ಬಾಗಲಕೋಟೆ: ಜಿಲ್ಲೆಯ ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಎಂ ಎ ಬಾಗವಾನ ಗುರುಗಳು ಇಲಕಲ್ಲನ ವಿಜಯ ಮಹಾಂತೇಶ ಮಹಿಳಾ ಕಾಲೇಜನಲ್ಲಿ ಇಲ್ಲಿವರೆಗೆ ಪ್ರೊಪೆಸರ ಆಗಿ ಉತ್ತಮ ಸೇವೆ ಸಲ್ಲಿಸಿ ಈಗ ಅದೇ ಕಾಲೇಜಿಗೆ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದಾರೆ ಅದೇ ರೀತಿ ಜೆ ಎನ್ ಎಸ್ ಪ ಪೂ ಯಾದವಾಡ ಕಾಲೇಜಿಗೆ ನಮ್ಮೂರಿನ ಇನ್ನೊರ್ವ ಗುರುಗಳಾದ ವಾಯ ಎಚ್ ಚಲವಾದಿ ಯವರು ಸಹ ಇಲ್ಲಿಯವರೆಗೆ ಪ್ರೊಫೆಸರ್ ಆಗಿ ಈಗ ಅದೇ ಕಾಲೇಜಿಗೆ ಪ್ರಾಂಶುಪಾಲರಾಗಿ ನೇಮಕಗೊಂಡು ನಮ್ಮ ಕಂದಗಲ್ಲ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿ ಗ್ರಾಮದ ಹೆಮ್ಮೆಯ ಪುತ್ರರಾಗಿ ಹೊರಹೋಮ್ಮಿರುವದು ಬಹಳ ಸಂತಸ ತಂದಿದ್ದು ಇವರಿಂದ ಇನ್ನು ಹೆಚ್ಚಿನ ರೀತಿಯಲ್ಲಿ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮ ಮತ್ತು ನಗರಗಳ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಇವರ ಮಾರ್ಗದರ್ಶನ ಸದಾ ದೊರೆಯುತ್ತಿರಲಿ, ಶಿಕ್ಷಣಕ್ಕೆ ಇವರ ಕೊಡುಗೆ ಅಪಾರವಾಗಿದ್ದು ನಿಷ್ಠೆ ಪ್ರಾಮಾಣಿಕತೆ ಸೌಹಾರ್ದ ಜೀವನ ಇವರನ್ನು ಈ ಮಟ್ಟಕ್ಕೆ ತಲುಪಿಸಿದೆ ಎಂದು ಗ್ರಾಮದ ಮಾಜಿ ತಾ ಪ ಅಧ್ಯಕ್ಷ ಮಹಾಂತೇಶ ಕಡಿವಾಲ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರುಗಳಾದ ಪಂಪಣ್ಣ ಸಜ್ಜನ ಹಾಗೂ ಮಹಮ್ಮದಸಾಬ ಭಾವಿಕಟ್ಟಿಯವರು ಕಂದಗಲ್ಲ ಗ್ರಾಮದ ಡಾ ಬಾಬಾಸಾಹೇಬ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಹಾಗೂ ಚಲವಾದಿ ಸಮಾಜದವರಿಂದ ಏರ್ಪಡಿಸಿದ್ದ ಸತ್ಕಾರ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚಂದ್ರಶೇಖರ ಜಂಗ್ಲಿ ವಹಿಸಿದ್ದರು.
ಅಮರಪ್ಪ ಗೆಜ್ಜೆಲಗಟ್ಟಿ, ಶಂಕ್ರಪ್ಪ ಚಲವಾದಿ ಸಂಗಣ್ಣ ಹವಾಲ್ದಾರ ರವಿಕುಮಾರ ಕoಠಿ, ಎಸ್ ಡಿ ಎಂ ಸಿ ಅಧ್ಯಕ್ಷ ಶರಣಪ್ಪ ಬಳಿಗಾರ, ಆನಂದ ಜವಾನರ, ಸಂಗಮೇಶ ಗೋಡಿ, ಚಂದ್ರಶೇಖರ ಬಸರಗಿಡದ, ಚನ್ನಪ್ಪ ಚಲವಾದಿ, ಯಮನಪ್ಪ ಜಂಗ್ಲಿ ಗುರುಗಳಾದ ಮಂಜುನಾಥ ಮರಕಮದಿನ್ನಿ, ಬಸವರಾಜ ಜಂಗ್ಲಿ, ಬಸಪ್ಪ ಚಲವಾದಿ ಲಿಂಗರಾಜ ಶಿರಗುಂಪಿ ,ಮು ಅಥಿತಿಗಳಾಗಿ ಆಗಮಿಸಿದ್ದರು.ಸಮಿತಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ಪ್ರಾಂಶುಪಾಲರಾದ ಎಂ ಎ ಬಾಗವಾನ ಗುರುಗಳು ಹಾಗೂ ವಾಯ ಎಚ್ ಚಲವಾದಿ ಗುರುಗಳು ಮಾತನಾಡಿ ಕಂದಗಲ್ಲ ಗ್ರಾಮದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಭವ್ಯವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮದಲ್ಲಿ ಉನ್ನತ ಮಟ್ಟದ ಹುದ್ದೆಗಳನ್ನು ನಮ್ಮ ಕಂದಗಲ್ಲ ಗ್ರಾಮದವರು ಅಲಂಕರಿಸಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಲಿ ಎಂದರು.
ಕಾರ್ಯಕ್ರಮದಲ್ಲಿ ವಡ್ಡರ ಭೋವಿ ಸಮಾಜದವರು ವಾಲ್ಮೀಕಿ ಸಮಾಜದವರು ದಲಿತ ಯುವ ಸೇನೆ ಹಾಗೂ ಯಲ್ಲಪ್ಪ ಚಲವಾದಿ ಗುರುಗಳು ಈ ಇಬ್ಬರು ಪ್ರಾಂಶುಪಾಲರನ್ನು ಇದೆ ವೇದಿಕೆಯಲ್ಲಿ ಸನ್ಮಾನಿಸಿದರು.
ರಮೇಶ ದಾಸರ ಕಾರ್ಯಕ್ರಮ ನಿರೂಪಿಸಿದರು. ಶಂಕರ ಕಾಳಿಪ್ರಸಾದ ಸ್ವಾಗತಿಸಿ ವಂದಿಸಿದರು.