ಬೀದರ್‌ ನಿಂದ ಚಾಮರಾಜನಗರದವರೆಗೆ ಅವಳಿ ಸಹೋದರರ ಸೈಕಲ್ ಸವಾರಿ

Must Read

ಬೀದರ – ಭಾರತ ಸ್ವಾತಂತ್ರ್ಯದ 75 ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ವರೆಗೆ ಅವಳಿ ಸಹೋದರರು ಸೈಕಲ್ ಸವಾರಿ ಮಾಡಿದ್ದಾರೆ‌.

ಬೀದರ್ ನ 16 ವರ್ಷದ ಅವಳಿ ಸಹೋದರರು ಜಿಲ್ಲೆಯ ಔರಾದ್‌ನಿಂದ ಚಾಮರಾಜನಗರದ ವರೆಗೆ ಸೈಕಲ್ ಯಾತ್ರೆ ಪ್ರಾರಂಭ ಮಾಡಿದ್ದು ಈ ಯುವಕರು 25 ದಿನಗಳ ಕಾಲ 1250 ಕಿಲೋಮೀಟರ್ ಸೈಕಲ್ ತುಳಿಯಲಿದ್ದಾರೆ.

ಔರಾದ್ ತಾಲೂಕಿನ ಕೊಳ್ಳೂರು ಗ್ರಾಮದ ಅರುಣ್ ಹಾಗೂ ಕರಣ್ ರ್ಯಾಕಲೆ ಎಂಬ ಅವಳಿ ಸಹೋದರರಿಂದ ಭಾರತದ ಸ್ವಾತಂತ್ರ್ಯದ 75 ವರ್ಷದ ಅಮೃತ ಮಹೋತ್ಸವ ನಿಮಿತ್ತ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿ ನಮನ ಸಲ್ಲಿಸುವ ಸದುದ್ದೇಶದಿಂದ ಈ ಸೈಕಲ್ ಯಾತ್ರೆ ನಡೆಯುತ್ತಲಿದೆಯೆಂಬುದಾಗಿ ಯುವಕರು ಹೇಳಿಕೊಂಡಿದ್ದಾರೆ

ಸೈಕಲ್ ಯಾತ್ರೆಯು ಬೀದರ್‌ ನಿಂದ ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ತುಮಕೂರು, ಬೆಂಗಳೂರು, ಮಂಡ್ಯ ಮೂಲಕ ಚಾಮರಾಜನಗರ ಮಲೆ ಮಹದೇಶ್ವರನ ಬೆಟ್ಟ ತಲುಪಲಿದ್ದು ಬಳಿಕ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಈ ಪುಟಾಣಿಗಳು ತಮ್ಮ ಸೈಕಲ್ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ.

ಯುವಕರ ಈ ಯಾತ್ರೆಯು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು ಗ್ರಾಮಸ್ಥರು, ಹಿರಿಯರು, ಮಕ್ಕಳಾದಿಯಾಗಿ ಎಲ್ಲರೂ ಸೇರಿಕೊಂಡು ಸಂಭ್ರಮದಿಂದ ಯುವಕರಿಗೆ ಮಾಲಾರ್ಪಣೆ ಮಾಡಿ ಬೀಳ್ಕೊಟ್ಟರು.


ವರದಿ: ನಂದಕುಮಾರ ಕರಂಜೆ,ಬೀದರ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group