ಉ.ಕ. ಕನ್ನಡ ನುಡಿ ತೇರಿನ ಪ್ರಕಟಣೆ; ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Must Read

ವಿದ್ಯಾಧರ ಕನ್ನಡ ಪ್ರತಿಷ್ಠಾನ(ಮಹಾರಾಷ್ಟ್ರ -ಕರ್ನಾಟಕ-ತೆಲಂಗಾಣ)
ಕನ್ನಡ ನುಡಿತೇರು-೨೦೨೬
ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆ :

*ಕನ್ನಡ ನುಡಿತೇರು-೨೦೨೬*
********************
ಉತ್ತರ ಕನ್ನಡ ಜಿಲ್ಲೆಯ‌ ಕುಲದೇವಿ ಎನಿಸಿದ ಮಹಾತಾಯಿ ಶಿರಸಿಯ ಮಾರಿಕಾಂಬೆಯ ಆಶಿರ್ವಾದದಿಂದ ಶಿರಸಿಯಲ್ಲಿ ಈ ಸಲದ *ಕನ್ನಡ ನುಡಿ ತೇರು -೨೦೨೬* ಎಳೆಯುವ ಯೋಜನೆ‌ ಇದೆ. ಈ ಒಂದು ಕನ್ನಡ ಕಾಯಕದಲ್ಲಿ
ಉತ್ತರ ಕನ್ನಡ ಜಿಲ್ಲೆಯ ಎಲೆಯಮರೆಯ ಸಾಧಕ ತಪಸ್ವಿಗಳು, ಬಹುಮುಖ , ಪ್ರತಿಭೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಯೋಜನೆ‌ ಇದೆ.ಈ ತೇರಿನ ಸಾರಥ್ಯ ವಹಿಸಿ
ಹಮ್ಮಿಣಿಯನ್ನು ಹಿಡಿಯಲು ಪ್ರಜ್ವಲ್ ಟ್ರಸ್ಟ‌ ಶಿರಸಿ(ರಿ) ಅಧ್ಯಕ್ಷೆ ಸೌ.ಬಿಂದು ಹೆಗಡೆಯವರು ಮುಂದೆ ಬಂದಿದ್ದಾರೆ.

ಈ ಸಂಭ್ರಮ‌ ಸಾಧಾರಣ ಎಪ್ರಿಲ್- ೨೦೨೬ ರ ಎರಡನೇ ವಾರದ (ಹಿಂದೆ -ಮುಂದೆ) ಅವಧಿಯಲ್ಲಿ ಆಯೋಜಿಸುವ
ಯೋಜನೆ ಇದೆ. ಈ ಸಂದರ್ಭದಲ್ಲಿ ಪ್ರತಿ ವರುಷದಂತೆ ಪ್ರಸ್ತುತ ಒಂದಿಷ್ಟು ಬದಲಾವಣೆ ಸಹಿತ ಈ ವರುಷವೂ ಸಾಧಕರನ್ನು ಗೌರವಿಸುವ ಯೋಜನೆಯೂ ಇದೆ.
********
ಈ ನುಡಿ ತೇರಿನ ಮೊದಲ ಭಾಗವಾಗಿ:-

೧)ಮಾತೊಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ. “ಸಾಧಕ ಸಂಜೀವಿನಿ-ಪ್ರಶಸ್ತಿ-
೨೦೨೫ ”
(ಉತ್ತರ ಕನ್ನಡ ಜಿಲ್ಲೆಗೆ ಸೀಮಿತವಿದ್ದು ಸೂಕ್ತ ಸಾಧಕರು
ಸಿಗದಿದ್ದರೆ ಬೇರೆ ಸಾಧಕರಿಗೆ ನೀಡಲಾಗುವುದು)

೨)ದಿ| ನಿಂಗಪ್ಪ ಮಲ್ಲಪ್ಪ ಮೇಟಿ ದತ್ತಿ ಪ್ರಶಸ್ತಿ -೨೦೨೫.
(ಪ್ರಚಾರದಿಂದ ನೇಪಥ್ಯಕ್ಕೆ ಸರಿದ ಬಹುಮುಖಿ ಸಾಧಕರು:
ಯಥಾ ಪ್ರಕಾರ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಗೆ ಆದ್ಯತೆ)
ಮಿಕ್ಕಂತೆ

೩)ಮತ್ತಿತರ ಸಾಧಕರಿಗೆ
ಕನ್ನಡ ಚುಡಾಮಣಿ ಪ್ರಶಸ್ತಿ -೨೦೨೫
ಉದಾಹರಣೆಗೆ: ವಿದ್ಯಾಧರ ಕನ್ನಡ ಪ್ರತಿಷ್ಠಾನ
ಅ)ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆಯ
ಕನ್ನಡ ಚುಡಾಮಣಿ ಪ್ರಶಸ್ತಿ -೨೦೨೫ (ಸಾಹಿತ್ಯ)
ಆ)ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆಯ
ಕನ್ನಡ ಚುಡಾಮಣಿ ಪ್ರಶಸ್ತಿ -೨೦೨೫ (ಶಿಕ್ಷಣ)
ಈ ತರಹ ……

೪)ಈ ಸಲ ಕೇವಲ ಅರ್ಹ ನಾಲ್ಕು ಪ್ರಶಸ್ತಿ ಮಾತ್ರ ನೀಡುವ ಯೋಜನೆ ಇದ್ದು
*ಬಾಲ ಸಾಧಕರಿಗೆ/ ಪ್ರತಿಭೆಗಳಿಗೆ
ಈರ್ವರಿಗೆ
(ಮೊದಲೆರಡು ಬಿಟ್ಟು)
ಪ್ರಶಸ್ತಿಯ ಶಿರ್ಷಿಕೆ‌ *ಕನ್ನಡ ಚುಡಾಮಣಿ ಪ್ರಶಸ್ತಿ”

೫) ಪ್ರಶಸ್ತಿ ಗಳನ್ನು ಆಯಾ
ಕಾರ್ಯ ಕ್ಷೇತ್ರಗಳಿಗನುಗುಣವಾಗಿ ಪರಿಗಣಿಸಲಾಗುವುದು.
೫) ಈ ಮೊದಲೆ ಹೇಳಿದಂತೆ‌
ಎಲ್ಲಾ ಪ್ರಶಸ್ತಿಗಳಿಗೂ ಉತ್ತರ ಕನ್ನಡ ಜಿಲ್ಲೆಗೆ ಆದ್ಯತೆ ನೀಡಲಾಗುವುದು.
೬) ಪ್ರತಿಷ್ಠಾನವು ಯಾರಿಂದ ಹಣವನ್ನೂ ಕೇಳುವುದಿಲ್ಲ.
ಹಾಗೇ ಯಾವುದೇ ವೆಚ್ಚ ಭರಿಸುವುದಿಲ್ಲ.
೭)ಮುಖ್ಯವಾಗಿ ಸಾಧಕರಿಗೆ‌ ಕನ್ನಡ ಮಾತು,ಓದು,ಬರಹ
ಬರ ಬೇಕಾದುದು ಕಡ್ಡಾಯ.
೮) ಪ್ರತಿಷ್ಠಾನವು ಯಾವುದೇ ಪ್ರಮಾಣ ಪತ್ರ ಇತ್ಯಾದಿ ಅಂಚೆ/
ಕೋರಿಯರ್/ಪ್ರತಿನಿಧಿ ಮುಖಾಂತರ ಕಳಿಸಲಾಗುವುದಿಲ್ಲ. ಸ್ವಯಂ ಉಪಸ್ಥಿತರಿರಬೇಕು.
೯) ಬಾಲ ಪ್ರತಿಭೆಗಳ ಜೊತೆಗೆ ಪಾಲಕರು ಅವಶ್ಯ ಬರಬೇಕು.
ಅದು ಅವರ ರಕ್ಷಣೆ ಉದ್ದೇಶ. ಮಕ್ಕಳ, ಪಾಲಕರ ಆಧಾರ ಕಾರ್ಡ್ ಅವಶ್ಯಕ.

೧೦) ಆಸಕ್ತರು ತಮ್ಮ ವಿನಂತಿ/ ಪರಿಚಯ ಪತ್ರ,೨ ಪಾಸ್ ಪೋರ್ಟ್ ಫೋಟೋಗಳ ಜೊತೆಗೆ ಪ್ರಮುಖ ಸಾಧನೆಗಳ ದಾಖಲಾತಿಗಳ ಝೆರಾಕ್ಸ್ ಪ್ರತಿ. ಕಳಿಸಬೇಕು. ವಿಳಾಸ: ಸಂವಹನ ನಂ: ವಾಟ್ಸಪ್ ನಂ ಇತ್ಯಾದಿ ವಿವರಗಳು ಸ್ಪಷ್ಟವಾಗಿರಲಿ.
ವಾಟ್ಸಪ್, ಪಿಡಿಎಫ್…ಇಮೇಲ್ ಬೇಡ.

೧೧)ಪ್ರತಿಷ್ಠಾನದ ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮ.
ಈ ವಿಷಯ ಕುರಿತು ಯಾವುದೇ ಸಂವಹನಕ್ಕೆ ಅವಕಾಶವಿಲ್ಲ.

೧೨)ತಾವು ಕಳಿಸಿದ ವಿವರಗಳನ್ನು ಹಿಂತಿರುಗಿಸಲಾಗುವುದಿಲ್ಲ

*ಅರ್ಜಿ ಸಲ್ಲಿಸಲು ಕೊನೆಯ ದಿನ : ೧೫-೧-೨೦೨೬.
ನಂತರ ಬಂದವುಗಳನ್ನು ಪರಿಗಣಿಸಲಾಗುವುದಿಲ್ಲ.ಅಂಚೆ ವಿಳಂಬಗಳಿಗೆ ಪ್ರತಿಷ್ಠಾನ ಹೊಣೆಯಾಗದು.
ನುಡಿ ತೇರಿನ ಎರಡನೇ ಭಾಗವಾಗಿ

*ಕನ್ನಡ ನಾಡ ಭಕ್ತಿ ಗೀತೆ:
ಹಾಗೂ ಸಮೂಹ ಗೀತೆಗಳ ಸ್ಪರ್ಧೆ
*ಉಪನ್ಯಾಸ
*ಕೃತಿಗಳ ಬಿಡುಗಡೆ
*ಸಾಂಸ್ಕೃತಿಕ
*.ಕವಿಗೋಷ್ಠಿ
ಹೀಗೆ ಒಂದಿಷ್ಟು ರೂಪ ರೇಷೆ ನಡೆದಿದೆ.
ಎಲ್ಲವನ್ನೂ ಕಾಲಕಾಲಕ್ಕೆ ಪ್ರಕಟಣೆ ಮುಖಾಂತರ
ತಿಳಿಸಲಾಗವುದು. ಕನ್ನಡಿಗರೆಲ್ಲರೂ ತ್ರಿಕರಣ ಪೂರ್ವಕ ಸಹಕರಿಸುವ ಭರವಸೆ
ನಮಗಿದೆ.
ವಂದನೆಗಳೊಂದಿಗೆ
ಸಂಚಾಲಕರು
ವಿದ್ಯಾಧರ ಕನ್ನಡ ಪ್ರತಿಷ್ಠಾನ
ಮಹಾರಾಷ್ಟ್ರ – ಕರ್ನಾಟಕ – ತೆಲಂಗಾಣ.

ಅರ್ಜಿ ಕಳಿಸುವ ವಿಳಾಸ;

ROOPAKALA K.M.
PARNAKUTIRA
CHWODESWARI NAGARA ( Dead End)
HULLUMAKKI,
KOPPA , – 577126
CHICKAMAGALORE Dist
Ph: 8328027132.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group