥ ಆಚರಣೆಳೇ ಶ್ರದ್ಧೆ ಯ ಮೂಲ. ರಾಮದಾಸರ ಶಿಷ್ಯ ಶ್ರದ್ಧೆಯಿಂದಲ್ಲೆ ಕಲ್ಯಾಣನಾದ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡ ಮೂಢನೆಂದೆ ಪ್ರಸಿದ್ಧನಾದ ಶಂಕರನ ಶಿಷ್ಯ ಶ್ರದ್ಧೆಯಿಂದಾಗಿ ಜ್ಞಾನಿಯಾದ.

- Advertisement -

ಗೀತೆಯಲ್ಲಿ ಹೇಳುವಂತೆ’ ಶ್ರದ್ಧಾವಾನ್ ಲಭಿತೇ ಜ್ಞಾನಂ’ ಇಲ್ಲಿ ಭಗವಂತ ಹೇಳುವಂತೆ ಶ್ರದ್ಧೆಯಿಂದ ಜ್ಞಾನ ಜ್ಞಾನದಿಂದ ಸಂಸ್ಕಾರ.

ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಅವರ ಕಾರ್ಯಕ್ಷಮತೆ , ಆಸಕ್ತಿ ಉತ್ತಮವಾಗಿದ್ದು ಯಶಸ್ಸು ಪಡೆಯಬೇಕಾದರೆ ಅವರಲ್ಲಿ ಆತ್ಮವಿಶ್ವಾಸದ ಕೊರತೆಯು ಎದ್ದು ಕಾಣಿತ್ತಿದೆ.ಅದಕ್ಕಾಗಿ ಮಕ್ಕಳೆಲ್ಲರೂ ಜಾಣರಾಗಿದ್ದರೆ  ಸಾಲದು ಮೊದಲು ಮಾಡುವ ಕೆಲಸದ ಮೇಲೆ ಮೂಡುವಂತಹ ಆತ್ಮಸ್ಥೈರ್ಯ ಬೆಳೆಸುವುದು ಅತ್ಯಗತ್ಯವಾಗಿದೆ.

ಮಕ್ಕಳು ದಡ್ಡ ಇದ್ದರೂ ಪರವಾಗಿಲ್ಲ ಆದರೆ ಅವನು ಮಾಡುವ ಕೆಲಸದ  ಬಗ್ಗೆ ಶಾಂತ ಚಿತ್ತರಾಗಿ  ಯೋಚಿಸಿ ತಮ್ಮ ತನು- ಮನವನ್ನು ಏಕಾಗ್ರತೆಗೊಳಿಸಿ ಶ್ರದ್ಧೆ ಕೆಲಸದಲ್ಲಿ ತೊಡಗಿದರೆ ಯಶಸ್ಸು ಖಂಡಿತ ಸಿಕ್ಕೆ ಸಿಗುತ್ತದೆ. ಅಂತಹ ರೂಢಿಯನ್ನು ಮಕ್ಕಳಿದ್ದಾಗಲೆ ಬೆಳೆಸಬೇಕು. ಸಾಧನೆ ಮಾಡಿದವರ ನಿದರ್ಶನಗಳನ್ನು ಕೊಡುವುದರ ಮೂಲಕ ಕೆಲಸ ಯಾವುದೇ ಇರಲ್ಲಿ ಅದರ ಮೇಲೆ ಶ್ರದ್ಧಾ ಭಾವನೆಯಿಂದ ಮಾಡಿದರೆ ಜಯ , ಸಾಧನೆ ನಿಶ್ಚಿತ ಎಂಬ ಸ್ಪಷ್ಟವಾದ ಚಿತ್ರಣ ಕೊಡುವುದು ಅಗತ್ಯವಾಗಿದೆ.

- Advertisement -

ಬಸವರಾಜ ಉಪ್ಪಿನ , ಶಿಕ್ಷಕರು.

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group