ಸಿಂದಗಿ– ಕರ್ನಾಟಕ ರಾಜ್ಯ ಸಂಸ್ಥೆಯಾದ ಕರ್ನಾಟಕ ಜನಸ್ಪಂದನ ಟ್ರಸ್ಟ್ ಬೆಂಗಳೂರು ರವರು ಕೊಡಮಾಡುವ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಿಂದಗಿಯ ಮೂವರು ಕರ್ನಾಟಕ ರಾಜ್ಯ ಮಟ್ಡದ ಕಾಯಕ ರತ್ನ ರಾಜ್ಯ ಪ್ರಶಸ್ತಿಪಡೆದುಕೊಂಡಿದ್ದಾರೆ.
ವಿಶೇಷವಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಹೇಶ ಸಿದ್ದಾಪೂರ ಮತ್ತು ರಾಜಕೀಯ ಹಾಗೂ ಸಾಮಾಜಿಕ ಸೇವೆಯಲ್ಲಿ ಮಂಜುನಾಥ ದೊಡಮನಿ ಜಾಂಭವ ಯುವ ಸೇನೆ ಜಿಲ್ಲಾಧ್ಯಕ್ಷರು ವಿಜಯಪುರ.
ಶ್ರೀಮತಿ ಅನಸುಯಾ ಪರಗೊಂಡ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿ ಸಿಂದಗಿ ಇವರು ದಿನಾಂಕ 23-07-2023 ರಂದು ಬೆಂಗಳೂರಿನಲ್ಲಿ ಕೊಡಮಾಡಲ್ಪಟ್ಟ ಕರ್ನಾಟಕ ಜನಸ್ಪಂದನಾ ಟ್ರಸ್ಟ್ ಬೆಂಗಳೂರು ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹಣಮಂತ ಮೆಡೆಗಾರ ಹಾಗೂ ವಿವಿಧ ಗಣ್ಯ ಮಾನ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಾಯಬಣ್ಣ ದೇವರಮನಿ, ಶ್ರೀಮತಿ ಹುಲಿಗೆಮ್ಮ ಶಿವಪ್ಪ ಭಜಂತ್ರಿ, ಲಕ್ಷ್ಮೀ ಅಶೋಕ ಭಜಂತ್ರಿ, ಡಾ||ಸುಷ್ಮಾ ಬಿರಾದಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕತರಾದ ಮೂವರಿಗೂ ಸ್ಥಳೀಯ ಸಾಮಾಜಿಕ ಹೋರಾಟಗಾರರರಾದ ರಾಜಕುಮಾರ ಭಾಸಗಿ, ಏಕನಾಥ ದೊಶ್ಯಾಳ, ರಾಮು ವಗ್ಗರ, ಕಾರ್ತಿಕ ದೇವರಮನಿ, ನಾಗು ಕಟ್ಟಿಮನಿ, ಪರಸುರಾಮ ಗೊರವಗುಂಡಗಿ, ನಿತ್ಯಾನಂದ ಕಟ್ಟಿಮನಿ, ರಾಯಪ್ಪ ಬಡಿಗೇರ ಇವರು ಅಭಿನಂದಿಸಿದ್ದಾರೆ