ಬೆಳಗಾವಿ: ಕೇಂದ್ರ ಸರಕಾರದ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ರಾಜ್ಯ ಸಚಿವರಾದ ಸೋಮ ಪ್ರಕಾಶ ರವರು ಇಂದು ಕೋಳಿಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ, ಹಾಲಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಮರಾಠಿ ಶಾಲೆಗಳಿಗೆ ಭೇಟಿ ನೀಡಿದರು.
ಸಚಿವರ ಜೊತೆಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ ರಾಜ್ಯ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ,ಸಂಸತ್ ಸದಸ್ಯರಾದ ಮಂಗಲಾ ಅಂಗಡಿ,ಮಾಜಿ ಶಾಸಕರಾದ ಸಂಜಯಪಾಟೀಲ, ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ,ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆರ್ ಪಿ ಜುಟ್ಟನವರ,ಕ್ಷೇತ್ರ ಸಮನ್ವಯ ಅಧಿಕಾರಿಗಳಾದ. ಎಮ್ ಎಸ್ ಮೇದಾರ, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಜನ ಪ್ರತಿನಿಧಿಗಳು, ಗ್ರಾಮಸ್ಥರು, ಕೋಳಿಕೊಪ್ಪ ಶಾಲೆಯ ಪ್ರಧಾನ ಗುರುಮಾತೆ ಶ್ರೀಮತಿ ಕಲಾವತಿ ಕುಲಕರ್ಣಿ ಹಾಗೂ ಶಿಕ್ಷಕಿ,ಶಿಕ್ಷಕರ ಸೊಸೈಟಿ ನಿರ್ದೇಶಕಿಯರಾದ ಪಾರ್ವತಿ ಹಳೇಮನಿ ಯವರು ಸೇರಿದಂತೆ ವಿವಿಧ ಶಾಲೆಗಳ ಪ್ರಧಾನ ಗುರುಗಳು ಹಾಜರಿದ್ದರು.
ಅವರು ಗ್ರಾಮ ಪಂಚಾಯತಿ ವತಿಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.ಶಾಲಾ ತರಗತಿಗಳಿಗೆ ಭೇಟಿ ನೀಡಿ ಮಕ್ಕಳ ಜೊತೆಗೆ ವಿಷಯ ಗಳ ಚರ್ಚೆ,ಪರೀಕ್ಷೆ ಮಾಡಿ ಖುಷಿಯನ್ನು ವ್ಯಕ್ತಪಡಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನವನ್ನು ಮಾಡಿದರು.