spot_img
spot_img

ಮನೆ ಮನಂಗಳಲ್ಲಿ ವಚನ ಕಾರ್ಯಕ್ರಮ

Must Read

- Advertisement -

“ಮಲ್ಲಿಕಾರ್ಜುನ ವೃದ್ಧಾಶ್ರಮ” ಸಂಗಮೇಶ್ವರ ನಗರದಲ್ಲಿ ಶರಣ ದಂಪತಿಗಳಾದ ಉಮಾ ದುಂಡಪ್ಪ ಸಂಕೇಶ್ವರ ಸೊಸೆ ದೀಪಾ, ಮೊಮ್ಮಕ್ಕಳಾದ ನೇಹಾಲ ಮತ್ತು ನೀಹಾರಿಕಾ ಸಂಕೇಶ್ವರ ಅವರು ದಿವಂಗತ ರಾಜಶೇಖರ ಸಂಕೇಶ್ವರ ಅವರ ‌ಹುಟ್ಟು ಹಬ್ಬದ ನಿಮಿತ್ತ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮನೆ ಮನೆಗಳಲ್ಲಿ ಮನ ಮನಂಗಗಳಿಗೆ ವಚನ ಕಾರ್ಯಕ್ರಮವನ್ನು ದಿ 2 ರಂದು ಆಶ್ರಮದಲ್ಲಿ ನಡೆಸಿಕೊಟ್ಟರು.

ಶರಣೆ ಸುನಿತಾ ನಂದೆಣ್ಣವರ ಅವರು ಮಾತನಾಡಿ, ಬಸವಣ್ಣನವರ ವಚನಗಳು ಆತ್ಮಸ್ಥೈರ್ಯ ತುಂಬುವ ವಚನಗಳಾಗಿದ್ದು ಅವುಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು. ಎಲ್ಲರ ತಂದೆ ತಾಯಿ ಬಂದು ಬಳಗ ಭಗವಂತನೇ ಆಗಿದ್ದು ನನಗಾರೂ ಇಲ್ಲ ಅನ್ನುವುದಕ್ಕಿಂತ ನಾವು ಜೀವನದ ಸಂಜೆಯ ಸಮಯವನ್ನು ಆಧ್ಯಾತ್ಮಿಕ ಧನಾತ್ಮಕ ವಿಚಾರಗಳತ್ತ ಕೊಂಡೊಯ್ದು ಧ್ಯಾನದಲ್ಲಿ ತೊಡಗಿದರೆ ದುಃಖದಿಂದ ಪಾರಾಗಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷರು ಎಸ್ ಜಿ ಸಿದ್ನಾಳರು, ಆಶ್ರಮದ ವೃದ್ದರನ್ನು ಅವರ ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ನಿಮ್ಮಿಂದ ಮಕ್ಕಳು ಒತ್ತಾಯ ಪೂರ್ವಕ ಆಸ್ತಿಗಳನ್ನು ಕಿತ್ತುಕೊಂಡಿದ್ದರೆ, ತಾವು ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾಗಿದ್ದು. ತಮಗೆ ಯಾವುದೇ ರೀತಿಯ ಸಂಘದಿಂದ ಸಹಾಯ ಬೇಕಾದಲ್ಲಿ ತಮ್ಮನ್ನು ಸಂಪರ್ಕಿಸಬೇಕು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು .

- Advertisement -

ಶರಣ ದುಂಡಪ್ಪ ಸಂಕೇಶ್ವರ ಅವರು ವಯೋವೃದ್ಧರಲ್ಲಿ ಆತ್ಮವಿಶ್ವಾಸ ತುಂಬುವಂತೆ ಮಾತನಾಡಿದರು. ಶರಣೆ ಶೋಭಾ ಶಿವಳ್ಳಿ ಸುನಿತಾ ನಂದೆಣ್ಣವರ ಪ್ರಾರ್ಥನೆ ನಡೆಸಿಕೊಟ್ಟರು. ಕಾರ್ಯದರ್ಶಿ ಶಂಕರ ಶೆಟ್ಟಿ , ಶೈಲೇಜಾ ಮುನವಳ್ಳಿ, ಪ್ರೇಮಾ ಪುರಾಣಿಕ ಮಠ್, ರೇಖಾ ಮುದ್ದಾಪುರ ಮುಂತಾದವರು ಹಾಜರಿದ್ದರು.

- Advertisement -
- Advertisement -

Latest News

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...
- Advertisement -

More Articles Like This

- Advertisement -
close
error: Content is protected !!
Join WhatsApp Group