ರಾಯಬಾಗ – ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಒಂದೇ ಕುಟುಂಬದ ಸಹೋದರರಿಬ್ಬರು ಪಿಎಸ್ಐ ಹುದ್ದೆ ಗಿಟ್ಟಿಸಿ ದಾಖಲೆ ಮಾಡಿದ್ದಾರೆ.
ಬೆನ್ನಳ್ಳಿ ಕುಟುಂಬದ ಶಿವಾನಂದ ಅಶೋಕ ಬೆನ್ನಳ್ಳಿ ಹಿರಿಯ ಸಹೋದರ ಪಿ.ಎಸ್.ಆಯ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 15 ನೇ ರ‍್ಯಾಂಕ ಪಡೆದಿದ್ದು ಕಿರಿಯ ಸಹೋದರ ಪ್ರಶಾಂತ ಅಶೋಕ ಬೆನ್ನಳ್ಳಿ ಇವರು ಪಿ.ಎಸ್.ಆಯ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 159 ನೇ ರ‍್ಯಾಂಕ ಪಡೆದು ಇಟ್ನಾಳ ಗ್ರಾಮಕ್ಕೆ ಹಾಗೂ ರಾಯಬಾಗ ತಾಲೂಕಿಗೆ ಕೀತಿ೯ ತಂದಿದ್ದಾರೆ.
ಬೆನ್ನಳ್ಳಿ ಸಹೋದರರ ಸಾಧನೆ ಇಟ್ನಾಳ ಗ್ರಾಮದಲ್ಲಿ ಹರ್ಷ ತಂದಿದ್ದು ಗ್ರಾಮಸ್ಥರು, ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.