ಸಿಂದಗಿ: ದೇಶ ಪದೇ ಪದೇ ಚುನಾವಣೆಗಳನ್ನು ಕಾಣುತ್ತಿದೆಯಾದರೂ, ಮಕ್ಕಳಿಗೆ ಚುನಾವಣೆಯ ಮತದಾನದ ದಿನ ರಜೆ ಪಡೆಯುವ ಅನುಭವ ಮಾತ್ರವಿತ್ತು. ನಡೆದ ಚುನಾವಣೆಯಲ್ಲಿ ಮಕ್ಕಳೇ ಮತದಾರರಾಗಿದ್ದರು, ಅಭ್ಯರ್ಥಿಗಳಾಗಿದ್ದರು ಮತ್ತು ಮತ ಎಣಿಕೆ ನಡೆದು ವಿಜೇತರ ಘೋಷಣೆಯಾಯಿತು.
ಇದು ಯಾವುದೇ ರೀತಿಯ ಅಣಕು ಚುನಾವಣೆಯಾಗಿರದೆ ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ನಾಯಕರನ್ನು ಜೂ. 12 ರಂದು ಚುನಾವಣೆ ಅಧಿಸೂಚನೆ ಹೊರಡಿಸುವುದರೊಂದಿಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿತ್ತು. 18 ಕ್ಕೆ ನಾಮಪತ್ರ ಸಲ್ಲಿಸಿದ ವಿದ್ಯಾರ್ಥಿಗಳು ಕೆಲವು ನಿಬಂಧನೆಗಳನ್ನು ದಾಟಿದರೆ ಮಾತ್ರ ನಾಮಪತ್ರ ಸಿಂಧು ಆಗುವ ನಿಯಮ ರೂಪಿಸಲಾಗಿತ್ತು ಎಂದು ಮಾಹಿತಿ ನೀಡುವ ಶಾಲೆಯ ಶಿಕ್ಷಕ, ಮುಖ್ಯ ಚುನಾವಣಾಧಿಕಾರಿ ಬಂದಾಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಮುಖ್ಯಗುರು ನಿಂಗನಗೌಡ ಪಾಟೀಲ , ಈ ವರ್ಷದ ಚುನಾವಣೆಯಲ್ಲಿ 5ನೇ ತರಗತಿಯಿಂದ 8 ನೇ ತರಗತಿ ಓದುತ್ತಿರುವವರಿಗೆ ಮಾತ್ರ ಅರ್ಹತೆ ಕೊಡಲಾಗಿತ್ತು. ಅವರಲ್ಲೂ 4 ನೇ ತರಗತಿ ಇಂದ 8 ನೇ ತರಗತಿಯಲ್ಲಿರಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಪಡೆದವರು, ಈ ಬಾರಿ ನಾಮಪತ್ರ ಸಲ್ಲಿಸಿದ 25 ಮಕ್ಕಳು ಜೂ. 15ರಂದು ನಡೆದ ಪರಿಶೀಲನೆ ಸಂದರ್ಭದಲ್ಲಿ ಷರತ್ತುಗಳನ್ನು ಸಮರ್ಥವಾಗಿ ಪೂರೈಸಿದರು ಎಂದರು.
ಜೂನ್ 17ರಿಂದ ಸ್ಪರ್ಧೆಯಲ್ಲಿದ್ದ ಕೆಲವು ವಿದ್ಯಾರ್ಥಿಗಳು ತಾವೂ ಪ್ರಚಾರಕ್ಕಿಳಿದರು. ಶುಕ್ರವಾರಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಯಿತು. ಶುಕ್ರವಾರ 2ರಿಂದ 3-30ರವರೆಗೆ ಮತದಾನ ನಡೆದರೆ 03-45ಕ್ಕೆ ಮತ ಎಣಿಕೆ ನಡೆಸಿ 04-30ಕ್ಕೆ ಫಲಿತಾಂಶ ಘೋಷಿಸಲಾಯಿತು. ಎಲ್ಲ ಚುನಾವಣಾ ಪ್ರಕ್ರಿಯೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಶಿಕ್ಷಕರಾದ ಎಂ.ಬಿ.ಕೋರವಾರ.ಚಂದ್ರಶೇಖರ ಬುಯ್ಯಾರ. ಸಿದ್ದಲಿಂಗಪ್ಪ ಪೊದ್ದಾರ. ಸುಮಗಂಲಾ ಕೆಂಬಾವಿ.ಪಿ.ವ್ಹಿ.ಕುಲಕರ್ಣಿ .ದೈ.ಶಿ ಮಲ್ಲಮ್ಮ ಹಿಪ್ಪರಗಿ. ಅಕ್ಷತಾ ಉಡಕೇರಿ. ಅತಿಥಿ ಶಿಕ್ಷಕಿ ಭಾಗ್ಯ ಶ್ರೀ ಸಿಂದಗಿ .ಪಟ್ಟಣದ ಪದ್ಮರಾಜ ಶಿಕ್ಷಣ ಮಹಾ ವಿದ್ಯಾಲಯ ದ್ವಿತೀಯ ವರ್ಷದ ಶಿಕ್ಷಕ ವಿದ್ಯಾರ್ಥಿಗಳಾದ ಸಚೀನ ರಾಠೋಡ.ಸಂತೋಷ ಬಡಿಗೇರ. ಶೃತಿ ಪೂಜಾರಿ. ಲಕ್ಷ್ಮೀ ರೂಗಿ. ಅಂಬಿಕಾ ವಾಲಿಕಾರ. ಅಕ್ಷತಾ ದೇಶಪಾಂಡೆ.ಸುಷ್ಮಾ ಕುಂಟೋಜಿಮಠ. ಮಂಜುಳಾ ಚಾವರ ಮೊದಲಾದವರು ಚುನಾವಣಾ ಕಾರ್ಯ ನಿರ್ವಹಿಸಿದರು.
ಚುನಾವಣಾ ವೀಕ್ಷಕರಾಗಿ ಪಾಲ್ಗೊಂಡ ಶಿಕ್ಷಕ ಸಾಹಿತಿ ಬಸವರಾಜ ಅಗಸರ ಮಕ್ಕಳಿಗೆ ಮತ ಹಾಕಲು ಮತಪತ್ರಗಳನ್ನು ಒದಗಿಸಿದರು. ಅದರಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ ಹಾಗೂ ಹೆಸರು ಮಾತ್ರ ನಮೂದಾಗಿತ್ತು. ಮತದಾನ ಮಾಡಿದ ಮಕ್ಕಳ ಬೆರಳಿಗೆ ಶಾಹಿ ಕೂಡ ಹಾಕಲಾಗಿತ್ತು. ಮತದಾನದ ನಂತರ ಮತ ಪೆಟ್ಟಿಗೆಯನ್ನು ಸ್ಟ್ರಾಂಗ್ ರೂಂಗೆ ತೆಗೆದುಕೊಂಡು ಹೋಗಲಾಗಿತ್ತು. ಈ ನಡುವಿನ ಸಮಯದಲ್ಲಿ ನಾನು ಮಕ್ಕಳಿಗೆ ಬೇರೆ ಬೇರೆ ದೇಶಗಳ ಚುನಾವಣಾ ವ್ಯವಸ್ಥೆ, ಜನಪ್ರತಿನಿಧಿಗಳಾಗುವವರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದೆ ಎಂದರು.
ಚುನಾವಣೆಯಲ್ಲಿ ಚಲಾವಣೆಯಾದ 466 ಮತಗಳಲ್ಲಿ ಅನೀಲ ನಾವಿ ಪ್ರಥಮ ಹಂತದ ಮತಗಳನ್ನು ಪಡೆದು ಶಾಲಾ ನಾಯಕರಾಗಿ ಚುನಾಯಿತರಾದರು. ಅಕೀತಾ ಬಿರಾದಾರ ಎರಡ ನೆಯ ಸ್ಥಾನಗಳಲ್ಲಿ .ಸಾವಿತ್ರಿ ಬಿರಾದಾರ. ಮೇಘಾ ನಾವಿ.ಗೊಲ್ಲಾಳ ದೇವರಮನಿ .ಶರಣಗೌಡ ಬಿರಾದಾರ . ಸುಚಿತ್ರಾ ಯಳಸಂಗಿ . ನಿಂಗರಾಜ ಬಿರಾದಾರ.. ಕಲ್ಪನಾ ಬೇಡರ. ಸುಷ್ಮೀತಾ ಬಿರಗೊಂಡ. ಆಯ್ಕೆಯಾದವರಿಗೆ ಪ್ರಮಾಣ ಪತ್ರ ನೀಡಿದರು .ಬಿ ಇಡ್ ಪ್ರಶಿಕ್ಷಾಣಾರ್ಥಿ ಲಕ್ಷ್ಮೀ ರೂಗಿ ಪ್ರಾರ್ಥನೆ ಗೀತೆ ಹೇಳಿದರು. ಅಂಬಿಕಾ ವಾಲಿಕಾರ ಸ್ವಾಗತಿಸಿದರು. ಸಚೀನ ರಾಠೋಡ ನಿರೂಪಿಸಿದರು.
ಸುಷ್ಮಾ ಕುಂಟೋಜಿಮಠ ವಂದಿಸಿದರು.