ಬೆಳಗಾವಿ – ಚಿಂತನ ಚಾವಡಿ ವತಿಯಿಂದ ಗುರುವಾರ ದಿ. 18.12.2025 ರಂದು ಮುಂಜಾನೆ 11.30 ಕ್ಕೆ ಲಕ್ಷೀ ಪ್ರಿಂಟಸ೯ ಅಟೋನಗರ ಬೆಳಗಾವಿಯಲ್ಲಿ ಸ . ರಾ. ಸುಳಕೂಡೆಯವರ ಸಂಪ್ರತಿ ವಚನಗಳು ಮತ್ತು ಸಂಭೃತ ವಚನಗಳು ಮೃತ್ಯುಂಜಯಸ್ವಾಮಿಗಳು ಹಿರೇಮಠ ಹಿರಿಯಸಾಹಿತಿಗಳು ಗಂದಿಗವಾಡ ಅವರು ಲೋಕಾಪ೯ಣೆ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಯು.ಎನ್.ಸಂಗನಾಳಮಠ.ಹಿರಿಯ ಸಾಹಿತಿಗಳು ಸಾ ಹೊನ್ನಾಳಿ ದಾವಣಗೇರಿ ವಹಿಸಿಕೊಳ್ಳಲಿದ್ದಾರೆ. ಪುಸ್ತಕ ಪರಿಚಯವನ್ನು ಸವಿತಾ ವಿರುಪಾಕ್ಷಿ ಬೆಳಗಾವಿ ಮಾಡಲಿದ್ದಾರೆ. ಗೌರವ ಉಪಸ್ಥಿತಿ ವಿಜಯ ಮುಚಳಂಬಿ ಸಮತೊಲ ಪತ್ರಿಕೆ ಸಂಪಾದಕರು ಮತ್ತು ಅಶೋಕ ಉಳೆಗಡ್ಡಿ,ಸುರೇಶ ಹಂಜಿ,ಬಾಳಗೌಡ ದೂಡಬಂಗಿ,ಮಲ್ಲಿಕಾಜು೯ನ ಜುಗತಿ,ಬಿ ಕೆ ಮಲಾಬಾದಿ, ಸುರೇಶ ಸಕ್ರೆನ್ನವರ, ಬಿ ಬಿ ಮಠಪತಿ,ಇತರರು ಉಪಸ್ಥಿತರಿರಲಿದ್ದಾರೆ
ಎಂ ವೈ ಮೆಣಸಿನಕಾಯಿ ನಿರೂಪಣೆ ಮಾಡುವರು ಎಂದು ಚಿಂತನ ಚಾವಡಿ ಬಳಗ ತಿಳಿಸಿದ್ದಾರೆ.

