ಸಿಂದಗಿ: ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಏ. 4 ಮತ್ತು 5 ರಂದು ಸುರಿದ ಅಕಾಲಿಕ ರಭಸದ ಗಾಳಿ ಹಾಗೂ ಸುರಿದ ಮಳೆಯಿಂದ ಸುಮಾರು ಹದಿನೈದು ಲಿಂಬೆ ಮರಗಳು ನೆಲಕ್ಕೆ ಉರುಳಿದ್ದು ಲಿಂಬೆಯ ಸಣ್ಣ ಮಿಡಿ ಕಾಯಿಗಳು ಉದುರಿ ತುಂಬಾ ಹಾನಿಯಾಗಿದೆ ಕೂಡಲೇ ಅಧಿಕಾರಿಗಳು ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಎಸ್ ಅಲ್ಲಾಪೂರ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಕಕ್ಕಳಮೇಲಿ ಗ್ರಾಮದ ರೈತ ದಯಾನಂದ ಕುನ್ನೂರ ರವರು ನೇರವಾಗಿ ದೂರವಾಣಿ ಸಂಪರ್ಕದಿಂದ ಮಾತನಾಡಿದಾಗ ತಕ್ಷಣವೇ ಈ ಕಾರ್ಯಕ್ಕೆ ಸ್ಪಂದಿಸಿ ಹೊಲಕ್ಕೆ ಭೇಟಿ ನೀಡಿ, ತಹಶೀಲ್ದಾರ, ಶಿರಸ್ತೇದಾರ, ತಲಾಠಿಗಳಿಗೆ ಹಾಗೂ ತೋಟಗಾರಿಕಾ ಅಧಿಕಾರಿಗಳಿಗೂ ಮಾತನಾಡಿ ರೈತನ ಲಿಂಬೆ ಮರಗಳ ಸರ್ವೇ ಮಾಡಿ ಪಂಚನಾಮೆ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಅಭಿವೃದ್ದಿ ಮಂಡಳಿ ಅಧ್ಯಕ್ಷರು ಆದೇಶಿಸಿದರು.
ಅಲ್ಲದೆ ಈ ರೀತಿಯಾಗಿ ಕೆಲವು ರೈತರ ಜಮೀನುಗಳಲ್ಲಿ ಅಕಾಲಿಕ ಮಳೆಗೆ ಹಾನಿಯಾದ ಬಗ್ಗೆ ವರದಿ ಸಂಗ್ರಹಿಸಿ ರೈತರಿಗೆ ಸಹಾಯ ಕಲ್ಪಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ರೈತರಾದ ಆರ್ ಬಿ ಸಾಂಬಾ, ಶಿವಶರಣ ಹೆಗ್ಗಣದೊಡ್ಡಿ, ರವಿ ಕಟಗೆ, ಸಾಯಬಣ್ಣ ದೇವರಮನಿ, ರಾಮಚಂದ್ರ ಹವಳಗಿ, ಮಲ್ಲು ಗಾಣಿಗೇರ, ಸಿದ್ದು ಬಿರಾದಾರ ಉಪಸ್ಥಿತರಿದ್ದರು.