ಡಾ. ಭೀಮಣ್ಣ ಖಂಡ್ರೆಯವರಿಗೆ ಶೃದ್ಧಾಂಜಲಿ

Must Read
   ಸಿಂದಗಿ- ಡಾ.ಭೀಮಣ್ಣ ಖಂಡ್ರೆ ಅವರನ್ನು ಕಳೆದುಕೊಂಡ ಈ ನಾಡು ಬಡವಾಗಿದೆ ಅವರ ಬದುಕು ಅತ್ಯಂತ ದಕ್ಷತೆಯಿಂದ ಕೂಡಿತ್ತು ಅವರೊಬ್ಬರು ಅಜಾತಶತ್ರುವಾಗಿದ್ದರು ಎಂದು ನಗರದ ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.
   ಅವರು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿ ಶಿಕ್ಷಣ ಸಂಸ್ಥೆ ಶನಿವಾರ ಬೀದರನ ಲೋಕನಾಯಕ ಮಾಜಿ ಸಚಿವ ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಡಾ.ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
   ಅವರು ಕೇವಲ ರಾಜಕಾರಣ ಮಾತ್ರ ಮಾಡಿದವರಲ್ಲ ಜೊತೆಗೆ ಸಾಮಾಜಿಕ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದವರು. ಬಸವಣ್ಣನವರ ಅಪ್ಪಟ ಅನುಯಾಯಿಯಾಗಿ ವಚನ ಸಾಹಿತ್ಯವನ್ನು ಇಡಿ ರಾಜ್ಯಕ್ಕೆ ಪಸರಿಸಲು ಶ್ರಮಿಸಿದ್ದಾರೆ. ಬೀದರ ಜಿಲ್ಲೆಯನ್ನು ಕರ್ನಾಟಕದಲ್ಲಿಯೆ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಂತು ಆ ಪ್ರಯತ್ನದಲ್ಲಿ ಸಫಲರಾದವರು ಅವರ ಬದುಕಿನ ಹೊರಾಟ ಈ ನೆಲದಲ್ಲಿ ಚಿರಸ್ಥಾಯಿಯಾಗಿವೆ ಎಂದರು.
    ಈ ವೇಳೆ ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ, ಉಪನ್ಯಾಸಕರಾದ ಎಸ್.ಎ.ಪಾಟೀಲ, ಎಮ್.ಎನ್.ಅಜ್ಜಪ್ಪ, ಸಿದ್ದಲಿಂಗ ಕಿಣಗಿ, ಸತೀಶ ಬಸರಕೋಡ, ಎಸ್.ಎ.ಜಾಗಿರದಾರ, ಪ್ರದೀಪ ಕತ್ತಿ,  ಎನ್.ಆರ್.ಕುಲಕರ್ಣಿ, ಎಸ್.ಆರ್.ಬಿರಾದಾರ, ಎಸ್.ಬಿ.ಅಂಕಲಗಿ, ಎಸ್.ಎಮ್.ಹಿರೇಮಠ, ಜಿ.ಆಯ್.ಲೋಣಿ ಸೇರಿದಂತೆ ಇತರರು ಇದ್ದರು.
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group