HomeUncategorizedಕಲಿಯುಗದ ಹರನೇ, ಮರ..!

ಕಲಿಯುಗದ ಹರನೇ, ಮರ..!

ಸುರನದಿ ಗಂಗೆಯನ್ನು ಭೂಲೋಕಕ್ಕೆ ತರಲು ಭಗೀರಥ ಪ್ರಯತ್ನ ಮಾಡುತ್ತಾನೆ. ಭೂಮಿಗೆ ಬರಲೊಪ್ಪದ ಗಂಗೆ, ತಾನು ಧುಮ್ಮಿಕ್ಕುವ ರಭಸದ ವೇಗಕ್ಕೆ ಭೂಮಿ ನುಚ್ಚು ನೂರಾಗುವ ಸಾಧ್ಯತೆಯನ್ನು ಭಗೀರಥನಿಗೆ ತಿಳಿಹೇಳುತ್ತಾಳೆ.

ಛಲ ಬಿಡದ ಭಗೀರಥ ಹರನನ್ನು ಪ್ರಾರ್ಥಿಸಿ, ಹರ ತನ್ನ ಜಟೆ ಯಲ್ಲಿ ಸುರನದಿಯನ್ನು ತಡೆದು ಹನಿಹನಿಯಾಗಿ ಬಿಡುತ್ತಾನೆ. ಗಂಗಾಧರ ನಾಗುತ್ತಾನೆ..!

ವ್ಯಥಿತಳಾದ ಗಂಗೆ ಶಿವನನ್ನು ಕುರಿತು ತಾನು ಕಲಿಯುಗದಲ್ಲಿ ಹಿಮ ಪಾತವಾಗಿ, ಪ್ರವಾಹವಾಗಿ, ಬರವಾಗಿ, ಚಂಡ ಮಾರುತವಾಗಿ ಸೇಡು ತೀರಿಸಿಕೊಳ್ಳುವ ಎಚ್ಚರಿಕೆ ನೀಡುತ್ತಾಳೆ!

ಅತ್ತ ಸಮುದ್ರ ಮಥನದ ಕಾಲದಲ್ಲಿಯೂ ಸರ್ಪರಾಜ ವಾಸುಕಿಯ ಪ್ರಯತ್ನಕ್ಕೆ ವಿರೋಧವಾಗಿ ಈಶ್ವರನು ದೇವತೆಗಳ ಕೋರಿಕೆ ಮೇರೆಗೆ ವಾಸುಕಿ ಕಕ್ಕಿದ ಘೋರ ವಿಷವನ್ನು ಕುಡಿದು, ನಿಗ್ರಹಿಸಿ,ಕುಡಿದು ವಿಷಕಂಠನಾಗುತ್ತಾನೆ..!

ಗಂಗೆಯಂತೆ ವಾಸುಕಿ ಸಹಾ ತಾನು ಮುಂದೆ ಕಲಿಯುಗದಲ್ಲಿ ಕೈಗಾರಿಕೆಗಳಾಗಿ, ವಾಹನಗಳಾಗಿ ರೂಪತಾಳಿ ವಿಷಾನಿಲವನ್ನು ಕಕ್ಕಿ ಪರಿಸರ ನಾಶಮಾಡುವುದಾಗಿ ಹೇಳುತ್ತಾನೆ.

ಹರ ನಸುನಕ್ಕು ಹೇಳುತ್ತಾನೆ; ನಾನು ಕಲಿಯುಗದಲ್ಲಿ ಲೋಕ ಕಲ್ಯಾಣಕ್ಕಾಗಿ ಅಸಂಖ್ಯಾತ ಮರಗಳಾಗಿ ಅವತರಿಸಿ ಆ ಎರಡೂ ಪ್ರಭಾವಗಳನ್ನು ನಿಗ್ರಹಿಸಿ ಲೋಕಕಲ್ಯಾಣ ಮಾಡುತ್ತೇಸಂವಾದಂ ಹಾಗಾಗಿ ಕಲಿಯುಗದಲ್ಲಿ ಯಾರು ಮರಗಿಡಗಳನ್ನು ಪೋಷಿಸಿ, ಪೂಜಿಸಿ, ಬೆಳೆಸಿ ಉಳಿಸುತ್ತಾರೋ ಅವರು ನನ್ನನ್ನೇ ಪೂಜಿಸಿದಂತೆ..

ಅನ್ನುವಲ್ಲಿ ಅರಣ್ಯ ಪುರಾಣದಲ್ಲಿನ ವೃಕ್ಷ ಕಾಂಡ ದಲ್ಲಿನ ಶಿವ – ಗಂಗಾ – ವಾಸುಕಿ ಸಂವಾದಂ ಸಂಪೂರ್ಣಂ…!

– ಡಾ. ಹೆಚ್ ಎಸ್ ಸುರೇಶ್ 9448027400

RELATED ARTICLES

Most Popular

error: Content is protected !!
Join WhatsApp Group