spot_img
spot_img

ಕಸಾಪ ದಿಂದ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನೋತ್ಸವ ಆಚರಣೆ

Must Read

- Advertisement -

ಕರುನಾಡಿನ ಸಮಗ್ರ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ – ಡಾ. ಬಿರಾದಾರ

ಬೆಳಗಾವಿ: ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು ಕೇವಲ ವಿಜ್ಞಾನಿ ಮಾತ್ರವಾಗಿರದೆ ಸಮಾಜ ಭಾಷಾ ಸುಧಾರಣಾವಾದಿ, ಶಿಕ್ಷಣತಜ್ಞ, ಮಾತೃಭಾಷಾ ಪ್ರೇಮಿ ಎಲ್ಲವೂ ಆಗಿದ್ದರು. ಅವರು ಇಂಜಿನಿಯರ್ ಆಗಿ ಕೇವಲ ಕಟ್ಟಡ ಅಣೆಕಟ್ಟುಗಳ ವಿನ್ಯಾಸವನ್ನು ಮಾತ್ರ ಸಿದ್ಧಗೊಳಿಸಿದೆ ಭವಿಷ್ಯದ ಸುಭದ್ರ ಕನ್ನಡ ನಾಡಿನ ಏಳಿಗೆಗೆ ವಿನ್ಯಾಸವನ್ನು ತಳಪಾಯವನ್ನು ಹಾಕಿದರು. ಆದ್ದರಿಂದ ಕರುನಾಡಿನ ಸಮಗ್ರ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಪಾತ್ರ ಮಹತ್ತರವಾದದ್ದು ಎಂದು  ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು ಹೇಳಿದರು.

ಬೆಳಗಾವಿಯ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು  ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನೋತ್ಸವ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕರ್ಯವಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,  ವಿಶ್ವೇಶ್ವರಯ್ಯನವರು ಕಡು ಬಡತನದಲ್ಲಿ ಹುಟ್ಟಿ ಬೆಳೆದು, ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಶ್ರೇಣಿಯಲ್ಲಿ ಪದವಿ ಗಳಿಸಿ ಇಂಜಿನಿಯರ್ ಹುದ್ದೆಯನ್ನು ಪಡೆದರು.

- Advertisement -

ದೂರಗಾಮಿ ಯೋಚನೆಯ ವಿಶ್ವೇಶ್ವರಯ್ಯನವರು ಅಣೆಕಟ್ಟುಗಳು ಕೈಗಾರಿಕೆಗಳೆಂದು ಮೈಸೂರು ಬ್ಯಾಂಕ್ ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಾಂಸ್ಕೃತಿಕ ಯೋಜನೆಗಳ ರೂವಾರಿಯಾಗಿದ್ದರು.

ಸರ್ ಎಂ ವಿಶ್ವೇಶ್ವರಯ್ಯ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಮುಂತಾದವರ ಪ್ರಯತ್ನದ ಫಲವಾಗಿ ರೂಪುಗೊಂಡ ಕನ್ನಡ ಸಾಹಿತ್ಯ ಪರಿಷÀತ್ತು ಕಳೆದ 117 ವರ್ಷಗಳಲ್ಲಿ ಹಲವು ಮಹತ್ತರ ಯೋಜನೆಗಳ ಮೂಲಕ ಕನ್ನಡಿಗರ ಮನೆ-ಮನೆಗಳಲ್ಲಿ ದೀಪ ಹಚ್ಚುವ ಕೆಲಸ ಮಾಡುತ್ತಿದೆ ಮುಂದೆಯೂ ಎಲ್ಲ ಕನ್ನಡಿಗರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಕನ್ನಡ ಸಂಸ್ಕೃತಿ ಇತಿಹಾಸ ಪರಂಪರೆಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಡಾ. ಸುನೀಲ ಪರೀಟ ಅವರನ್ನು ಪರಿಷತ್ತಿನ ವತಿಯಿಂದ ಗೌರವಿಸಲಾಯಿತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು.

ಕಾರ್ಯಲಕ್ರಮದಲ್ಲಿ ಅಭಿಯಂತರರಾದ ಪ್ರವೀಣ್ ಮಠಪತಿ, ಶ್ರೀಮತಿ ರತ್ನಪ್ರಭಾ ಬೆಲ್ಲದ, ಮಹಾಂತೇಶ ಮೆಣಸಿನಕಾಯಿ,  ತಮ್ಮಣ್ಣ ಕಮಣ್ಣವರ,  ರಂಗಪ್ಪ ಜೂಗನವರ, ಶಿವಯೋಗಿ ಕುರುಬಗಟ್ಟಿ ಮಠ, ಶಿವಾನಂದ ತಲ್ಲೂರ, ವೀರಭದ್ರ ಅಂಗಡಿ, ಶ್ರೀ ರಂಗ ಜೋಶಿ ,ಬಸವಪ್ರಬು ಹಿರೇಮಠ, ಸುರೇಶ ಹಂಜಿ, ಪ್ರಕಾಶ ಅವಲಕ್ಕಿ, ಗುರುದೇವಿ ಹುಲ್ಲೆಪ್ಪನ್ನವರಮಠ, ಮಲ್ಲರ್ಜು ನ ಕೋಳಿ, ವಿನೋದ ಜಗಜಂಪಿ, ಮಲ್ಲರ್ಜು ನ ಕನಶೆಟ್ಟಿ, ಶೇಷಗಿರಿ ಮುತಾಲಿಕ್ ದೇಸಾಯಿ, ಮುಂತಾದವರು ಉಪಸ್ಥಿತರಿದ್ದರು.  ಎಸ್ ಎಸ್ ಹಾಲಭಾವಿ ಸ್ವಾಗತಿಸಿ ಭಾರತಿ ಮಠದ ವಂದಿಸಿದರು. ಪ್ರತಿಭಾ ಕಳ್ಳಿಮಠ ನಿರೂಪಿಸಿದರು.


ಮಾಹಿತಿ ವರದಿ: ಆಕಾಶ್ ಅರವಿಂದ ಥಬಾಜ
ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ
ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ, ಬೆಳಗಾವಿ
9448634208 /9035419700

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group