ಉಸಿರೇ ಎಂದರು ಉಮೇಶ್: ಉಮೇಶ್ ಅಭಿನಯದ ಹೊಸ ಆಲ್ಬಂ ಗೀತೆ ಬಿಡುಗಡೆ

Must Read

ಕನ್ನಡ ಚಿತ್ರರಂಗದ ನಟ ನಿರ್ದೇಶಕ, ಯುವಿ ಡಿಜಿಟಲ್ ಪ್ರಮೋಷನ್ ಸಂಸ್ಥೆಯ ಮಾಲೀಕ ಉಮೇಶ್ ಕೆ ಎನ್ ಅಭಿನಯದ ಹೊಸ ಆಲ್ಬಂ ಸಾಂಗ್ “ಉಸಿರೇ” ಲಿರಿಕಲ್ ವಿಡಿಯೋ A2 ಮ್ಯೂಸಿಕ್ ಯ್ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಮೂಲತಃ ಪಾಂಡವಪುರ ಚಿನಕುರಲಿಯವರಾದ ಇವರು ಸದ್ಯ ಬೆಂಗಳೂರಿನಲ್ಲಿ ಹತ್ತು ವರ್ಷಗಳಿಂದ ನೆಲೆಸಿದ್ದು, ಚಿತ್ರರಂಗದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ಸಾಕಷ್ಟು ಚಿತ್ರಗಳಿಗೆ ತಾವೇ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಇತ್ತೀಚೆಗೆ ಪ್ಲೇ ಗರ್ಲ್ ಆಲ್ಬಂ ಸಾಂಗ್ ನಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಅದರ ಜೊತೆಗೆ ಕನ್ನಡ ಚಿತ್ರರಂಗದ ನಾಲ್ಕೈದು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಉಸಿರೇ ಅಲ್ಬಮ್ ಸಾಂಗ್ ನಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದು ಸಾಂಗ್ ಎ.ಟು ಮ್ಯೂಸಿಕ್ ಯ್ಯುಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಯಾಗಿದೆ. ಉಮೇಶ್ ಕೆ. ಎನ್ ಅಭಿನಯದ ಉಸಿರೆ ಅಲ್ಬಮ್ ಬಿಡುಗಡೆಯಾಗಿದ್ದು, ನಾಯಕಿಯಾಗಿ ಚೈತನ್ಯ ಎಸ್ ಕುಮಾರ್ ಅಭಿನಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರ ಕಣ್ಮನ ಸೆಳೆದಿದೆ. ಇಬ್ಬರು ಪ್ರೇಮಿಗಳ ಪವಿತ್ರ ಬಾಂಧವ್ಯವನ್ನು ಎತ್ತಿ ಹಿಡಿದು, ಅವರ ಮನೋಭಿಲಾಷೆಗಳು ಕಣ್ಣಲ್ಲೇ ವ್ಯಕ್ತವಾಗುವಂತಿದೆ ಪೋಸ್ಟರ್. ಮುಗ್ಧ ಹುಡುಗ ಮನದೆನ್ನೆಗೆ ಕಾಲ್ಗೆಜ್ಜೆ ಹಾಕುವ ರೋಮಾಂಚಕ ದೃಶ್ಯ, ಅವನ ನಿಷ್ಕಲ್ಮಶ ಪ್ರೀತಿಯ ನೋಟ ಎಲ್ಲರನ್ನೂ ಆಕರ್ಷಿಸುವಂತಿದೆ. ಮುಖದಲ್ಲಿರೋ ಮಂದಹಾಸದ ಕಳೆ, ದೃಷ್ಟಿಯೊಳಗಿನ ಒಲವು ಪ್ರೇಮಿಗಳನ್ನು ಮೆಚ್ಚಿಸುವಂತಿದೆ. ಈ ಅಲ್ಬಮ್ ಸಾಂಗ್ ನ್ನು ಅರ್ಫಾಜ್ ಉಳ್ಳಾಲವರು ಹಾಡಿದ್ದು, ವೀರು ಯತ್ನಳ್ಳಿಯವರು ಸಾಹಿತ್ಯ ಬರೆದಿದ್ದಾರೆ. ಶಿವು ಸಂಗೀತ ಸಂಯೋಜನೆ, ತೇಜಸ್ ರಾಜ್ ಅವರು ನಿರ್ದೇಶನದ ಜೊತೆಗೆ ಗ್ರಾಫಿಕ್ಸ್ ಹೊಣೆ ಹೊತ್ತಿದ್ದಾರೆ. ಸಹ ನಿರ್ದೇಶಕರಾಗಿ ರಮೇಶ್ ಪಾಟೀಲ್ , ಛಾಯಾಗ್ರಾಹಕರಾಗಿ ಹಮೀದವರು ಕಾರ್ಯ ನಿರ್ವಹಿಸಿದ್ದಾರೆ. ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ,

ಪ್ರಚಾರ ಕಲೆ ವಿಶ್ವಪ್ರಕಾಶ ಮಲಗೊಂಡ, ಈ ಅಲ್ಬಮ್ ಸಾಂಗ್ ನ ನಿರ್ಮಾಣದ ವೆಚ್ಚವನ್ನು ಸ್ವಪ್ನ ಯತ್ನಳ್ಳಿಯವರು ಭರಿಸಿದ್ದಾರೆ. A2 MUSIC ನಲ್ಲಿ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಪ್ರತಿಭಾವಂತ ನಟ ನಿರ್ದೇಶಕರಾಗಿರುವ ಉಮೇಶ್ ಕೆ ಎನ್ ತಮ್ಮ ವೃತ್ತಿ ಜೀವನದಲ್ಲಿ, ಯಶಸ್ಸಿನ ಹಾದಿಯಲ್ಲಿ ಸಾಧನೆಯ ಶಿಖರವನ್ನು ಏರಲಿ ಎಂದು ನಮ್ಮ ಕನ್ನಡ ದಿನಪತ್ರಿಕೆಯ ಬಳಗದಿಂದ ಶುಭ ಹಾರೈಸುತ್ತದೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group