Homeಸುದ್ದಿಗಳುಕರೋನ ವ್ಯಾಕ್ಸಿನ್ ಪಡೆದು ಹನ್ನೆರಡು ವಿದ್ಯಾರ್ಥಿಗಳು ಅಸ್ವಸ್ಥ

ಕರೋನ ವ್ಯಾಕ್ಸಿನ್ ಪಡೆದು ಹನ್ನೆರಡು ವಿದ್ಯಾರ್ಥಿಗಳು ಅಸ್ವಸ್ಥ

ಬೀದರ್: ಜಿಲ್ಲೆಯ ಹುಮನಾಬಾದ್ ತಾಲ್ಲೂಕು ಹುಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ವ್ಯಾಕ್ಸಿನ ಪಡೆದ ಹತ್ತಿರದ ಜನತಾ ನಗರದ ಕಸ್ತುರಬಾಗಾಂಧಿ ಬಾಲಿಕಾ ವಸತಿಸಹಿತ ಹಿರಿಯ ಪ್ರಾಥಮಿಕ ಶಾಲೆಯ ೧೨ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.

ಲಸಿಕೆ ಪಡೆದ ನಂತರ ತಲೆ ಸುತ್ತುವುದು ಮತ್ತು ವಾಂತಿಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಹುಮನಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಸಿ.ಎಂ.ಒ ಅವರ ನೇತೃತ್ವದಲ್ಲಿ ತಜ್ಞವೈದ್ಯ ಡಾ.ಬಸವಂತರಾವ ಗುಮ್ಮೆದ ಚಿಕಿತ್ಸೆ ನೀಡಿದರು. ವಿದ್ಯಾರ್ಥಿಗಳು ಈಗ ಕೊಂಚ ಗುಣಮುಖರಾಗಿದ್ದು 3 ಗಂಟೆಯೊಳಗೆ ಮಕ್ಕಳನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಡಾ.ನಾಗನಾಥ ಹುಲಸೂರೆ ತಿಳಿಸಿದರು.

ಡಾ.ವಿಶ್ವ ಸೈನಿರ್, ಬಿಇಒ ಶಿವಗುಂಡಪ್ಪ ಸಿದ್ದಣ್ಣಗೋಳ್, ಬಿ.ಆರ್.ಸಿ ಶಿವಕುಮಾರ ಪಾರಶೆಟ್ಟಿ, ವಸತಿ ಶಾಲೆ ಪ್ರಾಚಾರ್ಯೆ ಸುಜಾತಾ ಬಡಿಗೇರ ಮತ್ತಿತರರು ಹಾಜರಿದ್ದರು.

ಈ ವೇಳೆ ವ್ಯಾಕ್ಸಿನ್ ಪಡೆದು ಯಾವುದೇ ಅಡ್ಡ ಪರಿಣಾಮವಾಗದೇ ಗುಣಮುಖಳಾದ ವಿದ್ಯಾರ್ಥಿನಿ ಯೋಗಿತಾ ಇತರೆ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ಗಮನ ಸೆಳೆದಳು.

RELATED ARTICLES

Most Popular

error: Content is protected !!
Join WhatsApp Group