ಬೀದರ್ ಜಿಲ್ಲೆಯಲ್ಲಿ ರಾಕ್ಷಸಿ ಕೃತ್ಯ
ಬೀದರ – 4 ವರ್ಷದ ಹಸುಳೆ ಬಾಲಕಿ ಮೇಲೆ ಅತ್ಯಾಚಾರ ನಡೆದ ಘಟನೆ ವರದಿಯಾಗಿದ್ದು ಅನಾಮಿಕ ವ್ಯಕ್ತಿಯೊಬ್ಬನ ಮೇಲೆ ಎಫ್ ಆಯ್ಆರ್ ಮಾಡಲಾಗಿದೆ.
ಮಗುವನ್ನು ನರ್ಸರಿ ಶಾಲೆಗೆ ಕಳುಹಿಸಿದ ವೇಳೆ ಅತ್ಯಾಚಾರ ಎಸಗಿರುವ ಶಂಕೆಯಿದ್ದು ಮಗು ಮನೆಗೆ ವಾಪಸಾಗಿದ್ದ ವೇಳೆ ರಕ್ತಸ್ರಾವ ದಿಂದ ಪ್ರಕರಣ ಬಯಲಾಗಿದೆ.
ಅತ್ಯಾಚಾರಕ್ಕೊಳಗಾದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಈ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ರಾಕ್ಷಸೀ ಕೃತ್ಯ ಎಸಗಿರುವ ಕಾಮುಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ

