ವಚನ ಸಾಹಿತ್ಯ ಸರ್ವಧರ್ಮಗಳ ತಾಯಿ ಬೇರು ಇದ್ದಂತೆ ಇದನ್ನು ಪೋಷಿಸಿ ಬೆಳೆಸೋಣ – ಶ್ರೀಕಾಂತ ಶಾನವಾಡ ಅಭಿಮತ

Must Read

ಲಿಂಗಾಯತ ಸಂಘಟನೆ ವತಿಯಿಂದ ಶ್ರಾವಣ ಸತ್ಸಂಗ ಕಾರ್ಯಕ್ರಮ 

ವಚನಗಳು ಸರ್ವಧರ್ಮಗಳ ತಾಯಿ ಬೇರು ಇದ್ದಂತೆ ಇದನ್ನು ಪೋಷಿಸಿ ಬೆಳೆಸಿ ಆಚರಿಸುವ ಅನಿವಾರ್ಯತೆ ಈಗ ಬಂದೊದಗಿದೆ ಎಂದು ರವಿವಾರ ದಿ: 27ರಂದು ಬೆಳಗಾವಿಯ ಫ. ಗು. ಹಳ ಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ ಶ್ರಾವಣ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಕಾಂತ ಶಾನವಾಡ ಶರಣರ ತತ್ವಗಳು ಮತ್ತು ಸಮಾಜ ಕುರಿತಾದ ವಿಷಯವನ್ನು ವಿವರಿಸುತ್ತಾ ಮಾತನಾಡಿದರು.

ತತ್ವಗಳ ಮರು ಸ್ಥಾಪನೆ ಆಗಬೇಕಿದೆ. ಸಮಾಜದಲ್ಲಿ ಪ್ರಾಮಾಣಿಕತೆ, ಶ್ರದ್ಧೆಗೆ ಬೆಲೆ ಇಲ್ಲ. ಸಮಾಜ ವ್ಯಕ್ತಿಯನ್ನು ಭೋಗಿಯಾಗಿಸಿದೆ. ವಿವಿಧ ಸಂಘಟನೆಗಳು ಹುಟ್ಟಿ ಸಮಾಜವನ್ನು ಒಡೆಯುತ್ತಿವೆ ಹೊರತು ಸಂಘಟನೆ ಮಾಡುತ್ತಿಲ್ಲ. ಸಂಘಟನೆಯ ಹೆಸರಿನಲ್ಲಿ ನಾವೆಲ್ಲಾ ಒಡೆದು ಚೂರಾ ಗಿದ್ದೇವೆ. ನಾವು ಸಂಘಟಿತರಾಗಬೇಕಿದೆ. ತತ್ವಗಳು ಗೊತ್ತಿದ್ದರೂ ಗೊತ್ತಿಲ್ಲದಂತೆ ಬದುಕುವ ಪರಿಸ್ಥಿತಿ ಬಂದಿದೆ.ಧರ್ಮವನ್ನು ಪೂಜ್ಯನೀಯಗೊಳಿಸಲು ಮೂಲಕಾರಣ ಆಗಿರುವ ವಚನ ಸಾಹಿತ್ಯವನ್ನು ನಾವು ಅನುಪಾಲನೆ ಮತ್ತು ಅನುಕರಣೆ ಮಾಡಲೇಬೇಕಾಗಿದೆ ಅಂದಾಗ ಮಾತ್ರ ಸಮಾಜ ಮತ್ತು ಧರ್ಮ ಉಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ತನ್ನದೇ ಆದ ತತ್ವ ಆದರ್ಶಗಳ ಮೂಲಕ ದಕ್ಷತೆಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಿ ತಮ್ಮದೇ ನಡೆಯಿಂದ ಸರ್ಕಾರದ ಕಣ್ತೆರೆಸಿ ಈಗ ಬೆಳಗಾವಿ ನಗರದ ಡಿಸಿಪಿ ಆಗಿ ನೇಮಕಗೊಂಡಿರುವ ದಕ್ಷ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾಯಣ ಬರಮನಿ ಸರ್ವರ ಪ್ರೀತಿ ಮತ್ತು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕುಂದು ಬಾರದ ರೀತಿಯಲ್ಲಿ ಕಾನೂನು ರಕ್ಷಿಸುವ ಮತ್ತು ಪ್ರಾಮಾಣಿಕ ಸೇವೆ ಸಮಾಜಕ್ಕೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ, ಇದರ ಜೊತೆಗೆ ಎಲ್ಲರೂ ಸಹ ಶರಣ ತತ್ವಗಳ ಅನುಪಾಲನೆ ಮಾಡಿ ನಮ್ಮ ಜೀವನಕ್ಕೆ ಅರ್ಥ ಬರುವ ರೀತಿಯಲ್ಲಿ ಮುಂದೆ ಸಾಗೋಣ ಎಂದರು.

ಕಾರ್ಯಕ್ರಮದಲ್ಲಿ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ,ಎ.ಆಯ.ತುಪ್ಪದರು ದಾಸೋಹ ಸೇವೆ ಸಲ್ಲಿಸಿದರು ಶಂಕರ ಗುಡಸ, ಶಶಿಭೂಷಣ ಪಾಟೀಲ, ಸತೀಶ ಪಾಟೀಲ, ವಿಜಯ ಹುದಲಿಮಠ,ವಿ ಕೆ ಪಾಟೀಲ, ರಮೇಶ ಕಳಸನ್ನವರ, ಬಸವರಾಜ್ ಬಿಜ್ಜರಗಿ, ಶಿವಾನಂದ ನಾಯಕ,ಸುಜಾತಾ ಮತ್ತಿಕಟ್ಟಿ,ವಿದ್ಯಾ ಕರಕಿ, ಜಯಶ್ರೀ ಚಾವಲಗಿ, ಶೋಭಾ ದೇಯನ್ನವರ, ಬಿ ಪಿ ಜೆವನಿ, ಜ್ಯೋತಿ ಬದಾಮಿ, ಬಸವರಾಜ ಮತ್ತಿಕಟ್ಟಿ, ಶೇಖರ ವಾಲಿ ಇಟಗಿ, ಮಹದೇವ ಕೆ೦ಪಿಗೌಡರ, ಮಹಾದೇವಿ ತೆಗ್ಗಿ, ಕೆಂಪಣ್ಣ ರಾಮಪೂರಿ, ವಿರೂಪಾಕ್ಷಿ ದೂಡ್ಡಮನಿ,ಸಿದ್ದಪ್ಪ ಸಾರಾಪೂರಿ, ಗುರುಸಿದ್ದಪ್ಪ ರೇವಣ್ಣವರ, ಲಕ್ಷ್ಮಿಕಾಂತ ಗುರವ, ಎಂ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಶರಣರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸುರೇಶ ನರಗುಂದ ಸ್ವಾಗತಿಸಿದರು ಮಹಾದೇವಿ ಅರಳಿಯ ಪ್ರಾರ್ಥಿಸಿದರು,ಸಂಗಮೇಶ ಅರಳಿ ನಿರೂಪಿಸಿದರು,ವಚನ ಮಂಗಲ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group