- Advertisement -
ಮೂಡಲಗಿ: ದಿ.ಮೂಡಲಗಿ ಸಹಕಾರಿ ಬ್ಯಾಂಕಿನ ಗ್ರಾಹಕರಿಗೆ ಶೀಘ್ರ ಹಣ ವರ್ಗಾವಣೆ ಹಾಗೂ ಜಮಾವಣೆ ಆಗಿ ವ್ಯವಹಾರವು ಸರಳಿಕರಣವಾಗುವುದಕ್ಕೆ ಫೋನ ಪೇ ( ಯುಪಿಐ)ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ದಿ.ಮೂಡಲಗಿ ಸಹಕಾರಿ ಬ್ಯಾಂಕದಿಂದ ಯುಪಿಐ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದಿ.ಮೂಡಲಗಿ ಸಹಕಾರಿ ಬ್ಯಾಂಕ ಗ್ರಾಹಕರಿಗೆ ಎಲ್ಲ ತರದ ಸೌಲಭ್ಯವನ್ನು ಒದಗಿಸಲು ಸಿದ್ಧರಾಗಿದೇವೆ ಎಂದರು.
ಈ ಸಮಯದಲ್ಲಿ ಬ್ಯಾಂಕನ ನಿರ್ದೇಶಕರಾದ ಎಸ್.ಎಂ.ಗಾಣಿಗೇರ, ಆರ್.ಬಿ.ನಿರ್ವಾಣಿ, ಆರ್.ಎಲ್.ವಾಲಿ, ಎಮ್.ಕೆ.ತಾಂಬೋಳಿ, ಎಚ್.ಸಿ.ಅಂಗಡಿ, ಆರ್.ಸಿ.ಬೆಳಕೂಡ, ಆಯ್.ಬಿ.ಪಾಟೀಲ ಮತ್ತು ವೆಂಕಟೇಶ ಸತರಡ್ಡಿ, ಪ್ರಕಾಶ ಮುಧೋಳ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಿ.ವಿ.ಬುದ್ನಿ, ಸಹ ವ್ಯವಸ್ಥಾಪಕ ಸಿ.ಬಿ.ಢವಳೇಶ್ವರ ಮತ್ತಿತರರು ಉಪಸ್ಥಿತರಿದ್ದರು.