spot_img
spot_img

ವರಮಹಾಲಕ್ಷ್ಮಿ ವ್ರತ 2022: ಲಕ್ಷ್ಮಿ ಪೂಜೆಯ 4 ಶುಭ ಮುಹೂರ್ತ ಮತ್ತು ಮಹತ್ವ ಹೀಗಿದೆ

Must Read

spot_img
- Advertisement -

ವರಮಹಾಲಕ್ಷ್ಮಿ ವ್ರತ 2022

ವರಮಹಾಲಕ್ಷ್ಮಿ ಪೂಜೆಯ ದಿನವನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯನ್ನು ಪೂಜಿಸಲು ಬಹಳ ಮುಖ್ಯವಾದ ದಿನವೆಂದು ಪರಿಗಣಿಸಲಾಗಿದೆ. ವರಲಕ್ಷ್ಮಿಯು ಭಗವಾನ್ ವಿಷ್ಣುವಿನ ಪತ್ನಿ ಮತ್ತು ಮಹಾಲಕ್ಷ್ಮಿ ದೇವಿಯ ರೂಪಗಳಲ್ಲಿ ಒಂದಾಗಿದೆ. ಕ್ಷೀರಸಾಗರದಿಂದ ವರಲಕ್ಷ್ಮಿ ಅಥವಾ ವರಮಹಾಲಕ್ಷ್ಮಿ ದೇವಿಯು ಮೊದಲ ಬಾರಿಗೆ ಪ್ರಕಟಗೊಂಡಳು ಎನ್ನಲಾಗುತ್ತದೆ. ಅವಳು ಕ್ಷೀರಸಾಗರದ ಮೈಬಣ್ಣವನ್ನು ಹೊಂದಿದ್ದಳು ಮತ್ತು ಅದೇ ಬಣ್ಣದ ಉಡುಪನ್ನು ಧರಿಸಿದ್ದಳು ಎಂದು ಕಥೆಗಳಲ್ಲಿ ಉಲ್ಲೇಖವಿದೆ.

ಮಹಾಲಕ್ಷ್ಮೀ ದೇವಿಯು ಭಕ್ತರು ಬೇಡಿದ ವರಗಳನ್ನು ನೀಡುತ್ತಾಳೆ ಮತ್ತು ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎನ್ನುವ ನಂಬಿಕೆಯಿದೆ. ಆದ್ದರಿಂದ ದೇವಿಯ ಈ ರೂಪವನ್ನು ವರ ಮತ್ತು ಲಕ್ಷ್ಮೀ ಅಥವಾ ವರಗಳನ್ನು ನೀಡುವ ಲಕ್ಷ್ಮೀ ದೇವತೆ, *ವರ ಮಹಾಲಕ್ಷ್ಮೀ* ಎಂದು ಕರೆಯಲಾಗುತ್ತದೆ.

ವರಲಕ್ಷ್ಮಿ ವ್ರತ 2022 ಶುಭ ಮುಹೂರ್ತ:

ಈ ಬಾರಿ ಅಂದರೆ 2022 ರ ವರಮಹಾಲಕ್ಷ್ಮಿ ವ್ರತವನ್ನು ಕೆಲವು ಭಾಗಗಳಲ್ಲಿ ಆಗಸ್ಟ್‌ 5 ರಂದು ಹಾಗೂ ಕೆಲವು ಭಾಗಗಳಲ್ಲಿ ಆಗಸ್ಟ್ 12 ರಂದು ಶುಕ್ರವಾರ ಆಚರಿಸಲಾಗುವುದು.

- Advertisement -

ಪೂಜೆ ಮುಹೂರ್ತ:‌ ಎರಡನೆಯ ಶುಕ್ರವಾರ ಆಗಸ್ಟ್ 5

ಸಿಂಹ ಲಗ್ನ ಪೂಜೆ ಮುಹೂರ್ತ: ಆಗಸ್ಟ್‌ 5 ರಂದು ಮುಂಜಾನೆ 07:01 ರಿಂದ ಬೆಳಗ್ಗೆ 09:04 ರವರೆಗೆ

ಪೂಜೆ ಅವಧಿ: 2 ಗಂಟೆ 03 ನಿಮಿಷಗಳು

- Advertisement -

ವೃಶ್ಚಿಕ ಲಗ್ನ ಪೂಜೆ ಮುಹೂರ್ತ: ಆಗಸ್ಟ್‌ 5 ರಂದು ಶುಕ್ರವಾರ ಮಧ್ಯಾಹ್ನ 01:11 ರಿಂದ ಮಧ್ಯಾಹ್ನ 03:22 ರವರೆಗೆ

ಪೂಜೆ ಅವಧಿ: 2 ಗಂಟೆ 11 ನಿಮಿಷಗಳು

ಕುಂಭ ಲಗ್ನ ಪೂಜೆ ಮುಹೂರ್ತ: ಆಗಸ್ಟ್‌ 5 ರಂದು ಶುಕ್ರವಾರ ಸಂಜೆ 07:24 ರಿಂದ ರಾತ್ರಿ 09:07 ರವರೆಗೆ

ಪೂಜೆ ಅವಧಿ: 1 ಗಂಟೆ 43 ನಿಮಿಷಗಳು

ವೃಷಭ ಲಗ್ನ ಪೂಜೆ ಮುಹೂರ್ತ: ಆಗಸ್ಟ್‌ 5 ರಂದು ಶುಕ್ರವಾರ ರಾತ್ರಿ 12:35 ರಿಂದ ಆಗಸ್ಟ್‌ 6 ರಂದು ಶನಿವಾರ ಮುಂಜಾನೆ 02:37 ರವರೆಗೆ

ಮೂರನೆಯ ಶುಕ್ರವಾರ ಶ್ರಾವಣ ಪೌರ್ಣಮಿ ಆಗಸ್ಟ್ 12

ಸಿಂಹ ಲಗ್ನ ಪೂಜೆ ಮುಹೂರ್ತ: ಆಗಸ್ಟ್‌ 12 ರಂದು ಮುಂಜಾನೆ 06:32 ರಿಂದ ಬೆಳಗ್ಗೆ 08:35 ರವರೆಗೆ

ಪೂಜೆ ಅವಧಿ: 2 ಗಂಟೆ 02 ನಿಮಿಷಗಳು

ವೃಶ್ಚಿಕ ಲಗ್ನ ಪೂಜೆ ಮುಹೂರ್ತ: ಆಗಸ್ಟ್‌ 12 ರಂದು ಶುಕ್ರವಾರ ಮಧ್ಯಾಹ್ನ 12:42 ರಿಂದ ಮಧ್ಯಾಹ್ನ 2:53 ರವರೆಗೆ

ಪೂಜೆ ಅವಧಿ: 2 ಗಂಟೆ 11 ನಿಮಿಷಗಳು

ಕುಂಭ ಲಗ್ನ ಪೂಜೆ ಮುಹೂರ್ತ: ಆಗಸ್ಟ್‌ 12 ರಂದು ಶುಕ್ರವಾರ ಸಂಜೆ 06:55 ರಿಂದ ರಾತ್ರಿ 8:38 ರವರೆಗೆ

ಪೂಜೆ ಅವಧಿ: 1 ಗಂಟೆ 43 ನಿಮಿಷಗಳು

ವೃಷಭ ಲಗ್ನ ಪೂಜೆ ಮುಹೂರ್ತ: ಆಗಸ್ಟ್‌ 12 ರಂದು ಶುಕ್ರವಾರ ರಾತ್ರಿ 12:06 ರಿಂದ ಆಗಸ್ಟ್‌ 13 ರಂದು ಶನಿವಾರ ಮುಂಜಾನೆ 02:08 ರವರೆಗೆ

🌸ವರಲಕ್ಷ್ಮಿ ವ್ರತದ ಮಹತ್ವ🌸

‌ವರಲಕ್ಷ್ಮಿ ವ್ರತವನ್ನು ಶ್ರಾವಣ ಶುಕ್ಲ ಪಕ್ಷದ ಕೊನೆಯ ಶುಕ್ರವಾರದಂದು ಆಚರಿಸಲಾಗುತ್ತದೆ, ಇದು ರಾಖಿ ಮತ್ತು ಶ್ರಾವಣ ಪೂರ್ಣಿಮೆಯ ಕೆಲವು ದಿನಗಳ ನಂತರದಲ್ಲಿ ಬರುತ್ತದೆ. ಆದರೆ ಈ ಬಾರಿ ರಾಖಿ ಮತ್ತು ಶ್ರಾವಣ ಪೂರ್ಣಿಮೆಯ ಮರುದಿನವೇ ವರಲಕ್ಷ್ಮಿ ವ್ರತ ಬಂದಿದೆ.

ವರಲಕ್ಷ್ಮಿ ವ್ರತವನ್ನು ಪುರುಷರು ಮತ್ತು ಮಹಿಳೆಯರಿಗೆ ಪ್ರಸ್ತಾಪಿಸಲಾಗಿದೆ. ಆದಾಗ್ಯೂ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ, ವರಲಕ್ಷ್ಮಿ ವ್ರತವನ್ನು ಮುಖ್ಯವಾಗಿ ವಿವಾಹಿತ ಮಹಿಳೆಯರು ಮಾತ್ರ ಆಚರಿಸುತ್ತಾರೆ. ವರ ಲಕ್ಷ್ಮೀ ವ್ರತವನ್ನು ಲೌಕಿಕ ಸುಖದ ಆಸೆಯಿಂದ ಆಚರಿಸಲಾಗುತ್ತದೆ, ಇದರಲ್ಲಿ ಮಕ್ಕಳು, ಸಂಗಾತಿ, ಐಷಾರಾಮಿ ಮತ್ತು ಎಲ್ಲಾ ರೀತಿಯ ಐಹಿಕ ಸಂತೋಷಗಳು ಸೇರಿವೆ.

ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ವರಲಕ್ಷ್ಮಿ ವ್ರತವು ಬಹಳ ಜನಪ್ರಿಯವಾಗಿದೆ. ಇಲ್ಲಿ ವಿವಾಹಿತ ಮಹಿಳೆಯರು ತಮ್ಮ ಪತಿ ಮತ್ತು ಕುಟುಂಬದ ಸದಸ್ಯರ ಯೋಗಕ್ಷೇಮಕ್ಕಾಗಿ ವರಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಈ ದಿನದಂದು ವರ-ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅಷ್ಟಲಕ್ಷ್ಮಿ ಅಥವಾ ಎಂಟು ದೇವತೆಗಳನ್ನು ಪೂಜಿಸುವುದಕ್ಕೆ ಸಮಾನವೆನ್ನುವ ನಂಬಿಕೆಯಿದೆ. ಶ್ರೀ, ಭೂ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ತುಷ್ಟಿ ಮತ್ತು ಪುಷ್ಟಿ ಎಂಬ ಎಂಟು ದೇವತೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ವರಲಕ್ಷ್ಮಿ ವ್ರತವು ದಕ್ಷಿಣ ಭಾರತದಲ್ಲಿ ಜನಪ್ರಿಯವಾದಷ್ಟು ಉತ್ತರ ಭಾರತದ ರಾಜ್ಯಗಳಲ್ಲಿ ಜನಪ್ರಿಯವಾಗಿಲ್ಲ. ವರಲಕ್ಷ್ಮೀ ವ್ರತವು ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಮತ್ತು ಅವಳ ಆಶೀರ್ವಾದವನ್ನು ಪಡೆಯಲು ಅತ್ಯಂತ ಮಂಗಳಕರವಾದ ದಿನಗಳಲ್ಲಿ ಒಂದಾಗಿದೆ.

ವರಲಕ್ಷ್ಮಿ ವ್ರತವನ್ನು ಲಕ್ಷ್ಮಿ ದೇವಿಯ ಅಥವಾ ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆದುಕೊಳ್ಳಲು ಆಚರಿಸಲಾಗುತ್ತದೆ. ವರಲಕ್ಷ್ಮಿ ವ್ರತವನ್ನು ಆಚರಿಸುವುದರಿಂದ ನಾವು ಸಿರಿ, ಸಂಪತ್ತು ಮತ್ತು ಸೌಭಾಗ್ಯವನ್ನು ಪಡೆದುಕೊಳ್ಳಬಹುದು ಎನ್ನುವ ನಂಬಿಕೆಯಿದೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group