ಉಡಿ ತುಂಬುವುದು ದೇಶಿ ಸಂಸ್ಕೃತಿ ಗುರಮ್ಮ ಗೋಪಶೆಟ್ಟಿ

Must Read

ಮುನವಳ್ಳಿಃ “ಮಹಿಳೆಯರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ.ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ”ಎಂದು ಗುರಮ್ಮ ಗೋಪಶೆಟ್ಟಿ ತಿಳಿಸಿದರು.

ಅವರು ಪಟ್ಟಣದ ದಾನಮ್ಮಾದೇವಿ ದೇವಸ್ಥಾನದಲ್ಲಿ ಜರುಗಿದ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮ ಕುರಿತು ಮಾತನಾಡಿದರು.

ಭಾರತ ಹುಣ್ಣಿಮೆ ಸಂದರ್ಭದಲ್ಲಿ ಪ್ರತಿವರ್ಷ ಜಾತ್ರಾಮಹೋತ್ಸವ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬುವುದು,ಕಂಕಣ ಕಟ್ಟುವುದು ನಂತರ ಮಹಾಪ್ರಸಾದ ವಿತರಣೆ ಜರಗುತ್ತಿರುವುದು ವಿಶೇಷವಾಗಿದೆ. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಒಂಬತ್ತು ಗಂಟೆಯಿಂದ ಮಹಿಳೆಯರಿಂದ ಉಡಿ ತುಂಬುವ ಕಾರ್ಯದಲ್ಲಿ ಪಟ್ಟಣದ ಮಹಿಳೆಯರಾದ ಜಯಮ್ಮ ಬಾಳಿ,ಗುರಮ್ಮಾ ಗೋಪಶೆಟ್ಟಿ,ಆಶಾ ಬಾಳಿ,ವಿದ್ಯಾ ಬಾಳಿ,ಶಿವಲೀಲಾ ಕಡಕೋಳ,ಉಷಾ ಗೋಪಶೆಟ್ಟಿ,ಮಹಾದೇವು ಬಾಳಿ,ಶಿವಲೀಲಾ ಬಾಳಿ,ಉಷಾ ಗೋಪಶೆಟ್ಟಿ,ರೂಪಾ ಗೋಮಾಡಿ,ಸುಷ್ಮಾ ಗೋಮಾಡಿ,ರತ್ನಾ ಗೋಮಾಡಿ,ಗೀತಾ ಬಾಳಿ,ಅಶ್ವಿನಿ ದಶಮನಿ,ವೀಣಾ ಬಾಳಿ,ಸುಮಾ ಬಾಳಿ,ನಿರ್ಮಲಾ,ಗೌರಮ್ಮ ಗೋಪಶೆಟ್ಟಿ,ಅನು ಬಾಳಿ,ಅನ್ನಪೂರ್ಣ ಬುರ್ಜಿ,ನಿರ್ಮಲಾ ಹಂಪಣ್ಣವರ ಸೇರಿದಂತೆ ಅನೇಕರು ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೀಪಾ ಜಂತಲಿ ಮಾತನಾಡಿ,“ಪ್ರತಿ ವರ್ಷವೂ ನಮ್ಮ ಹಿರಿಯರು ಹಾಕಿಕೊಟ್ಟ ಈ ಸಂಪ್ರದಾಯವನ್ನು ನಾವೆಲ್ಲ ತಪ್ಪದೇ ಪಾಲಿಸುತ್ತಿದ್ದು ಮುಂದಿನ ಪೀಳಿಗೆಗೂ ಇದರ ಮಹತ್ವದ ಅರಿವನ್ನು ನೀಡುವುದು ಅವಶ್ಯಕ.ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಉಳಿಸಬೇಕು.ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನೈತಿಕತೆ ಮೈಗೂಡಿಸಿಕೊಂಡರೆ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ”ಎಂದರು.

“ನಮ್ಮ ಅಧ್ಯಾತ್ಮಿಕ ಉನ್ನತಿಯಾಗಲು ಹಾಗೂ ನಮ್ಮ ಬದುಕಿನ ಕಲ್ಯಾಣ ಮತ್ತು ಲೋಕ ಕಲ್ಯಾಣಾರ್ಥವಾಗಿ ದೇವಿಗೆ ಸಂಕಲ್ಪಿಸಿ ಉಡಿ ತುಂಬುವುದು ಹಿರಿಯರು ಹಾಕಿಕೊಟ್ಟ ಮಾರ್ಗ.ಇದನ್ನು ಇಂದಿಗೂ ದಾನಮ್ಮ ದೇವಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನಾವೆಲ್ಲ ಅನುಸರಿಸಿಕೊಂಡು ಬಂದಿದ್ದೇವೆ. ಈ ಕೋರೋನಾದಂತಹ ಮಾರಕ ರೋಗಗಳು ತೊಲಗುವ ಜೊತೆಗೆ ನಾಡಿಗೆ ಒಳ್ಳೆಯ ಸಮೃದ್ಧ ಮಳೆ ಬೆಳೆ ಬರಲಿ ಎಂದು ಎಲ್ಲರೂ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮಹಾಮಂಗಳಾರತಿ ಮಾಡಿದ್ದೇವೆ” ಎಂದು ಆಶಾ ಬಾಳಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅರ್ಚಕ ಗುರುಬಸಯ್ಯ ಶಾಸ್ತ್ರೀಗಳು ಹಿರೇಮಠ “ಭಕ್ತರ ಪಾಲಿನ ವರದಾನಿ ಎಂದೇ ಕರೆಯುವ ದಾನಮ್ಮಳಿಗೆ ಭಕ್ತರು ಮಕ್ಕಳಾಗದವರಿಗೆ ಮಕ್ಕಳ ಭಾಗ್ಯ, ಮದುವೆಯಾಗದ ಕನ್ಯೆಯರಿಗೆ ಕಂಕಣ ಭಾಗ್ಯ,.ಜೀವನದಲ್ಲಿ ಜಿಗುಪ್ಸೆ ಹೊಂದಿದವರಿಗೆ ಮಾನಸಿಕ ಶಾಂತಿ ದೊರೆಯುವದೆಂಬ ಪ್ರತೀತಿಯಿಂದ ಎಲ್ಲ ವಿಧದ ಭಕ್ತ ಜನತೆ ಇಲ್ಲಿಗೆ ಬರುವ ಮೂಲಕ ದೇವಿಯಲ್ಲಿ ಅರ್ಚನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಕೋರುವರು”. ಎಂದು ತಿಳಿಸಿದರು.

ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿದ ನೈವೇದ್ಯೆದೊಂದಿಗೆ ದೇವಾಲಯಕ್ಕೆ ಆಗಮಿಸಿ ಪಲ್ಲಕ್ಕಿಗೆ ಆರತಿಯನ್ನು ಬೆಳಗಿ,ಒಂದೆಡೆ ಕುಳಿತು ದೇವಾಲಯಕ್ಕೆ ಆಗಮಿಸುತ್ತಿರುವ ಮಹಿಳೆಯರಿಗೆ ಕಂಕಣ ಕಟ್ಟುವುದು ಮತ್ತು ಉಡಿ ತುಂಬುವ ಕಾರ್ಯವನ್ನು ಮಾಡುತ್ತಿರುವುದು ಕಂಡು ಬಂದಿತು. ಗುಡ್ಡಾಪುರ ಮಾದರಿಯಲ್ಲಿಯೇ ಪೂಜೆ ಅನ್ನ ಸಂತರ್ಪಣೆ ವಿವಿಧ ಆಚರಣೆಗಳು ಜರುಗಿದವು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group