ಮುಧೋಳ – ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಇದೇ ದಿ. 7 ರಂದು ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಸಮಾಜ ಸೇವಾ ಧುರೀಣ ಸಂತಶ್ರೀ. ಆಯ್.ಎಸ್. ಮಂಟೂರ ಮಹಾರಾಜರ 11ನೆಯ ಸ್ಮರಣೋತ್ಸವ ಕಾರ್ಯಕ್ರಮವು ಜರುಗಲಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿ ತನ್ನಿಮಿತ್ತ ಇದೇ ಶುಕ್ರವಾರ ದಿ. 3 ರಿಂದ 7 ರ ವರೆಗೆ ಜಗಜ್ಜನನಿ ಶ್ರೀ ದೇವಿಯ ಪಾರಾಯಣವು ಬೆಳಿಗ್ಗೆ 5.30ರಿಂದ 6.30 ರ ವರೆಗೆ ಜರುಗುವುದು. ಸಾಯಂಕಾಲ 8 ರಿಂದ 8.45ರ ವರೆಗೆ ಪ್ರವಚನ ನಡೆಯುವದು. ಮಂಗಳವಾರ ದಿ. 7 ರಂದು ಮುಂಜಾನೆ 11 ಗಂಟೆಗೆ ಮಹಷಿ೯ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಸಮಾಜ ಸೇವಾ ಧುರೀಣ. ಸಂತಶ್ರೀ ಆಯ್ .ಎಸ್. ಮುಂಟೂರ ಮಹಾರಾಜರ 11ನೇ ಸ್ಮರಣೋತ್ಸವ ಕಾರ್ಯಕ್ರಮ ಜರುಗುವುದು. ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಹಾಗೂ ಸಂತಶ್ರೀ ಆಯ್ ಎಸ್ ಮಂಟೂರ ಮಹಾರಾಜರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ, ಪೂಜ್ಯರಿಂದ ಪ್ರವಚನ, ಹರಿ ಭಜನೆ, ಶಿವ ಭಜನೆ, ಸಾಧಕರಿಗೆ ಸತ್ಕಾರ ಹಾಗೂ ಜಗನ್ಮಾತೆ ದೇವಿಯ ಪಾರಾಯಣದ ಮಂಗಲ ಕಾರ್ಯಕ್ರಮ ಜರುಗುವುದು.
ಈ ಎಲ್ಲ ಕಾರ್ಯಕ್ರಮಗಳು ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ಜರುಗುವುದು ಎಂದು ಗುರುಪ್ರಸಾದ ಸ್ವಾಮೀಜಿ ತಿಳಿಸಿದ್ದಾರೆ.

