ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ 82 ನಿವೃತ್ತ ಶಿಕ್ಷಕರಿಗೆ ಸನ್ಮಾನ

Must Read

ಸಿಂದಗಿ: ಗುರುವಿನ ಗುಲಾಮನಾಗುವ ತನಕ ಸಿಗುವುದಣ್ಣ ಮುಕುತಿ ಎನ್ನುವಂತೆ ತಾವೆಲ್ಲರು ಮೊದಲು ಗುರುವಿನ ಗುಲಾಮರಾಗಿ ಕೆಲಸ ಮಾಡಿ ಯಶಸ್ಸು ಎನ್ನುವುದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ  ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ಸವಿ ನೆನಪಿಗಾಗಿ ಹಮ್ಮಿಕೊಂಡ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ನಾವು ಎಷ್ಟು ವರ್ಷ ಬದುಕಿರುತ್ತೇವೆ ಎನ್ನುವುದು ಮುಖ್ಯವಲ್ಲ ಬದುಕಿರುವಷ್ಟು ದಿನ ಏನನ್ನು ಸಾಧನೆ ಮಾಡಿದ್ದೇವೆ ಎನ್ನುವುದು ಬಹುಮುಖ್ಯ ಎಂದರು.

ಜೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ಡಾ, ಬಾಬಾಸಾಹೇಬ ಅಂಬೇಡ್ಕರ್‍ ಅವರು ಹೇಳಿದಂತೆ ಶಿಕ್ಷಣ ಎನ್ನುವುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದ ವಿದ್ಯಾಥಿಗಳು ಘರ್ಜಿಸಲೇಬೇಕು ಆ ನಿಟ್ಟಿನಲ್ಲಿ ವಿದ್ಯಾಥಿಗಳಾದ ತಾವುಗಳು ಹೊಲಸು ವ್ಯಸನಗಳಿಂದ ದೂರವಿದ್ದು ತಮ್ಮ ಪಾಲಕರು ಹಾಗೂ ಬೋದಕರು ತಮ್ಮ ಮೇಲೆ ಇಟ್ಟಿರುವ ಆಶೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿಧ್ಯಾಬ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಶರಣಪ್ಪ ಸುಣಗಾರ, ಕಾಂಗ್ರೇಸ್ ಮುಖಂಡ ಆಶೊಕ ಮನಗೂಳಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಬೋಧಿಸಿದರೆ ಸಾಲದು ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದರ ಜೊತೆಗೆ ಸಂಸ್ಕಾರ ನೀಡಬೇಕು. ಅದರಂತೆ ವಿದ್ಯಾರ್ಥಿಗಳು ಪಾಲಕರ, ಶಿಕ್ಷಣ ಸಂಸ್ಥೆಯ ಹೆಸರು ತಂದು ಸಮಾಜದ ಗೌರವಕ್ಕೆ ಪಾತ್ರರಾಗಬೇಕು ಎಂದು ತಿಳಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ ಜೇರಟಗಿ ವಿರಕ್ತಮಠದ ಮಹಾಂತ ಸ್ವಾಮಿಗಳು ಆಶಿರ್ವಚನ ನೀಡಿದರು.

ಈ ಸಂದರ್ಭದಲ್ಲಿ 82 ನಿವೃತ್ತ ಶಿಕ್ಷಕರಿಗೆ ಹಾಗೂ 2021-22ನೇ ಸಾಲಿನ ಎಸ.ಎಸ.ಎಲ್.ಸಿ ಹಾಗೂ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಶೇ. 95 ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಲ್ಪವೃಕ್ಷ ವಿದ್ಯಾ ಸಂಸ್ಥೆಯಿಂದ ಸನ್ಮಾನಿಸಿದರು.

ಗಮನ ಸೆಳೆದ ನೃತ್ಯ:

ಕಾರ್ಯಕ್ರಮದ ಮಧ್ಯದಲ್ಲಿ ಪಿಯುಸಿ ವಿದ್ಯಾರ್ಥಿನಿ ಪ್ರಿಯಾಂಕಾ ಮಾಡಿದ ಭರತ ನಾಟ್ಯ  ಪಾಲಕರ ಹಾಗೂ ಗಣ್ಯರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ತಾಲೂಕ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಎಸ್.ಎಚ್.ದುಳಬಾ, ಎಸ್.ಬಿ.ಬಿರಾದಾರ, ಐ.ಜಿ.ಕೋಣಶಿರಸಗಿ, ಬಿ.ಎಸ್.ಬಿರಾದಾರ, ಸಿದ್ರಾಮಪ್ಪ ಬಿರಾದಾರ, ಸಿದ್ದನಗೌಡ ಗುತ್ತರಗಿ, ನಿಂಗಣ್ಣ ಅಗಸರ್, ಜಿಲಾನಿ ನಾಗಾವಿ ಸೇರಿದಂತೆ ವಿದ್ಯಾಥಿಗಳ ಪಾಲಕರು ವಿದ್ಯಾರ್ಥಿಗಳು ಹಾಗೂ ಕಲ್ಪವೃಕ್ಷ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ಇದ್ದರು.

Latest News

ವಿಮರ್ಶೆಯಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅನ್ಯಾಯ ; ವಿಚಾರ ಗೋಷ್ಠಿ,

ವಿಮರ್ಶೆಯಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅನ್ಯಾಯ ಸಂವಾದ ಹಾಗೂ ಸ್ತ್ರೀಸಂವೇದನಗಳ ಬಗ್ಗೆ ಕವಿಗೋಷ್ಠಿ ಕಾರ್ಯಕ್ರವನ್ನು ಹಾಸನ ಜಿಲ್ಲಾ ಬರಹಗಾರರ ಸಂಘದ ವತಿಯಿಂದ ಡಿ. 07 - ಭಾನುವಾರ...

More Articles Like This

error: Content is protected !!
Join WhatsApp Group