ಹಳ್ಳೂರ- ಪೋಲಿಯೋ ವೈರಸನಿಂದ ಹರಡುವ ಕಾಯಿಲೆಯಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಎರಡು ಹನಿ ಪೋಲಿಯೋ ಹನಿ ಹಾಕಿಸಿ ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡೋಣ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಹಂಚಿನಾಳ ಹೇಳಿದರು.
ಹಳ್ಳೂರ ಗ್ರಾಮದ ಗುಬ್ಬಿ ಬಸ್ ಸ್ಟಾಪ್ ನಲ್ಲಿರುವ ಜೈ ಹನುಮಾನ ಮಂದಿರದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪೋಲಿಯೋ ಹನಿ ಸುರಕ್ಷಿತವಾಗಿದ್ದು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಹನಿ ಹಾಕಿಸಿ ಪೋಲಿಯೋ ನಿರ್ಮೂಲನೆ ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸುವುದು ಸೂಕ್ತ, ಪೋಲಿಯೋ ನಿರ್ಮೂಲನೆ ಸರಕಾರವು ಮುಂದಾಗಿದ್ದು ಪೋಲಿಯೋ ಮುಕ್ತ ಸಮಾಜವನ್ನಾಗಿಸಲು ಪೋಷಕರು ಮುಂದಾಗಬೇಕೆಂದು ಹೇಳಿದರು.
ಈ ಸಮಯದಲ್ಲಿ ಸಮಾಜ ಸೇವಕರಾದ ಮುರಿಗೆಪ್ಪ ಮಾಲಗಾರ, ಮುಖಂಡ ಅಪ್ಪಯ್ಯ ರಡರಟ್ಟಿ, ಮಲ್ಲಿಕಾರ್ಜುನ ಶಿವಾಪೂರ, ಪ್ರಾ ಆ ಕೇಂದ್ರದ ಸಿಬ್ಬಂದ್ದಿಗಳಾದ ದೀಪಾ ಬಡಿಗೇರ, ಜಾನಕಿ ಹರಿಜನ, ಸದಾಶಿವ ಹೊಸಮನಿ, ಅಂಗನವಾಡಿಯ ಕಾರ್ಯಕರ್ತರಾದ ಗಂಗವ್ವ ಸಂತಿ, ಗಂಗವ್ವ ಪಾಲಬಾಂವಿ, ಆಶಾ ಕಾರ್ಯಕರ್ತೆಯರಾದ ವಿಧ್ಯಾ ರಡೆರಟ್ಟಿ, ವತ್ಸಲಾ ಹಿರೇಮಠ, ಪ್ರೀತಿ ಮಾಲಗಾರ ಸೇರಿದಂತೆ ಅನೇಕರಿದ್ದರು.

