spot_img
spot_img

ಬಿದರಿ ಕಲೆಯಿಂದ ಸಿಂಗಾರಗೊಂಡ ಮತಗಟ್ಟೆಗಳು

Must Read

- Advertisement -

ಬೀದರ – ಇಡೀ ರಾಜ್ಯದಲ್ಲಿ ಮೊಟ್ಟಮೊದಲ ಸುಂದರವಾದ ಮತದಾನ ಕೇಂದ್ರವೆಂದರೆ ಬೀದರ ಜಿಲ್ಲೆಯ ಎರಡು ಕೇಂದ್ರಗಳು. ಜಿಲ್ಲೆಯ ಪ್ರಸಿದ್ಧ ಬಿದರಿ‌ ಕಲೆಗೆ ಪ್ರಾಶಸ್ತ್ಯ ನೀಡಲು ಬೀದರ್ ನಗರದಲ್ಲಿ ಬಿದರಿ ಕಲೆಯಿಂದ ಸಿಂಗರಿಸಲಾಗಿದೆ.

ಬೀದರ ಜಿಲ್ಲೆಯ ಅಪರೂಪದ ಕಲೆ ಬಿದರಿ ಕಲೆ. ಈ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಡಳಿತವು ಮತಗಟ್ಟೆಗಳನ್ನು ಬಿದರಿ ಕಲೆಯಿಂದ ಶೃಂಗರಿಸಿದ್ದು ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಅಲ್ಲದೆ ಇತ್ತೀಚೆಗೆ ಬಿದರಿ ಕಲೆಗೆ ಕೇಂದ್ರದ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಷಾ ರಶೀದ ಅಹ್ಮದ ಖಾದ್ರಿಯವರು ಪ್ರತಿಭಾವಂತ ಕಲಾವಿದರನ್ನು ಗುರುತಿಸುವ ಕೇಂದ್ರದ ಮೋದಿ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದರು.

- Advertisement -

ಬೀದರ ಹಾಗೂ ಬೀದರ ಉತ್ತರ ಕ್ಷೇತ್ರಗಳ ಎರಡು ಮತಗಟ್ಟೆಗಳನ್ನು ಬಿದರಿ ಚಿತ್ರ ಕಲೆಯಿಂದ ಸಿಂಗರಿಸಲಾಗಿದೆ. ಇದರಿಂದ ಮತ ಹಾಕಲು ಬಂದ ಜನರಿಗೆ ಬಿದರಿ ಕಲೆಯ ಪರಿಚಯವಾಗುತ್ತದೆ ಎಂದು ಚುನಾವಣಾಧಿಕಾರಿ ಹೇಳಿದರು.

ಇದೀಗ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮತದಾನ ಸಿದ್ಧತೆ ನಡೆಯುತ್ತಿದ್ದು ಬೀದರ್ ಜಿಲ್ಲೆಯಲ್ಲಿ 13 ಲಕ್ಷದ 75 ಸಾವಿರದ 169 ಮತದಾರರು ಮತಚಲಾಯಿಸಲಿದ್ದಾರೆ.

ಜಿಲ್ಲೆಯಾದ್ಯಂತ 42 ತೃತೀಯ ಲಿಂಗಿಗಳು, 7 ಲಕ್ಷದ 10 ಸಾವಿರದ  403 ಪುರುಷ ಮತದಾರರು, 6 ಲಕ್ಷದ 64 ಸಾವಿರದ 724 ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ 1506 ಮತಗಟ್ಟೆಗಳಿದ್ದು, ವಿಶೇಷವಾಗಿ 44 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ 5 ಪಿಂಕ್ ಮತಗಟ್ಟೆಗಳು ಹಾಗೂ ಪ್ರತಿ‌ಕ್ಷೇತ್ರದಲ್ಲಿ ತಲಾ ಒಂದು ಯಂಗ್ ಪೊಲೀಂಗ್ ಸ್ಟೇಷನ್, ದಿವ್ಯಾಂಗಚೇತನರಿಗಾಗಿ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ.

- Advertisement -

ಇನ್ನು ಬಿದರಿ‌ಕಲೆಗೆ ಪ್ರಾಶಸ್ತ್ಯ ನೀಡಲು ಬೀದರ್ ನಗರದಲ್ಲಿ 2 ಬಿದರಿ‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇಡೀ ರಾಜ್ಯದಲ್ಲಿ ಮೊಟ್ಟಮೊದಲ ಸುಂದರವಾದ ಮತದಾನ ಕೇಂದ್ರ ಇವು ಎಂದು ಹೇಳಬಹುದು.

ಬಿದರಿ ಕಲೆಯಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತರು ಬೀದರ್ ಜಿಲ್ಲೆಯವರಾದ ಹಿನ್ನೆಲೆಯಲ್ಲಿ ಮತದಾನ ಕೇಂದ್ರವನ್ನು ಬಿದರಿ ಕಲೆ ಥರ ಜಿಲ್ಲಾಡಳಿತ ಸಿದ್ದ ಪಡಿಸಿದ್ದು ಜಿಲ್ಲೆಯಲ್ಲಿ 1506 ಮತಗಟ್ಟೆಗಳಿದ್ದು, ಅದರಲ್ಲಿ 348 ಸೂಕ್ಷ್ಮ ಹಾಗು 24 ಅತಿಸೂಕ್ಷ್ಮ ಮತಗಟ್ಡೆಗಳನ್ನಾಗಿ ಪರಿಗಣಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ ವಿವಿ ಪ್ಯಾಟ್ ಹಾಗು ಚುನಾವಣಾ ಸಿಬ್ಬಂದಿಗಳು‌ ತೆರಳಿದ್ದು, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಿ ನಿಗಾ ವಹಿಸಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ನಮ್ಮ ಊರ ಜಾತ್ರೆಯೊಂದನ್ನು ನಿಮ್ಮ ಬದುಕಿನ ಯಾತ್ರೆಗೆ ಹೋಲಿಸುತ್ತ….

ಹಾಯ್, ಹಲೋ, ನಮಸ್ಕಾರ...ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ...
- Advertisement -

More Articles Like This

- Advertisement -
close
error: Content is protected !!
Join WhatsApp Group