ಮನುಕುಲದ ಉದ್ಧಾರಕ್ಕಾಗಿ ವಚನಗಳು ಇವೆ – ಶಾಸಕ ಮನಗೂಳಿ

Must Read

ಸಿಂದಗಿ; ೧೨ ನೇ ಶತಮಾನದಲ್ಲಿ ಶರಣರು ಸಂತರು ಜನಜಾಗೃತಿ ಮಾಡುವ ಮೂಲಕ ಮನಕುಲವನ್ನು ಉದ್ದಾರ ಮಾಡಲು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಓದುವ ಪ್ರವೃತ್ತಿಯನ್ನು ಬೆಳೆಸುವ ಕಾರ್ಯಕ್ಕೆ ಪಾಲಕರು ಮುಂದಾಗಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ ೮೫೪ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಯುವಜನತೆ ಧಾರ್ಮಿಕತೆ ಕಡೆ ಹೋಗದೇ ಆಧುನಿಕ ಜಗತ್ತಿನೆಡೆಗೆ ಹೋಗಿ ದಾರಿ ತಪ್ಪುತ್ತಿದ್ದಾರೆ. ಕಾರಣ ಶರಣರ ಚರಿತ್ರೆಗಳನ್ನು ಹಿಂದಿರುಗಿ ನೋಡಲು ನೈತಿಕ ಶಿಕ್ಷಣ ಅತ್ಯಗತ್ಯ ಮತ್ತು ಶರಣರ ಜಯಂತಿಗಳನ್ನು ಆಚರಿಸಿದರೆ ಸಾಲದು ಅವರ ಚಿಂತನೆಗಳು ಸದಾ ಜೀವಂತ ಇರಬೇಕಾದರೆ ನಿತ್ಯ ವಚನಗಳ ಪಠಣ ನಡೆಯಬೇಕು ಅಂದಾಗ ಜಯಂತಿ ಆಚರಿಸಿದಕ್ಕು ಸಾರ್ಥಕವಾಗುತ್ತದೆ ಎಂದು ತಿಳಿಸಿದ ಅವರು ಪಟ್ಟಣದಲ್ಲಿ ಸಿದ್ದರಾಮೇಶ್ವರ ವೃತ್ತ ಮತ್ತು ಪುತ್ಥಳಿ ಅನಾವರಣ ಕೆಲವೆ ದಿನಗಳಲ್ಲಿ ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದರು..

ಪದ್ಮರಾಜ ಮಹಿಳಾ ಕಾಲೇಜಿನ ಉಪನ್ಯಾಸ ಗಿರೀಶ ಕುಲಕರ್ಣಿ ಉಪನ್ಯಾಸ ನೀಡಿ, ಹನ್ನೆರಡನೇ ಶತಮಾನದ ಜಗಜ್ಯೋತಿ ಬಸವೇಶ್ವರರು ಹಾಗೂ ಸಿದ್ದರಾಮೇಶ್ವರರು ಕಾಯಕಯೋಗಿ ಶ್ರೇಷ್ಠ ವಚನಕಾರರಾಗಿದ್ದರು ಅಂತೆಯೆ ಎಲ್ಲ ಶರಣರು ಅವರನ್ನು ಅಪ್ಪಿಕೊಂಡಿದ್ದರು. ಡಾ. ಅಂಬೇಡ್ಕರರು ಬರೀ ಎಸ್‌ಸಿ ಎಸ್ಟಿ ಜನಾಂಗದವರಿಗಾಗಿ ಮಾತ್ರ ಮಿಸಲಾತಿ ಕಲ್ಪಿಸಿ ಸಂವಿದಾನ ರಚಿಸದೇ ಸಮ ಸಮ ಸಮಾಜ ನಿರ್ಮಾಣಕ್ಕೆ ಎಲ್ಲ ಸಮಾಜದ ಸಮಾನತೆಗಾಗಿ ಮಿಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸಂವಿದಾನ ರಚಿಸಿದ್ದಾರೆ ಅದಕ್ಕೆ ಅವರನ್ನು ಒಂದೇ ಸಮಾಜಕ್ಕೆ ಸಿಮೀತಗೊಳಿಸದೇ ಅವರನ್ನು ಸಮಾಜವನ್ನು ಅಪ್ಪಿಕೊಳ್ಳುವಂತಾಗಬೇಕು. ಅವರಂತೆ ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿಪಡೆಯುತ್ತಿದ್ದರು. ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು ಅಂತವರ ತತ್ವಾಧರ್ಶಗಳನ್ನು ನಾವೆಲ್ಲರೂ ಮೈಗೂಡಿಕೊಂಡಾಗ ಮಾತ್ರ ಜಯಂತಿ ಆಚರಿಸಿದಕ್ಕೆ ಸ್ವಾರ್ಥಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ವೈ.ಸಿ.ಮಯೂರ, ರಾಜಣ್ಣಿ ನಾರಾಯಣಕರ, ಗುತ್ತಿಗೆದಾರ ಕುಮಾರ ದೇಸಾಯಿ, ಗುರಣ್ಣ ಹುಮನಾಬಾದಿ, ಶಿವಾನಂದ ಹಚಡದ, ಸುನಂದಾ ಯಂಪೂರೆ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಪಂಡಿತ ಯಂಪೂರೆ, ಮಂಜು ಬಿಜಾಪುರ, ರಾಜು ನರಗೋದಿ, ಮಹೇಶ ಮನಗೂಳಿ ವೇದಿಕೆ ಮೇಲಿದ್ದರು.

ಕಂದಾಯ ಇಲಾಖೆಯ ಗಂಗಾಧರ ಸೋಮನಾಯಕ, ಉಪ ತಹಶೀಲ್ದಾರ ಇಂದ್ರಾಬಾಯಿ ಬಳಗಾನೂರ, ಎಸ್.ಎಂ.ತಾರನಾಳ, ಕಾನಿಪ ಅಧ್ಯಕ್ಷ ಮಹಾಂತೇಶ ನೂಲಾನವರ, ಆನಂದ ಶಾಬಾದಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ, ಶಿವನಗೌಡ ಬಿರಾದಾರ, ಭೀಮು ವಾಲೀಕಾರ, ಶಾರದಾ ಬೆಟಗೇರಿ, ಶೈಲಜಾ ಸ್ಥಾವರಮಠ, ಜಯಶ್ರೀ ಹದನೂರ, ಶಾಮಲಾ ಮಂದೆವಾಲಿ, ವರ್ಷಾ ಪಾಟೀಲ, ಭೋವಿ ಸಮಾಜದ ಮುಖಂಡರಾದ ನಿವೃತ್ತ ಶಿಕ್ಷಕ ಮುತ್ತಪ್ಪ ಪಾತ್ರೋಟಿ, ಭೀಮಾಶಂಕರ ಯಂಪೂರೆ, ದಿಲೀಪ ಆಲಕುಂಟೆ, ರವಿ ಚಾಕರೆ, ತಿರುಪತಿ ಬಂಡಿವಡ್ಡರ, ರವಿ ಯಂಪೂರೆ, ಲಕ್ಷö್ಮಣ ಆಲಕುಂಟೆ, ಮುತ್ತು ಆಲಕುಂಟೆ, ಪ್ರವೀಣ ಯಂಪೂರೆ, ಪರಸುರಾಮ ಯಂಪೂರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೆಜಿಎಸ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ತಹಶಿಲ್ದಾರ ಕರೇಪ್ಪ ಬೆಳ್ಳಿ ಸ್ವಾಗತಿಸಿದರು.
ಸಮಾಜದ ಅಧ್ಯಕ್ಷ ಪಂಡಿತ ಯಂಪೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶರಣು ಲಂಗೋಟಿ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group