- Advertisement -
ಬೆಳಗಾವಿ – ಪೂಜ್ಯ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾಗಿರುವದು ಇಡೀ ಮಾನವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರವಚನದ ಮುಖಾಂತರ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಜನರಿಂದ ನಡೆದಾಡುವ ದೇವರೆಂದು ಕರೆಸಿಕೊಂಡ ಶ್ರೀಗಳು ಯಾವುದೇ ಪ್ರಶಸ್ತಿಗಳನ್ನು ನಯವಾಗಿ ತಿರಸ್ಕರಿಸಿದ್ದರು. ಅಂತಹ ಮಹಾತ್ಮರನ್ನು ಕಳೆದುಕೊಂಡ ಸಮಾಜ ಆಧ್ಯಾತ್ಮಿಕವಾಗಿ ಬಡವಾಗಿದೆ ಎಂದು ಬರಹಗಾರರ ಬಳಗದಿಂದ ಶೃದ್ಧಾಂಜಲಿ ಸಲ್ಲಿಸುತ್ತ ಸಾಹಿತಿ ಸ.ರಾ.ಸುಳ್ಳುಡೆ ನುಡಿದರು.
ಪೂಜ್ಯರನ್ನು ಕುರಿತು ಬಸವರಾಜ ಗಾರ್ಗಿ, ನ್ಯಾಯವಾದಿ ಸಾಣಿಕೊಪ್ಪ, ಸಿ.ಎಂ. ಬೂದಿಹಾಳ, ಎಂ.ವಾಯ್. ಮೆಣಶಿನಕಾಯಿ, ಹಸಿರುಕ್ರಾಂತಿ ಸಂಪಾದಕರಾದ ಸಂಪತಕುಮಾರ ಮುಚಳಂಬಿ ಮಾತನಾಡಿದರು.
ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀಗಳ ಆತ್ಮಕ್ಕೆ ಶಾಂತಿ ಕೋರಲಾಯಿತು.