spot_img
spot_img

ಸಮ ಸಮಾಜ ಕಟ್ಟಲು ಶ್ರಮಿಸಿದ ವಾಲ್ಮೀಕಿ – ಅಶೋಕ ಮನಗೂಳಿ

Must Read

- Advertisement -

ಸಿಂದಗಿ: ರಾಮಾಯಣ ಗ್ರಂಥವನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಮಹರ್ಷಿ ವಾಲ್ಮೀಕಿಯವರು ಅವರು ಸಣ್ಣ ಸಮುದಾಯವರು ಎಂದು ಗುರುತಿಸದೇ ಸಮ ಸಮಾಜ ಕಟ್ಟವಲ್ಲಿ ಶ್ರಮಿಸಿದಂತವರ ಆದರ್ಶಗಳನ್ನು ನಾವೆಲ್ಲರು ಪಾಲಿಸಿದ್ದಾದರೆ ಜಯಂತಿ ಆಚರಿಸಿದ್ದಕ್ಕೆ ಸ್ವಾರ್ಥಕವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಬದಲಾವಣೆ ಜಗದ ನಿಯಮ ಅನ್ನುವಂತೆ ಒಬ್ಬ ಬೇಡ ಕುಲದಲ್ಲಿ ಜನಿಸಿದ ರತ್ನಾಕರ ಬೇಟೆಗಾರರಾಗಿ, ದರೋಡೆಕೋರರಾಗಿದ್ದ ವಾಲ್ಮಿಕಿಯವರು ನಾರದ ಮುನಿಗಳ ಮಾತಿಗೆ ಕಟ್ಟುಬಿದ್ದು 12 ವರ್ಷ ರಾಮ ನಾಮ ಜಪಿಸಿ ರಾಮಾಯಣ ಕೃತಿಗೆ ಕಾರಣಿಕರ್ತರಾಗಿ ಇಡೀ ಜಗತ್ತಿಗೆ ರಾಮ, ಸೀತೆಯರ ಪರಿಚಯವನ್ನು ತಿಳಿಸಿಕೊಟ್ಟಿದ್ದಾರೆ ಅದಕ್ಕೆ ನಾವೆಲ್ಲ ಗ್ರಂಥವನ್ನು ಪೂಜಿಸುತ್ತಿದ್ದೇವೆ ವಿನಃ ಅದರ ಅಡಕಗಳನ್ನು ಮೈಗೂಡಿಸಿಕೊಳ್ಳಲು ತಯಾರಿಲ್ಲ ಅದನ್ನು ಜಾರಿಗೆ ತಂದು ಮುಂದಿನ ಪೀಳಿಗೆಗೆ ಅವರ ಚರಿತ್ರೆಯನ್ನು ತಿಳಿಪಡಿಸುವ ಕಾರ್ಯದಲ್ಲಿ ತೊಡಬೇಕಾಗಿದೆ ಎಂದರು.

ಉಪನ್ಯಾಸ ನೀಡಿದ ಡಿಎಸ್‍ಎಸ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ವಾಲ್ಮಿಕಿ ಅನ್ನುವದು ಒಂದು ಹೆಸರಾಗದೇ ಒಂದು ಶಕ್ತಿಯಾಗಿದೆ. ವಾಲ್ಮಿಕಿ, ವ್ಯಾಸ, ಡಾ. ಅಂಬೇಡ್ಕರ ಅವರು ದಲಿತ ಕುಟುಂಬದಲ್ಲಿ ಹುಟ್ಟಿದರು ಕೂಡಾ ಈ ದೇಶಕ್ಕೆ ಒಂದೊಂದಾಗಿ ಗ್ರಂಥ ಬರೆದು ದೇಶದ ಚರಿತ್ರೆಯನ್ನೇ ಬದಲಾವಣೆ ಮಾಡಿದ್ದಾರೆ. ಇಂದು ಬೇಡ ಸಮುದಾಯ ಯಾವ ಸ್ಥಿತಿಯಲ್ಲಿದೆ ಇಂದಿನ ಸರಕಾರ ತಿರುಗಿ ನೋಡಬೇಕಲ್ಲದೆ ವಾಲ್ಮೀಕಿ ಅವರನ್ನು ಅಯೋಧ್ಯಾದಲ್ಲಿ ಸ್ಥಾಪಿಸಿ ಆ ಸಮುದಾಯಕ್ಕೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.

- Advertisement -

ವಾಲ್ಮಿಕಿ ಸಮಾಜದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ತಾಲೂಕು ಅದ್ಯಕ್ಷ ಸಿದ್ದಲಿಂಗ ನಾಯ್ಕೋಡಿ ಮಾತನಾಡಿದರು.

ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಸಿಪಿಐ ಡಿ ಹುಲಗೆಪ್ಪ, ಸಮಾಜ ಕಲ್ಯಾಣಾಧಿಕಾರಿ ಜಿ.ಎಸ್.ಭೂಸಗೊಂಡ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ರೈತ ಸಂಘದ ಉತ್ತರ ವಲಯ ಅಧ್ಯಕ್ಷ ಪೀರು ಕೇರೂರ, ಈರಣ್ಣಾ ಕುರಿ ವೇದಿಕೆ ಮೇಲಿದ್ದರು.

ಎಚ್.ಜಿ.ಕನ್ಯಾ ಪ್ರೌಡಶಾಲೆಯ ವಿದ್ಯಾರ್ಥಿಗಳು  ಪ್ರಾರ್ಥನಾ ಗೀತೆ ಹಾಡಿದರು. ಬಿ.ಎಸ್.ಬನ್ನೇಟ್ಟಿ ಸ್ವಾಗತಿಸಿದರು. ಶಿಕ್ಷಕ ಡೊಣೂರ ನಿರೂಪಿಸಿದರು. ಬಿಇಓ ಆರೀಪ ಬಿರಾದಾರ ವಂದಿಸಿದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group