spot_img
spot_img

ವೀರಣ್ಣ ಹೊಸೂರ ಅವರಿಗೆ ಶೃದ್ಧಾಂಜಲಿ

Must Read

- Advertisement -

ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀರಣ್ಣ ಈಶ್ವರಪ್ಪ ಹೊಸೂರ ಅವರು ಭಾನುವಾರ ಅಕಾಲಿಕ ನಿಧನರಾದ ಪ್ರಯುಕ್ತ ಸೋಮವಾರದಂದು ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶೃದ್ಧಾಂಜಲಿ ಸಭೆ ಜರುಗಿತು.

ಸಭೆಯಲ್ಲಿ ಪ್ರೊ.ಸಂಗಮೇಶ ಗುಜಗೊಂಡ ಅವರು ಮಾತನಾಡಿ, ನೇರ ನಿಷ್ಠುರ ಮಾತುಗಾರರಾಗಿದ್ದ ವೀರಣ್ಣ ಅವರು ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಎರಡುವರೆ ದಶಕಗಳ ಕಾಲ ನಿರ್ದೇಶಕರಾಗಿ ಶಿಕ್ಷಣ ಪ್ರೇಮಿಗಳಾಗಿ …ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳ ಬಗ್ಗೆ ಅಪಾರ ಕಳಜಿ ಹೊಂದಿದ್ದ ಅವರು ರಾಜಕೀಯ ಮುತ್ಸದ್ದಿಗಳೊಂದಿಗೆ ಒಡನಾಟವನ್ನು  ಹೊಂದಿದ್ದರು. 

ಅವರು ಇನ್ನೂ ಬಾಳಿ ಬದುಕಿ ಸಮಾಜ ಮುಖಿ ಕೆಲಸಗಳನ್ನು ಮಾಡಬೇಕಾಗಿತ್ತು, ಹೊಸೂರ ಅವರ ಅಗಲಿಕೆಯಂದಾದ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಆ ಭಗವಂತ ಕರುಣಿಸಲಿ ಎಂದರು.

- Advertisement -

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ  ಮಾತನಾಡಿ, ವೀರಣ್ಣ ಹೊಸೂರ  ಅವರು ಸುಮಾರು 25 ವರ್ಷಗಳ ಕಾಲ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರುಗಳಾಗಿ ಸೇವೆ  ಸಲ್ಲಿಸಿದ್ದಲ್ಲದೆ ಶಿಕ್ಷಣ, ಸಹಕಾರಿ ರಾಜಕೀಯ, ಸಾಂಸ್ಕೃತಿಕ, ಆಧ್ಯಾತ್ಮಿಕ ರಂಗದಲ್ಲಿ ಸೇವೆಸಲ್ಲಿಸಿದ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದರು.

ಇದೆ ಸಂಧರ್ಭದಲ್ಲಿ ವೀರಣ್ಣ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ 2 ನಿಮಿಷ ಮೌನಾಚಾರಣೆಯನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಡಾ.ಎಸ್.ಎಲ್.ಚಿತ್ರಗಾರ, ಪ್ರೊ.ಎಸ್.ಸಿ.ಮಂಟೂರ, ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಸಿ.ಪಾಟೀಲ, ಬಸವಂತ ಬರಗಾಲಿ, ಭಾರತಿ ತಳವಾರ, ವೆಂಕಟೇಶ ಪಾಟೀಲ, ಮನೋಹರ ಲಮಾಣಿ, ಲಕ್ಷ್ಮಣ ನಂದಿ, ಶ್ರೀಮತಿ ಸೇವಂತಿ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -

More Articles Like This

- Advertisement -
close
error: Content is protected !!
Join WhatsApp Group