ಎಸ್‌ಬಿಐದಿಂದ ಪಿಂಚಣಿದಾರರಿಗೆ ಉಪಯುಕ್ತ ಯೋಜನೆಗಳು – ಪ್ರಬಂಧಕ ಶ್ರೀನಿವಾಸ

Must Read

ಮೂಡಲಗಿ: ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಿಂಚಣಿದಾರರಿಗೆ ವಿವಿಧ ಸಾಲದ ಯೋಜನೆಗಳು ಇದ್ದು ಪಿಂಚಣಿದಾರರು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಎಸ್‌ಬಿಐ ಮೂಡಲಗಿ ಶಾಖೆಯ ಹಿರಿಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಅವರು ಹೇಳಿದರು.

ಇಲ್ಲಿಯ ಸ್ಟೇಟ್ ಬ್ಯಾಂಕ್ ಇಂಡಿಯಾ ಕಚೇರಿಯಲ್ಲಿ ಪಿಂಚಣಿದಾರರಿಗೆ ಬ್ಯಾಂಕ್ ಸೌಲಭ್ಯಗಳು ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಡಿಮೆ ಬಡ್ಡಿ ದರ ಮತ್ತು ಹೆಚ್ಚು ಕಂತುಗಳಲ್ಲಿ ಮರಳಿ ಕೊಡುವ ಸಾಲದ ಯೋಜನೆಗಳಿದ್ದು ಪಿಂಚಣಿದಾರರಿಗೆ ಯಾವುದೇ ದಾಖಲೆಗಳು ಇಲ್ಲದೆ ಸಾಲವನ್ನು ಕಡಿಮೆ ಅವಧಿಯಲ್ಲಿ ನೀಡಲಾಗುವುದು ಎಂದರು.

ಎಸ್‌ಬಿಐ ಅಮೃತ ವೃಷ್ಟಿ ಠೇವಣಿ ಸೇರಿದಂತೆ ಡಿಬೆಂಚರ್‌ಗಳಲ್ಲಿ ಉಳಿತಾಯ ಮಾಡುವ ಅವಕಾಶಗಳು ಇದ್ದು ಠೇವಣಿ ಇಡುವ ಹಣಕ್ಕೆ ಭದ್ರತೆ ಇರುತ್ತದೆ ಎಂದರು.

ಎಸ್‌ಬಿಐ ಯೋನೋ ಆಪ್. ಪೆನಶೆನ್ ಸೇವಾ ಆಪ್‌ಗಳ ಬಳಕೆಯ ಬಗ್ಗೆ ತಿಳಿಸಿದರು. ಸಹಾಯಕ ಪ್ರಬಂಧಕರಾದ ಹಣಮಂತ ವ್ಯಾಪಾರಿ, ರಾಜು ಕಾನಡಾ, ವಿಜಯಕುಮಾರ ಧಾನಾವಥ ಬ್ಯಾಂಕ್ ಸೌಲಭ್ಯಗಳ ಕುರಿತು ತಿಳಿಸಿದರು.

ನಿವೃತ್ತ ಪ್ರಾಚಾರ್ಯರಾ ಪ್ರೊ. ಆರ್.ಎ.ಶಾಸ್ತ್ರಿಮಠ, ಪ್ರೊ. ಹೊಂಗಲ, ಪಿ.ಕೆ. ರಡ್ಡೇರ, ಖಾನಟ್ಟಿಯ ಗುಗ್ಗರಿ, ಎಸ್.ಎ. ಶಾಸ್ತ್ರಿಮಠ, ಬಿ.ಸಿ. ಪಾಟೀಲ, ಬಾಲಶೇಖರ ಬಂದಿ ಸೇರಿದಂತೆ ವಿವಿಧ ಇಲಾಖೆಯ ಪಿಂಚಣಿದಾರರು ಭಾಗವಹಿಸಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group