ಯಾರಿದ್ದರೂ ಇಲ್ಲದಿದ್ದರೂ
_____________________
ಯಾರಿದ್ದರೂ ಇಲ್ಲದಿದ್ದರೂ
ಬದುಕು ನಡೆಯುತ್ತಲೇ
ಇರುತ್ತದೆ.
ಕಾಲುಗಳು ಹೆಜ್ಜೆ ಹಾಕುತ್ತವೆ.
ಒಮ್ಮೊಮ್ಮೆ ನಮ್ಮಿಚ್ಚೆ ಕಡೆಗೆ
ಕೆಲವೊಮ್ಮೆ ಗೊತ್ತಿರದ ದಾರಿಗೆ
ಹೀಗೆ ಸಾಗುತ್ತಲೇ ಇರುತ್ತವೆ.
ಮುಂಜಾನೆ ಸುಡು ಬಿಸಿಲು
ಸಂಜೆ ತಂಪು ಗಾಳಿ
ರಾತ್ರಿಯ ಇರುಳು ಕನಸು.
ಎಷ್ಟು ಪ್ರತಿರೋಧ ಬಂದರೂ
ನಿಲ್ಲದ ಪಾದಗಳು
ಮನದೊಡೆಯನ ಆಯ್ಕೆ
ಸರಿಯೋ ತಪ್ಪೋ?
ಗೊತ್ತಿರದ ಕಾಲುಗಳು
ಕಾಲದ ಚಕ್ರದಲ್ಲಿ
ಹೀಗೆ ಸಾಗುತ್ತಲೇ ಇರುತ್ತವೆ.
ಯಾರಿದ್ದರೂ ಇಲ್ಲದಿದ್ದರೂ
________________________
ಹೇಳಲಾಗದ ಮಾತುಗಳು
_________________________
ನಿನ್ನ ನೋಡ ಬೇಕೆನ್ನುವ
ತವಕ ಆತುರ ಬಯಕೆ
ತಡಪಡಿಸುವ ಧ್ವನಿ
ಮಾತು ಕಡಿಮೆ
ಭಾವಗಳು ಉಳುಕುತ್ತಿವೆ
ಹತ್ತಿರ ಇದ್ದರೂ
ಹೇಳಲಾಗದ ಪ್ರೀತಿ
ಕಣ್ಣುಗಳಲ್ಲಿ
ಅರಳಿ ನಿಂತಿವೆ
ಕನಸುಗಳು
ನೀನೂರಿದ ಬೀಜ
ಈಗ ಮರವಾಗಿ
ಹೂವು ಹಣ್ಣು ನೀಡುತ್ತಿವೆ
ಮರದ ಪೊದರಿನ ಪಕ್ಷಿ
ಹಾಡುತ್ತಿವೆ
ನಿನಗೆ ಹೇಳಲಾಗದ
ಅದೆಷ್ಟೂ ಭಾವಗಳು
ಹೇಳಲಾಗದೆ
ಪಿಸು ಮಾತಿನಲಿ
ಮೌನಕ್ಕೆ ಜಾರಿದವು
ನಿನಗೆ ಹೇಳಲಾಗದ
ಮಾತುಗಳು
ಕವನ ಕಾವ್ಯವಾದವು.
ಮನಸಿನಲಿ ಮೌನವಾಗಿ
ಬದುಕಿ ಬಿಟ್ಟವು
ಮುಗ್ಧ ಭಾವಗಳು
_________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

