Homeಲೇಖನವಚನ ಗಾನ ಗಾರುಡಿಗ ಡಾ. ಮೃತ್ಯುಂಜಯ ಶೆಟ್ಟರ

ವಚನ ಗಾನ ಗಾರುಡಿಗ ಡಾ. ಮೃತ್ಯುಂಜಯ ಶೆಟ್ಟರ

ನಾವು – ನಮ್ಮವರು

ಡಾ. ಮೃತ್ಯುಂಜಯ ಶೆಟ್ಟರ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಅಡಿಯಲ್ಲಿ ನಡೆಯುವ ಅಕ್ಕನ ಅರಿವು ವೇದಿಕೆಯ ಗೂಗಲ್ ಮೀಟ್ ನಲ್ಲಿ ಪ್ರತಿ ರವಿವಾರ ತಮ್ಮ ವಚನ ಗಾಯನದಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸುವ ಅತ್ಯಂತ ನಯ -ವಿನಯದ ಸರಳ ವ್ಯಕ್ತಿತ್ವದವರು. ಎಲ್ಲಿಯೂ ತಮ್ಮ ಬಗೆಗೆ ಏನೂ ಹೇಳಿ ಕೊಳ್ಳದ ನಿಗರ್ವಿಜೀವಿ ಎಂದು ಹೇಳಬಹುದು.ಇವರಲ್ಲಿ ಬಸವತತ್ವದ ಬಗೆಗೆ ಕಾಳಜಿ, ನಿಷ್ಠೆ, ಶ್ರದ್ದೆ, ಅಭಿಮಾನ ಎಲ್ಲವೂ ತುಂಬಿ ತುಳುಕುತ್ತಿದೆ.

ಅಂತಾರಾಷ್ಟೀಯ ಖ್ಯಾತಿಯ ಡಾ. ಮೃತ್ಯುಂಜಯ. ಜಿ. ಶೆಟ್ಟರ್ ಅವರು ಏಪ್ರಿಲ್ 21,1964 ರಲ್ಲಿ ಧಾರವಾಡದಲ್ಲಿ ಜನಿಸಿದರು. ಕನ್ನಡದ ಕಣ್ಮಣಿ, ಸಂಶೋಧಕ, ಸಾಹಿತಿ, ಕೆ.ಎಲ್.ಇ ಸಂಸ್ಥಾಪಕರಲ್ಲೊಬ್ಬರಾದ ಲಿಂಗೈಕ್ಯ ಪ್ರೊ. ಶಿ. ಶಿ ಬಸವನಾಳರ ಮೊಮ್ಮಗ ಮತ್ತು ದಾವಣಗೆರೆಯ ಬಸವ ತತ್ವ ನಿಷ್ಠರಾದ ಅಜ್ಜoಪುರ ಶೆಟ್ಟರ ಅವರ ಮೊಮ್ಮಗ ಎಂಬ ಹೆಮ್ಮೆ ಇವರದು.

ಡಾ. ಮೃತ್ಯುಂಜಯ ಶೆಟ್ಟರ ಅವರು ಸಂಗೀತ ಸಾಮ್ರಾಟರಾದ ಪಂ. ಡಾ. ಮಲ್ಲಿಕಾರ್ಜುನ್ ಮನ್ಸೂರ, ಪಂ. ಬಸವರಾಜ್ ರಾಜಗುರು, ಪಂ. ಸಂಗಮೇಶ್ವರ ಗುರುವ, ಪಂ. ಪ್ರಭುದೇವ ಸರದಾರ, ಪಂಡಿತ್ ವಿ.ಆರ್.ಅಠವಲೆ, ಪಂ. ಸುಧಾಕರ, ದಿಗ್ರಜಕರ, ಶ್ರೀಮತಿ ಜಾನಕಿ ಅಯ್ಯರ್ ಅಂತಹ ದಿಗ್ಗಜರಲ್ಲಿ ಹಾಗೂ ಇನ್ನೂ ಅನೇಕ ಹಿರಿಯ ಚೇತನರಲ್ಲಿ ಸಂಗೀತದ ಶಿಷ್ಯತ್ವ ಪಡೆದುಕೊಂಡಿದ್ದಾರೆ. ಜಯಪುರ, ಗ್ವಾಲಿಯರ, ಕಿರಾಣಾ ಘರಾಣಾ ಸಮರ್ಥವಾಗಿ, ಸುಂದರವಾಗಿ ಶಾಸ್ತ್ರೀಯ ಬದ್ಧವಾಗಿ ಹಾಡುತ್ತಾರೆ. ಇವರು ಸಂಗೀತದ 30 ಪ್ರಕಾರಗಳನ್ನು ಹಾಡುವ ಅಪರೂಪದ ಅದ್ಭುತ ಕಲಾವಿದರು.

ಡಾ. ಮೃತ್ಯುಂಜಯ ಶೆಟ್ಟರ್ ಅವರು ಹಿಂದುಸ್ತಾನಿ ಸಂಗೀತದ ಅಪ್ರತಿಮ, ಅತ್ಯಂತ ಪ್ರತಿಭಾವಂತ, ಸುಮಧುರ ಗಾಯಕರೆಂದು ಸಮಗ್ರ ಭಾರತದ ತುಂಬಾ ಅಸಂಖ್ಯಾತ ಯಶಸ್ವಿ ಗಾಯನ ಕಾರ್ಯಕ್ರಮಗಳನ್ನು ನೀಡಿ ಸುವಿಖ್ಯಾತಿ ಪಡೆದಿದ್ದಾರೆ.ಪ್ಯಾಸಾಡೋನಾ, ವಾಷಿಂಗ್ಟನ್ ಡಿ. ಸಿ, ಮೇರಿಲ್ಯಾoಡ, ಸ್ಯಾನಫ್ರಾನ್ಸಿಸ್ಕೊ, ಲಾಸ್ಏoಜಲಿಸ್, ನ್ಯೂಯಾರ್ಕ್, ನ್ಯೂಜರ್ಸಿ, ಬೋಸ್ಟನ್, ಕನೆಕ್ಟಿಕಟ್, ಬಾಲ್ಟಿಮೋರ್, ವರ್ಜಿನಿಯಾ, ರೋಡಐಲ್ಯಾoಡ, ನ್ಯೂಹಾವನ್, ಫಿಟ್ಸಬರ್ಗ್ ಇನ್ನೂ ಅನೇಕ ದೇಶ ವಿದೇಶಗಳಲ್ಲಿ ಹಿಂದುಸ್ತಾನಿ ಗಾಯನದ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿ ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದಿದ್ದಾರೆ.ಸುಮಾರು 40 ವರ್ಷಗಳಿಂದ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಮೃತ್ಯುಂಜಯ ಶೆಟ್ಟರ ಅವರು ತಮ್ಮ ಬಿ.ಮ್ಯೂಸಿಕ್ ಪದವಿಯನ್ನು 1985 ರಲ್ಲಿ ಪ್ರಥಮ ಸ್ಥಾನದೊoದಿಗೆ, ಶ್ರೀಮತಿ ಅಂಬಾಬಾಯಿ ಹಾನಗಲ್ ಚಿನ್ನದ ಪದಕ ಮತ್ತು 1987 ರಲ್ಲಿ ಎಂ. ಮ್ಯೂಸಿಕ್ ಪ್ರಥಮ ಸ್ಥಾನದೊoದಿಗೆ ಶ್ರೀಮತಿ ಶಾಂತಾದೇವಿ ಮಾಳವಾಡ ಚಿನ್ನದ ಪದಕದೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಮುಗಿಸಿದರು. ಠುಮರಿ ಗಾಯನದ ಸೌಂದರ್ಯ ಸಮೀಕ್ಷೆ, ಪಿ.ಎಚ್. ಡಿ ಪದವಿಯನ್ನೂ ಸಹಿತ 2008ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಮುಗಿಸಿದರು.
ಇದರ ಜೊತೆಗೆ ಧೃಪದ ಶಿಬಿರ, ಠುಮರಿ ಶಿಬಿರ, ವಚನ ಗಾಯನ ಶಿಬಿರ, ರಂಗಗೀತೆ ಶಿಬಿರ, ನಾಟ್ಯ ಸಂಗೀತ ಶಿಬಿರ, ಭಾವಗೀತೆ ಶಿಬಿರ,ಭಕ್ತಿಗೀತೆ ಶಿಬಿರ,ದಾಸರ ಪದ ಶಿಬಿರ, ಭಜನ ಸಂಗೀತ ಶಿಬಿರ ಮತ್ತು ಖಯಾಲ ಶಿಬಿರಗಳಲ್ಲಿ ಭಾಗಿಯಾಗಿದ್ದಾರೆ.

ಡಾ. ಮೃತ್ಯುಂಜಯ ಶೆಟ್ಟರ ಅವರು ತಮ್ಮಆರನೆಯ ವಯಸ್ಸಿನಲ್ಲಿಯೇ ಪ್ರಥಮ ಸಂಗೀತ ಕಾರ್ಯಕ್ರಮವನ್ನು ಕೊಟ್ಟಿದ್ದಾರೆ. ಭಾರತದ ಎಲ್ಲಾ ಪ್ರಸಿದ್ಧ ಸಂಗೀತ ಉತ್ಸವಗಳು, ಕರ್ನಾಟಕದ ಎಲ್ಲ ಪ್ರಸಿದ್ಧ ಸಂಗೀತ ಉತ್ಸವಗಳು, ವಿಶ್ವದ ಅನೇಕ ಕಡೆಗಳಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳು ಮತ್ತು ಕರ್ನಾಟಕ ರಾಜ್ಯದ ಬಹುತೇಕ ಎಲ್ಲ ಊರುಗಳಲ್ಲಿ ಹಿಂದುಸ್ತಾನಿ ಗಾಯನದ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಡಾ. ಮೃತ್ಯುಂಜಯ ಶೆಟ್ಟರ ಅವರು ಹಲವಾರು ಸಂಘಗಳ ಸದಸ್ಯತ್ವವನ್ನು ಹೊಂದಿದ್ದಾರೆ.

1.. ಕಲಾವಿಹಾರಿ ನಿರ್ದೇಶಕರು
2.. ಭಾರತೀಯ ಸಂಗೀತ ಸೇವಾ ಟ್ರಸ್ಟ್ ನಿರ್ದೇಶಕರು
3.. ಇಂಡಿಯನ್ ಮ್ಯೂಸಿಕ್ ಕಾಂಗ್ರೆಸ್ ಕೊಲ್ಕತ್ತಾ ಸದಸ್ಯರು
4.. ಡಾಕ್ಟರ್ ಗಂಗೂಬಾಯಿ ಹಾನಗಲ್ ಅಂತಾರಾಷ್ಟ್ರೀಯ ಗುರುಕುಲ ಸದಸ್ಯರು
5.. ರಂಗಾಭಿನಯ ಸದಸ್ಯರು
6.. ಅಭಿನವ ಭಾರತೀ ಸದಸ್ಯರು
7.. ನಿನಾದ ಸದಸ್ಯರು
8.. ಸ್ವರ ಭಾರತೀ ಸದಸ್ಯರು
9.. ಸ್ವರ ಸುಗಂಧ ಸದಸ್ಯರು
10.. ರಾಗ ರಂಗ ಸದಸ್ಯರು
11.. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2008 ರಿಂದ 2011ರವರೆಗೆ ಸದಸ್ಯರು

ಡಾ. ಮೃತ್ಯುಂಜಯ ಶೆಟ್ಟರ ಅವರ ಇತರ ಕಾರ್ಯ ಚಟುವಟಿಕೆಗಳು

1.. ಸ್ವರ ಸಂಚಾರಿ
2.. ವಚನ ವಿಹಾರಿ
3.. ದಾಸದಾರಿ ವಿನೂತನ ಕಾರ್ಯಕ್ರಮಗಳನ್ನು ನಿರೂಪಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ.
4.. ಸಂಗೀತ ಉಳಿಸಿ ಬೆಳೆಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
5.. ಸಂಗೀತ ನಾಟಕ ಅಕಾಡೆಮಿ, ನವ ದೆಹಲಿಯಿಂದ ಸಂಗೀತ ಕುರಿತು ಸಾಕ್ಷ್ಯ ಚಿತ್ರ
6.. ತಾನಸೇನ ನಾಟಕದಲ್ಲಿ ತಾನಸೇನ ಪಾತ್ರ
7.. ಅಂಜಿ ನಾಟಕಕ್ಕೆ ಸಂಗೀತ ನಿರ್ದೇಶಕರು
8.. ಅತ್ಯುತ್ತಮ ವಾಗ್ಮಿ, ನಿರ್ದೇಶಕ, ನಟ, ರಂಗಕರ್ಮಿ, ಮಿಮಿಕ್ರಿ ಕಲಾವಿದ, ಕವಿ, ಲೇಖಕ, ಸಂಗೀತ ನಿರ್ದೇಶಕರು
9.. ಕರ್ನಾಟಕದ ಹಾಗೂ ಭಾರತದ ಅನೇಕ ಪತ್ರಿಕೆಗಳು ಇವರ ಗಾಯನ ಮೆಚ್ಚಿ ಇವರ ಬಗೆಗೆ ಬರೆದಿವೆ.

ಡಾ. ಮೃತ್ಯುಂಜಯ ಶೆಟ್ಟರ ಅವರು ಜಗತ್ತಿನಾದ್ಯoತ 65 ಕ್ಕಿಂತ ಹೆಚ್ಚು ಪ್ರಶಸ್ತಿ, ಸನ್ಮಾನ, ಬಿರುದು, ಬಹುಮಾನಗಳನ್ನು ಪಡೆದಿದ್ದಾರೆ. ಇಲ್ಲಿ ಕೆಲವೊಂದು ಮಾತ್ರ ಉಲ್ಲೇಖಿಸುತ್ತಿದ್ದೇನೆ

1.. ಅಭಿನವ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿ, ಬಿರುದು.ಶ್ರೀ ತೋಂಟದಾರ್ಯ ಮಠ ಗದಗ
2..ಪೂಜ್ಯ ತರಳಬಾಳು ಶ್ರೀಗಳಿಂದ ಪ್ರಶಸ್ತಿ
3..ಬಸವರಾಜ ಮನ್ಸೂರ ರಾಷ್ಟ್ರಪ್ರಶಸ್ತಿ
4..ಅ. ನ. ಕೃ. ರಾಜ್ಯ ಪ್ರಶಸ್ತಿ
5.ಸ್ವರ ಸಾಗರ ಪ್ರಶಸ್ತಿ
6..ರೋಟರಿ ಇಂಟರನ್ಯಾಷನಲ್ ಪ್ರಶಸ್ತಿ
7.ದಸರಾ ಪ್ರಶಸ್ತಿ
8..ಮಧುರ ಗಾನ ಪ್ರಶಸ್ತಿ
9..ಮೇರಿಲ್ಯಾoಡ್ ಪ್ರಶಸ್ತಿ
10..ಬೋಸ್ಟನ್ ಪ್ರಶಸ್ತಿ
11..ಕನೆಕ್ಟಿಕಟ್ ಪ್ರಶಸ್ತಿ
12..ನಾದಲೋಲ ಪ್ರಶಸ್ತಿ
13..ರಾಷ್ಟೀಯ ಗೌರವ ಅವಾರ್ಡ್
14..ಸ್ವರ ಸಂಸ್ಕಾರ ಪ್ರಶಸ್ತಿ
15..ಗಾನ ಗಂಧರ್ವ ಪ್ರಶಸ್ತಿ
16..ಗಾಯನ ಭೂಷಣ ಪ್ರಶಸ್ತಿ
17..ನಾಡಹಬ್ಬ ಪ್ರಶಸ್ತಿ
18..ವರ್ಷದ ಶ್ರೇಷ್ಠ ವ್ಯಕ್ತಿ ಪ್ರಶಸ್ತಿ
19..ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ
20..ಸಂಗೀತ ಸೌರಭ ಪ್ರಶಸ್ತಿ
21..ಸಿತಾರ ನಿಕೇತನ ಪ್ರಶಸ್ತಿ -ಅಮೇರಿಕಾ
22.ಶ್ರೀ ಪಂಚಾಕ್ಷರಿ ಕೃಪಾ ಭೂಷಣ ಪ್ರಶಸ್ತಿ
23..ರಮಣಶ್ರೀ ಪ್ರಶಸ್ತಿ
24..ಇಂಟರ್ನ್ಯಾಷನಲ್ ವೋಕಲಿಸ್ಟ್ ಪ್ರಶಸ್ತಿ – ಮೆಲ್ಬೋರ್ನ್
25..ಕೆನಡಾ ಪ್ರಶಸ್ತಿ

ಶಿಕ್ಷಕರಾಗಿ ಅಸಂಖ್ಯ ವಿದ್ಯಾರ್ಥಿಗಳಿಗೆ ಸಂಗೀತದ ಧಾರೆಯೆರೆದಿರುವ ಡಾ. ಮೃತ್ಯುಂಜಯ ಶೆಟ್ಟರ ಅವರು ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳು ಸ್ಥಾಪಿಸಿದ ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅಧ್ಯಯನ,ಅಧ್ಯಾಪನ, ಮತ್ತು ನಿತ್ಯಸಾಧನೆ ಇವೆಲ್ಲವುಗಳ ಮೂಲಕ ಸಂಗೀತ ಪರಂಪರೆಯನ್ನು ನಿರಂತರ ಮುಂದುವರೆಸುತ್ತಿರುವ ಅವರು ನಾಡಿನ ಮಹತ್ವದ ಕಲಾರಾಧಕರಾಗಿದ್ದಾರೆ. ತಮ್ಮ ಎಲ್ಲ ಸಂಗೀತ ಕಚೇರಿಗಳಲ್ಲಿ ವಚನಗಳನ್ನು ಪ್ರಸ್ತುತಪಡಿಸುವ ಇವರು ಆ ಮೂಲಕ ಶರಣರ ವೈಚಾರಿಕ ತತ್ವಗಳನ್ನು ಹಾಡುತ್ತಿರುವುದು ವಿಶೇಷ. ವಚನ ಸಂಗೀತಕ್ಕೆ ಈ ರೀತಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಡಾ.ಶೆಟ್ಟರ್ ಅವರ ಸಾಧನೆ ಎಲ್ಲ ಮೇರೆಯನ್ನು ಮೀರಿದ್ದು ಎಂದು ಹೇಳಬಹುದು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group