- Advertisement -
ಮೂಡಲಗಿ: ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಯತ್ನ ದಿಂದ ಅರಭಾವಿಮಠದಿಂದ ಸಂಗನಕೇರಿ ರಸ್ತೆಯ ಅಭಿವೃದ್ಧಿಗೆ ಪಿಆರ್‍ಎಎಂಎಸಿ ಯೋಜನೆ ಅಡಿಯಲ್ಲಿ ಮಂಜೂರಾದ 2.5 ಕೋಟಿ ರೂಗಳ ಮೊತ್ತದ ಕಾಮಗಾರಿಗೆ ಭೂಮಿ ಪೂಜಾ ಸಮಾರಂಭ ಅರಭಾವಿ ಪುಣ್ಯಾರಣ್ಯ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಿತು.
ಯುವ ನಾಯಕ ಸರ್ವೋತ್ತಮ ಭೀ. ಜಾರಕಿಹೊಳಿ ಅವರು ಭೂಮಿ ಪೂಜೆಯನ್ನು ನೆರವರಿಸಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನಸಾಮಾನ್ಯರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅರಬಾವಿ ಕ್ಷೇತ್ರದಲ್ಲಿನ ರಸ್ತೆಗಳನ್ನು ಮುತ್ತವರ್ಜಿ ವಹಿಸಿ ಸುಧಾರಣೆ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯರಾದ ನಾಗಪ್ಪ ಶೇಖರಗೋಳ, ಮಲ್ಲಿಕಾರ್ಜುನ ಯಕ್ಸಂಬಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ ಸರ್ವ ಸದಸ್ಯರು, ಊರಿನ ಮುಖಂಡರು, ಯುವಕರು, ರೈತ ಸಂಘದ ಪದಾಧಿಕಾರಿಗಳು, ಗುತ್ತಿಗೆದಾರ ಬಸವಂತ ದಾಸನವರ ಮತ್ತಿತರರು ಉಪಸ್ಥಿತರಿದ್ದರು.