- Advertisement -
ಬೀದರ – ರಾಜ್ಯದ ಅರಣ್ಯ ಸಚಿವರು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿ ಪರಿಸರ ಉಳಿಸಿ ಎಂದು ಕರೆಕೊಡುತ್ತಾರೆ ಆದರೆ ಅವರದೇ ಉಸ್ತುವಾರಿಯ ಬೀದರ ಜಿಲ್ಲೆಯಲ್ಲಿ ದಾರಿ ಪಕ್ಕದ ಮರಗಳ ಮಾರಣಹೋಮ ನಡೆದಿದ್ದು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ನೋಡಬೇಕು.
ಜಿಲ್ಲೆಯ ಹುಮನಾಬಾದ ಪಟ್ಟಣದ ಚನ್ನಕೇರಾ ಕ್ರಾಸ್ ಶ್ರೀ ವೆಂಕಟೇಶ್ವರ ಗೋಲ್ಡನ್ ಸಿಟಿ ಡೆವೆಲಪರ್ ಹೈದರಾಬಾದ್ ಕಂಪನಿಗೆ ದಾರಿ ಮಾಡಿಕೊಡಲು ಸ್ವತಃ ಅರಣ್ಯ ಅಧಿಕಾರಿಗಳೇ ಮರಗಳನ್ನು ಕಡಿಯಲು ಮುಂದಾಗಿದ್ದು ಸಾರ್ವಜನಿಕರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.
ಒಂಬತ್ತು ನೀಲಗಿರಿ ಹಾಗೂ ಎರಡು ಬೇವಿನ ಮರಗಳನ್ನು ಕತ್ತರಿಸಿ ಹಾಕಲಾಗಿದ್ದು ಅರಣ್ಯ ಸಚಿವರ ಪರಿಸರ ಕಾಳಜಿಯನ್ನು ವ್ಯಂಗ್ಯ ಮಾಡುವಂತಿದೆ.
ಸಚಿವರ ತವರು ಜಿಲ್ಲೆಯಲ್ಲಿಯೇ ನಡೆದಿರುವ ಮರಗಳ ಮಾರಣಹೋಮದ ಪ್ರಕರಣದ ಬಗ್ಗೆ ಸರ್ಕಾರ ಹಾಗು ಸಚಿವರು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕು.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ