ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಮತ್ತು ಪರಸ್ಪರ ಸಹಯೋಗದಲ್ಲಿ ಡಾ .ಆರ್. ವೆಂಕಟಸುಬ್ಬಯ್ಯ ರವರ ಇಳಿ ವಯಸ್ಸಿನ ಸಂಜೆ ಹಾಗು ಡಾ. ಬಿ .ಪಿ ರಾಮಯ್ಯ ರವರ ಮಾರ ಮತ್ತು ಇತರ ಕಥೆಗಳು ಕಥಾಸಂಕಲನವನ್ನು ನಗರದ ಜೆ.ಸಿ.ರಸ್ತೆಯ ಕನ್ನಡ ಭವನ ನಯನ ಸಭಾಂಗಣದಲ್ಲಿ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಜನಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತ ತಳಸಮುದಾಯದ ತೊಳಲಾಟವನ್ನು ಉತ್ತಮ ಕಥಾಹಂದರವಾಗಿ ಚಿತ್ರಿಸಿರುವ ಈ ಕಥಾಸಂಕಲನ ಭಾವನಾತ್ಮಕವಾಗಿ ಓದುಗರನ್ನು ಸೆರೆಹಿಡಿದಿಡುತ್ತದೆ ಎಂದು ಅಭಿಪ್ರಾಯ ಪಟ್ಟರು .
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ , ಪರಸ್ಪರ ಅಧ್ಯಕ್ಷ ಆರ್. ರಾಮಚಂದ್ರ , ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ನ ಕೆಂಪಣ್ಣ ಮತ್ತು ಬಿ.ಕೆ .ಸುರೇಶ , ಡಾ. ಸತ್ಯಮಂಗಲ ಮಹದೇವ ಉಪಸ್ಥಿತ ರಿದ್ದರು .

