spot_img
spot_img

ರಸ್ತೆಯ ಕಳಪೆ ಕಾಮಗಾರಿ ವಿರುದ್ಧ ಪ್ರತಿಭಟನೆ ; ಪರಿಶೀಲನೆಗೆ ಒತ್ತಾಯ

Must Read

- Advertisement -

ಸಿಂದಗಿ: ತಾಲೂಕಿನ ದೇವರನಾವಗಿಯಿಂದ ಕುಳೆಕುಮಟಗಿ ಹಾಗೂ ಕುಳೆಕುಮಟಗಿ ಯಿಂದ ಬಗಲೂರ ಬ್ರಿಡ್ಜ್ ವರೆಗೆ ರಸ್ತೆ ಡಾಂಬರೀಕರಣ ಕಳಪೆ ಮಟ್ಟದ ಕಾಮಗಾರಿ ,ಬಗಲೂರ ನಾರಾಯಣಪೂರ, ಕಕ್ಕಳಮೇಲಿ ಯಿಂದ ಸಿರಸಗಿ ಗುಂಪಾದವರೆಗೆ ಹಾಗೂ ಬಗಲೂರ ಸಿರಸಗಿ ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ತಾಲೂಕಿನ ಬಗಲೂರ ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ ವೃತ್ತದಲ್ಲಿ ವಿವಿಧ ಪ್ರತ್ತಿಪರ ಸಂಘಟನೆಗಳು ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಿದರು.

ನಂತರ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿ.ಎಸ್.ಎಸ್(ಸಮತಾವಾದ) ವಿಜಯಪೂರ ಜಿಲ್ಲಾ ಸಂಚಾಲಕ ಧರ್ಮರಾಜ ಯಂಟಮನ ಮಾತನಾಡಿ, ತಾಲೂಕಿನ ದೇವರನಾವಗಿ ಯಿಂದ ಕುಳೆಕುಮಟಗಿ, ಹಾಗೂ ಕುಳೆಕುಮಟಗಿ ಯಿಂದ ಬಗಲೂರ ಬ್ರಿಡ್ಜ್ ವರೆಗೆ ರಸ್ತೆ ಡಾಂಬರಿಕರಣ ಕಳಪೆ ಮಟ್ಟದ ಕಾಮಗಾರಿ, ಬಗಲೂರ ನಾರಾಯಣಪೂರ, ಕಕ್ಕಳಮೇಲಿ ಯಿಂದ ಸಿರಸಗಿ ಗುಂಪಾದವರೆಗೆ ಹಾಗೂ ಬಗಲೂರ ಸಿರಸಗಿ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರ ಕೈಕೊಂಡಿರುವ ರಸ್ತೆ ಕಾಮಗಾರಿಗಳನ್ನು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು ಇದಕ್ಕೆ ಬಳಸಲಾಗುತ್ತಿರುವ ಸಾಮಗ್ರಿಗಳು ಯಾವುದೆ ತರನಾದ ಗುಣ ನಿಯಂತ್ರಣದ(ಕ್ವಾಲಿಟಿ ಕಂಟ್ರೋಲ್) ಅಧಿಕಾರಿಗಳಿಂದ ಪರೀಕ್ಷೆ ಮಾಡದೆ ಬೇಕಾಬಿಟ್ಟಿಯಾಗಿ ಗುತ್ತಿಗೆದಾರರ ಜೊತೆ ಅಧಿಕಾರಿಗಳು ಮಿಲಾಪಿಯಾಗಿ ತಮ್ಮ ಇಚ್ಚೆಯಂತೆ ಬಳಕೆ ಮಾಡಿದ್ದು ಕಂಡುಬಂದಿದೆ, ಇದರಲ್ಲಿ ಹೊಸ ಸಿ.ಡಿ (ಸೇತುವೆ)ಗಳ ಮಾಡದೆ ಹಳೆ ಸೇತುವೆಗಳ ಮೇಲೆ ರಸ್ತೆ ಅಗಲಿಕರಣ ಮಾಡಿದ್ದಾರೆ ಇದರಿಂದ ಈ ಕಾಮಗಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಬೇಕು ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರಾಸ್ತಾರೋಖೋ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

- Advertisement -

ಸಿದ್ದಣ್ಣ ಮಲ್ಲಪ್ಪ ಐರೋಡಗಿ ಮಾತನಾಡಿ, ಕಾಮಗಾರಿಗಳ ನಿಯಮ ಗಾಳಿಗೆ ತೂರಿ ತಮ್ಮ ಮನಸೋ ಇಚ್ಚೆ ಕಾಮಗಾರಿಯನ್ನು ಮಾಡುತ್ತಿದ್ದು ಇದನ್ನು ಗಮನಿಸಲಾಗಿ ಗುಣಮಟ್ಟವಿಲ್ಲದ ರಸ್ತೆ ಬೇಗನೆ ಹಾಳಾಗುವುದು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ನಿಂಗರಾಜ ವಾಲಿಕಾರ, ಬೀಮು ಮ್ಯಾಗೇರಿ ತಾಲೂಕಾ ಡಿ.ಎಸ್.ಎಸ್(ಸಮತಾವಾದ) ಅಧ್ಯಕ್ಷ ಸುನೀಲ ಮಾಗಣಗೇರಿ, ರೇವಣಸಿದ್ದ ಪಾಟೀಲ ಉಪಾಧ್ಯಕ್ಷ ಗ್ರಾ.ಪಂ ಬಗಲೂರ, ಮಡಿವಾಳ ನಡಕೂರ ಸಿರಸಗಿ, ಶ್ರೀಶೈಲ್ ವಗ್ಗೆ, ಲಕ್ಷ್ಮಣ ಗೌಂಡಿ, ಭೀಮರಾಯ ಕಟ್ಟಿಮನಿ, ಶರಣು ಮಳಗಿ, ರಮೇಶ ನಾಟಿಕಾರ, ಶ್ರೀಮಂತ ದೇವರಮನಿ, ಸಿದ್ರಾಮ ಮಾನೆಗಾರ ಮತ್ತು ಡಿ.ಎಸ್.ಎಸ್(ಸಮತಾವಾದ) ಹಾಗೂ ಬಗಲೂರ ಗ್ರಾಮದ ಪ್ರಗತಿ ಪರ ಸಂಘಟನೆಗಳಾದ ನಿಜಶರಣ ಅಂಬಿಗರ ಚೌಡಯ್ಯವರ ಹಿತರಕ್ಷಣಾ ಸಮಿತಿ, ಬಾಬು ಜಗಜೀವನರಾವ ಯುವಕ ಸಂಘ, ಶ್ರೀ ಭಕ್ತ ಕನಕದಾಸ ಯುವಕ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ಪ್ರಮುಖರು ನೂರಾರು ಸಂಖ್ಯೆಯಲ್ಲಿ ಕೂಡಿದ ಪ್ರತಿಭಟನಾಕಾರರು ಕಳಪೆ ಕಾಮಗಾರಿಯ ವಿರುದ್ಧ ಆಕ್ರೋಶ ಹೊರಹಾಕಿದರು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group