spot_img
spot_img

ಅಸಾಧ್ಯವನ್ನು ಸಾಧ್ಯವಾಗಿಸುವ ವರದ ಗಣಪತಿ ವ್ರತ

Must Read

- Advertisement -

ನಮ್ಮ ಧಾರ್ಮಿಕ ಆಚರಣೆಗಳಲ್ಲಿ ವರಸಿದ್ಧಿ ವಿನಾಯಕ, ವ್ರತ, ಸಂಕಷ್ಟಹರ ಗಣಪತಿ ವ್ರತ ಇತ್ಯಾದಿಗಳು ಪ್ರಮುಖ ಸ್ಥಾನವನ್ನು ಅಲಂಕರಿಸಿದೆ. ಆದರೆ, ಅಸಾಧ್ಯವಾದುದನ್ನು ಸಾಧ್ಯಗೊಳಿಸುವ ವ್ರತವಾದ “ವರದ ಗಣಪತಿ ವ್ರತ’’ವು ಇನ್ನೂ ಹೆಚ್ಚು ಪ್ರಚಲಿತದಲ್ಲಿ ಇರುವುದಿಲ್ಲ. ಈ ವ್ರತವನ್ನು ಶ್ರೀ ಸ್ವಾನಂದಾಶ್ರಮದಲ್ಲಿ ಸುಮಾರು ೧೭ ವರ್ಷಗಳಿಂದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆಶೀರ್ವಾದದಿಂದ ಲೋಕಕಲ್ಯಾಣಾರ್ಥಕ್ಕಾಗಿ ಆಚರಿಸಲಾಗುತ್ತಿದೆ.

ವ್ರತದ ಪರಿಚಯ
ಪೂರ್ವ ಕಾಲದಲ್ಲಿ ತ್ರಿಪುರಾಸುರನ ಸಂಹಾರಕ್ಕೆಂದು ಕೈಲಾಸದಿಂದ ಹೊರಟ ಶಿವನು, ನಂತರವೂ ಯುಗ ಯುಗಗಳು ಕಳೆದರೂ ಪಾರ್ವತಿಯು ತನ್ನ ತಂದೆಯಾದ ಹಿಮವಂತನಲ್ಲಿ ಪತಿಯ ವಿಯೋಗವನ್ನು ಅರಿಕೆ ಮಾಡಿಕೊಳ್ಳುತ್ತಾಳೆ. ಪತಿಯ ಪ್ರಾಪ್ತಿಗಾಗಿ ವಿಶೇಷವಾದ ವ್ರತವನ್ನೋ, ದಾನವನ್ನೋ, ತಪಸ್ಸನ್ನೋ ಉಪದೇಶಿಸುವಂತೆ ಕೋರುತ್ತಾಳೆ. ಆಗ ಹಿಮವಂತನು ಕ್ಷಿಪ್ರ ಕಾರ್ಯಸಿದ್ಧಿಗಾಗಿ ಹಿಂದೆ ಸುಬ್ರಹ್ಮಣ್ಯ ಸ್ವಾಮಿಯು ತಾರಕಾಸುರನ ಸಂಹಾರಕ್ಕಾಗಿ ಮತ್ತು ನಾರದಾದಿ ಮಹರ್ಷಿಗಳು ಲೋಕಕಲ್ಯಾಣಕ್ಕಾಗಿ ಆಚರಿಸಿದ “ವರದ ಗಣಪತಿ ವ್ರತ’’ವನ್ನು ಆಚರಿಸಿದರೆ ಶಿವನು ಎಲ್ಲಿದ್ದರೂ ನಿಶ್ಚಯವಾಗಿ ದರ್ಶನವನ್ನು ನೀಡುತ್ತಾನೆ ಎಂದು ಹೇಳುವನು. ಅದರಂತೆ ಪಾರ್ವತಿಯು ಮಾಡಿದ ವರದ ಗಣಪತಿ ವ್ರತ ವಿಧಿಪೂರ್ವಕವಾಗಿ ಆಚರಿಸಲು ಶಿವನು ಉದ್ಯಾಪನಾ ಹೋಮದ ದಿನ ಪೂರ್ಣಾಹುತಿ ಸಮಯಕ್ಕೆ ಸರಿಯಾಗಿ ಪ್ರತ್ಯಕ್ಷನಾದನು ಎಂದು ಗಣೇಶ ಪುರಾಣದಲ್ಲಿ ಉಲ್ಲೇಖವಿದೆ.

ವ್ರತ ವಿಧಾನ
ಈ ವ್ರತವನ್ನು ಶ್ರಾವಣ ಶುದ್ಧ ಚತುರ್ಥಿ (ದೂರ್ವಾ ಗಣಪತಿ ವ್ರತದ) ದಿನದಿಂದ ಭಾದ್ರಪದ ಶುದ್ಧ ಚತುರ್ಥಿಯವರೆಗೆ ಒಂದು ತಿಂಗಳ ಪರ್ಯಂತ ವಿಧಿ ಪೂರ್ವಕವಾಗಿ ಅಂದರೆ ವರಸಿದ್ಧಿ ವಿನಾಯಕ ವ್ರತದಂತೆಯೇ (ಅರ್ಘ್ಯ, ಪಾದ್ಯ, ಫಲ, ಪುಷ್ಪ, ಧೂಪ, ದೀಪ, ನೈವೇದ್ಯಾದಿ ಪೂಜಾ ಕ್ರಮದಲ್ಲಿ) ಏಕಾಕ್ಷರ ಮಂತ್ರಜಪದಿಂದ ಆಚರಿಸಬೇಕು. ನಿತ್ಯವೂ ಅನ್ನ ದಾನದಿಂದ ಭಕ್ತರನ್ನು ಸಂತೃಪ್ತಗೊಳಿಸಬೇಕು. ಈ ವ್ರತವನ್ನು ಶ್ರಾವಣ ಮಾಸದಲ್ಲಿ ಬರತಕ್ಕ ಎಲ್ಲಾ ವ್ರತಗಳೊಂದಿಗೆ ಆಚರಿಸಬೇಕು. ನಂತರ ಭಾದ್ರಪದ ಪಂಚಮಿ ದಿನದಂದು ಅಷ್ಟದ್ರವ್ಯ ಸಹಿತ ಸಹಸ್ರ ಸಂಖ್ಯೆಯಲ್ಲಿ ಗಣೇಶ ಮೂಲ ಮಂತ್ರದಿಂದ ಹೋಮ ಮಾಡಿ ಪೂರ್ಣಾಹುತಿಯಿಂದ ಪರಿಸಮಾಪ್ತಿ ಮಾಡಬೇಕು. ಹೀಗೆ ಮಾಡಿದಲ್ಲಿ ಗಣಪತಿಯು ತನ್ನ ಭಕ್ತರಿಗೆ ಬೇಡಿದ ವರ ನೀಡಿ ಸಂಕಲ್ಪಿಸಿದ ಇಷ್ಟಾರ್ಥಗಳನ್ನು ಈಡೇರಿಸುವನು.

- Advertisement -

ಈ ವ್ರತವು ಸಾಧಕರ ಅಭೀಷ್ಟ ಫಲ ಪ್ರದಾಯಕವೆಂದು ಗಣೇಶ ಪುರಾಣದಲ್ಲಿ ಹೇಳಲಾಗಿದೆ. ಸ್ವಾನಂದಾಶ್ರಮದಲ್ಲಿ ಒಂದು ತಿಂಗಳ ಕಾಲ ನಡೆಯುವ ಈ ವ್ರತದಲ್ಲಿ ತಾವುಗಳು ಭಾಗವಹಿಸಿ ವರದ ಗಣಪತಿಯ ಕೃಪೆಗೆ ಪಾತ್ರರಾಗಲು ಕೋರಿಕೆ.
ಸ್ವಾನಂದಾಶ್ರಮ ಬಾಲಗಣಪತಿ ಪ್ರತಿಷ್ಠಾನ

ಶಮೀವೃಕ್ಷ
ಸ್ವಾನಂದಲೋಕ ಹೊಯ್ಸಳ ಶಿಲ್ಪಕಲೆಯ ಪುನರುತ್ಥಾನ
ವಿನಾಯಕ ಸದ್ಭಕ್ತಿ ತಾಣವಾದ ಶ್ರೀ ಸ್ವಾನಂದಾಶ್ರಮ, ಗಣೇಶ ತತ್ವ ಮತ್ತು ಉಪಾಸನೆ ಕುರಿತು ಅಧ್ಯಯನ, ಸಂಶೋಧನೆ, ಕೃತಿ ಸಂಗ್ರಹಣೆ, ಪುಸ್ತಕ ಪ್ರಕಟಣೆಯ ಮೂಲಕ ನಿರಂತರ ಜ್ಞಾನಯಜ್ಞ ಹಾಗೂ ಸಾಮಾಜಿಕ ಸೇವೆಯ ಸದುದ್ದೇಶದಿಂದ ಪ್ರಾರಂಭವಾಗಿ ೨೫ ವರ್ಷಗಳು ಪೂರೈಸಿದೆ. ಶಿರಸಿಯ ಶ್ರೀ ಸೋಂದಾ ಸ್ವರ್ಣದಲ್ಲಿ ಮಹಾಸಂಸ್ಥಾನದ ಅಂಗಸಂಸ್ಥೆಯಾಗಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಪ್ರಾಕೃತಿಕ ಗ್ರಾಮೀಣ ಸೊಗಡಿನಲ್ಲಿ, ಪಾರಂಪರಿಕ ಶೈಲಿಯ ಮೂಲ ಗಣಪತಿ ದೇವಾಲಯ, ಮಹಾ ಗಣಪತಿ ಪಂಚಾಯತನ, ಕ್ಷೇತ್ರಪಾಲಕ ಶ್ರೀ ಸುಬ್ರಹ್ಮಣ್ಯ ಸನ್ನಿಧಿ, ಶ್ರೀ ಚಕ್ರಸಹಿತ ಸರ್ಪಾರೂಢ ಮಹಾರಾಜ್ಞಿ ದೇವಾಲಯ ಮತ್ತು ೩೬ ಗಣಪತಿಯ ರೂಪಗಳ ವಿಶ್ವರೂಪಿ ವಿನಾಯಕ ಮಂಟಪದ ಸಂಕೀರ್ಣಗಳಿಂದ ಕಂಗೊಳಿಸುವ ಗಾಣಪತ್ಯ ಸ್ಪಂದನದ ಪಾವನತಾಣ ಶ್ರೀ ಸ್ವಾನಂದಾಶ್ರಮ ಹಲವಾರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.

ಧಾರ್ಮಿಕ : ಪ್ರತಿನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಏಕನಾರಿಕೇಳ ಗಣಪತಿ ಹೋಮ * ಬಾಲಗಣಪತಿಗೆ ಇಕ್ಷುರಸಾಭಿಷೇಕ * ಪ್ರತಿ ತಿಂಗಳು ಶುದ್ಧ ಚೌತಿ ಗಣಪತಿ ಹೋಮ ಹಾಗೂ ಸಂಕಷ್ಟಹರ ಗಣಪತಿ ವ್ರತ * ಹುಣ್ಣಿಮೆಯ ಸಾಯಂಕಾಲ ಸತ್ಯನಾರಾಯಣ ಪೂಜೆ. ಷಷ್ಠಿ ದಿನದಂದು ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ ಮತ್ತು ಹೋಮ * ಶ್ರಾವಣ ಶುದ್ಧ ಚೌತಿಗೆ ಪ್ರಾರಂಭವಾಗಿ ಒಂದು ತಿಂಗಳ ಕಾಲ ನಡೆಯುವ ವರದ ಚೌತಿಗೆ ವ್ರತ * ಸ್ವಾನಂದ ಗಣೇಶೋತ್ಸವ * ಕಾರ್ತೀಕ ಹುಣ್ಣಿಮೆಯಂದು ಲಕ್ಷ ದೀಪೋತ್ಸವ * ರಂಗಪೂಜೆ * ಇತರ ಹಬ್ಬಹರಿದಿನಗಳು

- Advertisement -

ಸಾಮಾಜಿಕ: ವಿದ್ಯಾಚೇತನ ಯೋಜನೆ (ಪ್ರತಿ ವರ್ಷ ೧೦೦೦ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಸಮವಸ್ತ್ರ, ಪುಸ್ತಕ, ಬ್ಯಾಗ್, ಇತ್ಯಾದಿ ವಿತರಣೆ) * ಉಚಿತ ಆರೋಗ್ಯ ತಪಾಸಣಾ ಶಿಬಿರ * ಗೋ ಸಂರಕ್ಷಣೆ * ಅನ್ನದಾನ * ಸಂಸ್ಕೃತ ಗುರುಕುಲ ಸ್ಥಾಪನೆ * ಧನ್ವಂತರೀ ವನ
ಸಾಂಸ್ಕೃತಿಕ : ಹೊಯ್ಸಳ ಶಿಲ್ಪಕಲೆಯ ಪುನರುತ್ಥಾನ * ಕಲಾ ಮಹೋತ್ಸವ (ಶಾಲಾ ವಿದ್ಯಾರ್ಥಿಗಳಿಗೆ ಗಣಪತಿಯ ಬಗ್ಗೆ ಹಾಡು, ಚಿತ್ರಕಲೆ, ಭರತ ನಾಟ್ಯ ಸ್ಪರ್ಧೆ) ವಿವಿಧ ಕ್ಷೇತ್ರಗಳ ಸಾಧಕರಿಗೆ ಸ್ವಾನಂದ ಕಲಾಶ್ರೀ ಪುರಸ್ಕಾರ.
ಶತಮಾನಗಳ ಹಿಂದೆ ಮೂಡಿದ ಕರ್ನಾಟಕ ಅದ್ಭುತ ಹೊಯ್ಸಳ ಶಿಲ್ಪಕಲಾ ವೈಭವವನ್ನು ಭಕ್ತ ಜನರ ಸಹಕಾರದೊಡನೆ ಸಾದೃಶ್ಯಗೊಳಿಸಲು ಶ್ರೀ ಸ್ವಾನಂದಾಶ್ರಮ ಕಂಕಣಬದ್ಧ. ಪ್ರಸ್ತುತ ದೇವಾಲಯ ಸಂಕೀರ್ಣ ನಿರ್ಮಾಣದ ಅಡಿಪಾಯ ಕಾರ್ಯ ಪೂರ್ಣಗೊಂಡಿದೆ. ಬನ್ನಿ, ಈ ಅಭೂತಪೂರ್ವ ಯೋಜನೆಯಲ್ಲಿ ಪಾಲ್ಗೊಂಡು ತನು-ಮನ-ಧನ ಸಹಕಾರ ನೀಡಿ ಸಂಸ್ಕೃತಿ ಸಂರಕ್ಷಣೆಯಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ.

ಬೃಹತ್ ವೆಚ್ಚ ತಗಲುವ ಈ ಹೊಯ್ಸಳ ಶೈಲಿ ದೇವಾಲಯ ನಿರ್ಮಾಣದ ಸಂಕಲ್ಪದಲ್ಲಿ ಯಾವ ಭೇದವೂ ಇಲ್ಲದೆ ಎಲ್ಲಾ ದಾನಿಗಳೂ ಕಾಯಾ-ವಾಚಾ-ಮನಸಾ ಸೇರಬೇಕಾದ ಸಂದರ್ಭವಿದು.

ಅನ್ನದಾನವು ಆ ಒಂದು ದಿನಕ್ಕೆ ಪುಣ್ಯವನ್ನೂ, ವಿದ್ಯಾದಾನವು ಒಂದು ಜನಾಂಗಕ್ಕೆ ಫಲವನ್ನೂ ನೀಡುವುದು. ಹಾಗೆಯೇ ಒಬ್ಬ ಮನುಷ್ಯನ ಆಯಸ್ಸು ಸುಮಾರು ೮೦ ರಿಂದ ೧೦೦ ವರ್ಷ, ಒಂದು ಬೃಹತ್ ಮರದ ಆಯಸ್ಸು ಸುಮಾರು ೫೦೦ ರಿಂದ ೬೦೦ ವರ್ಷಗಳು. ಆದರೆ ಶತಮಾನಗಳ ಕಾಲ ಉಳಿಯುವ ಶಿಲಾಮಯ ದೇವಾಲಯ ನಿರ್ಮಾಣ ಕಾರ್ಯಕ್ಕೆ ದಾನ ಮಾಡುವುದರಿಂದ ಇತಿಹಾಸ ನಿರ್ಮಾಣವಾಗಿ ಹಲವು ತಲೆಮಾರುಗಳಿಗೆ ಪುಣ್ಯವನ್ನು ನೀಡುವುದು.
ಒಟ್ಟಾಗಿ ಕಟ್ಟೋಣ ಬನ್ನಿ, `ಸ್ವಾನಂದ ಲೋಕ’ ಮಹತ್ವಾಕಾಂಕ್ಷಿ ಹೊಯ್ಸಳ ಶೈಲಿ ದೇಗುಲ ನಿರ್ಮಾಣಕ್ಕೆ ನಿಮ್ಮ ಉದಾರ ಸಹಕಾರ ನೀಡಿ, ಸಾಕಾರಗೊಳಿಸಿ.

ಪಿ. ಎಸ್. ಗುರುರಾಜ್

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ ; ಗಮನ ಸೆಳೆದ ಮಕ್ಕಾ ಮದೀನಾ ರೂಪಕಗಳು

ಮೂಡಲಗಿ: ಮಹಾನ್ ಮಾನವತಾವಾದಿ, ಮಹಾನ್ ಚಾರಿತ್ರ್ಯ ವಂತ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಬಿಟಿಟಿ ಕಮೀಟಿ ಆಯೋಜನೆಯಲ್ಲಿ ಪಟ್ಟಣದ ಸಮಸ್ತ ಮುಸ್ಲಿಂ ಬಾಂಧವರು...
- Advertisement -

More Articles Like This

- Advertisement -
close
error: Content is protected !!
Join WhatsApp Group