ಸಿಂದಗಿ; ಸತತ ಎರಡು ವರ್ಷಗಳಿಂದ ಜನರ ಜನಜೀವನದಲ್ಲಿ ಚಲ್ಲಾಟವಾಡುತ್ತಿರುವ ಮಹಾಮಾರಿ ಕರೋನಾವನ್ನು ತಡೆಗಟ್ಟುವದಕ್ಕೆ ಲಸಿಕೆ ಸೂಕ್ತ ಮಾರ್ಗ ಎಂದು ಎಚ್.ಜಿ.ಪ್ರೌಢ ಶಾಲೆಯ ಶಿಕ್ಷಕ ಬಿ.ಎ..ಕೂಗೆ ಹೇಳಿದರು.
ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಬಾಲಕರ ಪ್ರೌಢ ಶಾಲಾ ವಿಭಾಗದಲ್ಲಿ ಬುಧವಾರ ಹಮ್ಮಿಕೊಂಡಿರುವ 15 ರಿಂದ 18 ವಯಸ್ಸಿನ ಮಕ್ಕಳಿಗೆ ಕೋವಿಡ ಲಸಿಕಾ ಅಭಿಯಾನವನ್ನು ಚಾಲನೆ ನೀಡಿ ಮಾತನಾಡಿ, ಮೊದಲು ಆರೋಗ್ಯ ನಂತರ ಕಲಿಕೆ ಎನ್ನುವ ಉದ್ದೇಶದಿಂದ ಸರ್ಕಾರ ಮಕ್ಕಳಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸೂಕ್ತ ಕಾರ್ಯವಾಗಿದೆ. ದೇಶದ ಶಿಕ್ಷಣದ ವ್ಯವಸ್ಥೆಯೇ ಕೊರೋನಾಕ್ಕೆ ಬಲಿಯಾದಂತಿದೆ ಅದನ್ನು ಯಥಾಸ್ಥಿತಿಗೆ ತರುವಲ್ಲಿ ನಾವೆಲ್ಲ ಶ್ರಮ ವಹಿಸಬೇಕೆಂದರೆ ದೇಶದ ಪ್ರತಿಯೊಬ್ಬರು ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು. 15-18 ವಯಸ್ಸಿನ ಮಕ್ಕಳಿಗೆ ಸಾಧ್ಯ ಕಡ್ಡಾಯ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೆ ಭಯವಿಲ್ಲದೆ ಲಸಿಕೆಯನ್ನು ಪಡೆದುಕೊಳ್ಳಬೇಕು ಒಟ್ಟು 157 ಮಕ್ಕಳಿಗೆ ಲಸಿಕಾಕರಣ ಮಾಡಲಾಯಿತು ಎಂದರು.
ಈ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಶಾಲೆ ಶಿಕ್ಷಕರಾದ ಬಿ.ಸಿ.ಪಾಟೀಲ, ಜಿ.ಆಯ್.ಲೋಣಿ, ಎಸ್.ಬಿ.ಕುಲಕರ್ಣಿ, ವ್ಹಿ.ಎಮ್.ಪಾಟೀಲ, ಪಿ.ಎಸ್.ಪಾಟೀಲ, ಜಿ.ಬಿ.ಲೋಣಿ, ಆರ್.ಎಸ್.ಕಾರಜೋಳ, ಎಮ್.ವ್ಹಿ.ಅಡಗಲ್ಲ, ಎಮ್.ಎಸ್.ಧೂಮಕನಾಳ ಸೇರಿದಂತೆ ಇತರರು ಇದ್ದರು.