- Advertisement -
ಮೂಡಲಗಿ: ತಾಲೂಕು ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಯುಎಸ್‍ಎಐಡಿ ಅನುದಾನದೊಂದಿಗೆ ಕೆಎಚ್‍ಪಿಟಿ ಸಂಸ್ಥೆಯಿಂದ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರವನ್ನು ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ತಾಲೂಕಿನ 20 ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ನಿರ್ವಹಣೆಯ ತರಬೇತಿ ನೀಡಿ ಕಿಟ್‍ಗಳನ್ನು ಹಸ್ತಾಂತರಿಸಲಾಯಿತು. ತಾಲೂಕಾ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನ್ನವರ ಮತ್ತು ಚಿಕ್ಕ ಮಕ್ಕಳ ತಜ್ಞರಾದ ಡಾ. ಜಗದೀಶ ಜಿಂಗಿ ಅವರು ಕೋವಿಡ್ ಕಿಟ್‍ಗಳ ನಿರ್ವಹಣೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಬಿಎಚ್‍ಇಓ ಬಸನಗೌಡ ಈಶ್ವರಪ್ಪಗೋಳ ಸಂಯೋಜಕ ಶಿರೆಪ್ಪಗೋಳ ಭಾಗವಹಿಸಿದ್ದರು. ಆಯಾ ಪಂಚಾಯತ ಅಧ್ಯಕ್ಷರು, ಅಭಿವೃದ್ದಿ ಅಧಿಕಾರಿಗಳು,ಆಶಾ ಕರ್ಯಕರ್ತೆಯರು ಇದ್ದರು.