‘ವಚನ- ದಾಸ -ಸಂಭ್ರಮ’ ಪುಸ್ತಕ ಬಿಡುಗಡೆ ಹಾಗೂ ದಾಸಸಾಹಿತ್ಯ ವಿಚಾರಗೋಷ್ಠಿ

Must Read

ಬೆಂಗಳೂರು – ನಗರದ ಸಾಹಿತ್ಯ ವಿಚಾರ ವೇದಿಕೆ ಮತ್ತು ವಿಜಯ ಸಂಜೆ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಾಧ್ಯಾಪಕ ಸಂಶೋಧಕ ಡಾ. ಆರ್. ವಾದಿರಾಜು ಸಂಪಾದಿಸಿರುವ ‘ವಚನ -ದಾಸ -ಸಂಭ್ರಮ‘ ಕೃತಿ ಲೋಕಾರ್ಪಣೆ ಹಾಗೂ ದಾಸ ಸಾಹಿತ್ಯ ವಿಚಾರಗೋಷ್ಠಿಯನ್ನು ಬೆಂಗಳೂರಿನ ಜಯನಗರ 4ನೇ ಬ್ಲಾಕ್ ವಿಜಯ ಸಂಜೆ ಪದವಿಪೂರ್ವ ಕಾಲೇಜಿನ ಆವರಣದ ರಾಮಸ್ವಾಮಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಹಿರಿಯ ದಾಸ ಸಾಹಿತ್ಯ ಸಂಶೋಧಕ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತ, ಈ ಶತಮಾನದಲ್ಲಿ ಮತ್ತೆ ವಚನಕಾರರ ಮತ್ತು ಹರಿದಾಸರ ವೈಭವವನ್ನು ಮರುಕಳಿಸುವಂತೆ ಈ ಕೃತಿ ಮೂಡಿಬಂದಿದೆ.

ಕನ್ನಡ ಕಾವ್ಯ ಪ್ರಪಂಚದ ಎರಡು ಕಣ್ಣುಗಳಂತೆ ಇರುವ ವಿಶಿಷ್ಟ ಪ್ರಕಾರದ ಅಧ್ಯಯನದಿಂದ ಮನಸ್ಸಿನ ದುಗಡ ದೂರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ,ಕಾಲೇಜಿನ ಪ್ರಾಂಶುಪಾಲ ಪಿ.ಸಿ ನಾಗರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದರು.

ಕನ್ನಡ ಪ್ರಾಧ್ಯಾಪಕ ಡಾ.ಎಸ್ ಎಲ್ ಮಂಜುನಾಥ ಕೃತಿ ಕುರಿತು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ನಡೆದ ದಾಸ ಸಾಹಿತ್ಯ ವಿಚಾರಗೋಷ್ಠಿಯಲ್ಲಿ ಡಾ. ವಿದ್ಯಾ ಕಸಬೇರವರ ಅಧ್ಯಕ್ಷತೆಯಲ್ಲಿ ಡಾ.ವಾದಿರಾಜ ಅಗ್ನಿ ಹೋತ್ರಿರವರು ‘ಹರಿದಾಸರ ಛಂದೋ ಮಾಲಿಕೆ’ ಕುರಿತು, ಡಾ.ವಿದ್ಯಾ ರಾವ್ ರವರು ‘ಶ್ರೀ ವ್ಯಾಸರಾಯರ ಸುಳಾದಿಯ ಅಂಕಿತ ಸಂದಿಗ್ಧ ಸ್ಪಷ್ಟೀಕರಣ’ ಬಗ್ಗೆ, ಡಾ.ಎಲ್ ಸುಧಾ ಅವರು’ ಪಾಠ ಪರಿಷ್ಕರಣೆ ‘ವಿಷಯ ಮಂಡನೆ ಮಾಡಿದರು.

Latest News

ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ...

More Articles Like This

error: Content is protected !!
Join WhatsApp Group