ಅಪರಿಚಿತ ವಾಹನ ಡಿಕ್ಕಿ; ಮೂರು ಗೋವುಗಳ ಸಾವು

Must Read

ಬನಹಟ್ಟಿ – ಮಧ್ಯರಾತ್ರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ಗೋವುಗಳು ದಾರುಣವಾಗಿ ಸಾವಿಗೀಡಾದ ಘಟನೆ ನಗರದ ವೈಭವ ಚಿತ್ರಮಂದಿರದ ಎದುರು ಸಂಭವಿಸಿದ ಬಗ್ಗೆ ತಡವಾಗಿ ತಿಳಿದುಬಂದಿದೆ.

ನಾಲ್ಕು ದಿನಗಳ ಹಿಂದೆ ತಡ ರಾತ್ರಿ 12:30 ರಿಂದ 1 ಗಂಟೆಯ ಸಮಯದಲ್ಲಿ ಬನಹಟ್ಟಿಯ ವೈಭವ ಟಾಕೀಸ ಎದುರಿಗಿನ ರಸ್ತೆಯಲ್ಲಿ ಅಮಾಯಕ ಮೂರು ಗೋವುಗಳಿಗೆ ವಾಹನ ಹಾಯಿಸುವುದರ ಮೂಲಕ ನಿರ್ದಯವಾಗಿ ಕೊಂದು ಹಾಕಿದ ವಾಹನ ಚಾಲಕನನ್ನ ಹಿಡಿದು ಆತನಿಗೆ ಕಠಿಣ ಶಿಕ್ಷೆ ಆಗಲಿ ಎನ್ನುವುದು ಹಿಂದು ಸಂಘಟನೆಗಳು ಆಗ್ರಹ ಮಾಡಿದ್ದು ಪ್ರಕರಣದ ಬಗ್ಗೆ ಎಫ್ ಆಯ್ ಆರ್ ದಾಖಲಾಗಿದೆ. ವಾಹನ ಪತ್ತೆ ಕಾರ್ಯ ಆರಂಭವಾಗಿದೆ. ಗೋವುಗಳು ಮಾಳಪ್ಪ ಕರಿಗಾರ ಎನ್ನುವವರಿಗೆ ಸೇರಿವೆ ಎನ್ನಲಾಗಿದೆ.

ರಾತ್ರಿ ಒಂದು ಗಂಟೆಯಿಂದ ಬೆಳಿಗ್ಗೆ ಅಂತ್ಯ ಸಂಸ್ಕಾರದ ವರೆಗೆ ಹಿಂದು ಸಂಘಟನೆಗಳ ಕಾರ್ಯಕರ್ತರು, ಪೋಲಿಸ ಇಲಾಖೆ ಸಿಬ್ಬಂದಿ, ನಗರಸಭೆಯ ಸಿಬ್ಬಂದಿ ಹಾಗೂ ಪಶು ವೈದ್ಯರು ಭಾಗಿಯಾಗಿ ಗೋವುಗಳ ಅಂತ್ಯ ಸಂಸ್ಕಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರಾದ ನಂದು ಗಾಯಕವಾಡ, ಬಸವರಾಜ ಮನ್ನಮಿ, ವಿರುಪಾಕ್ಷ ಮಠದ, ಈಶ್ವರ ಕಾಡದೇವರ, ಹರೀಶ ನಾಗರೆ, ಪಿಂಟೂ ಕುಂಬಾರ ಹಾಗೂ ನೇಸೂರ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group