Homeಜೋತಿಷ್ಯಭಗವಂತನಿಗೆ ಮಾಡುವ ವಿವಿಧ ಆರತಿಗಳು

ಭಗವಂತನಿಗೆ ಮಾಡುವ ವಿವಿಧ ಆರತಿಗಳು

ಪ್ರತಿದಿನ ದೇವರಿಗೆ ಆರತಿ ಮಾಡುತ್ತೇವೆ. ಯಾಕೆ ಆರತಿ ಮಾಡಬೇಕು ಏನು ಫಲ…? ಆರತಿ ಮಾಡುವುದು ಶುಭ ಸಂಕೇತ. ನಾವು ಮಾಡುವ ವಿವಿಧ ಆರತಿಗಳಿಂದ ಭಗವಂತನು ಸಂತುಷ್ಟನಾಗುತ್ತಾನೆ. ಅದರಿಂದ ಮನೆಯಲ್ಲಿ ಅಭಿವೃದ್ಧಿ, ಸಂತಾನ, ಸಂತೋಷ ಪ್ರಾಪ್ತಿಯಾಗುತ್ತದೆ ಹಾಗೂ ದಾರಿದ್ರ್ಯ ನಿವಾರಣೆಯಾಗುತ್ತದೆ.

ಏಕಾರತಿ (ಒಂದು) – ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ. ಏಕಾರತಿ ಅಂದರೆ ದೇವರಿಗೆ ಧೂಪದ ನಂತರ ದೀಪ ಸಮರ್ಪಣೆ.

ದ್ವಿ ಆರತಿ (ಎರಡು) – ಮಾಡುವುದರಿಂದ ದಾಂಪತ್ಯ ಸಖ್ಯ ಫಲ ದೊರೆಯುತ್ತದೆ. ದ್ವಿ ಆರತಿ ಅಂದರೆ ನೈವೇದ್ಯದ ನಂತರ ಎರಡು ನೀಲಾಂಜನ ಇಟ್ಟು, ಅಥವಾ ಹೂರಣದ ಆರತಿ, ಗೋಧಿ ಹಿಟ್ಟನ್ನು ಹಾಲಿನಲ್ಲಿ ಕಲಸಿ ಆರತಿ ಒಟ್ಟು ಎರಡು ಆರತಿ ಎಂದರೆ ಲಕ್ಷ್ಮೀನಾರಾಯಣ ಸಂಕೇತ, ಶಿವ – ಪಾರ್ವತಿಯರ ಸಂಕೇತ, ಅದಕ್ಕೆ ಮನೆಯಲ್ಲಿ ದಾಂಪತ್ಯ ಚೆನ್ನಾಗಿರುತ್ತದೆ.

ತ್ರಯ ಆರತಿ (ಮೂರು) – ತ್ರಯ ಆರತಿ ಮಾಡುವುದರಿಂದ ಕುಟುಂಬದ ಅಭಿವೃದ್ಧಿಯಾಗುತ್ತದೆ.

ಪಂಚ ಆರತಿ( ಐದು) – ಪಂಚ ಆರತಿ ಅಂದರೆ ಹಬ್ಬ ಹರಿದಿನಗಳಲ್ಲಿ ಮಾಡುವ ಆರತಿ ಇದರಿಂದ ಲಕ್ಷ್ಮಿ ಪ್ರೀತಳಾಗುತ್ತಾಳೆ. ಸಸ್ಯವೃದ್ಧಿಯಾಗಿ ಬೆಳೆಗಳು ಫಲವತ್ತಾಗಿ ಫಲಿಸುತ್ತವೆ.

ನವ ಆರತಿ (ಒಂಬತ್ತು) – ಮಾಡುವುದರಿಂದ ಇಡೀ ವರ್ಷ ವೃದ್ದಿ ಫಲ ದೊರೆಯುತ್ತದೆ.

ಏಕಾದಶ ಆರತಿ (ಹನ್ನೊಂದು) – ಮಾಡುವುದರಿಂದ ಮಹಾಲಕ್ಷ್ಮಿಯು ಸುಪ್ರೀತಳಾಗುತ್ತಾಳೆ.

ದ್ವಾದಶ ಆರತಿ (ಹನ್ನೆರಡು) – ಮಾಡುವುದರಿಂದ ಸುಖ ನೆಮ್ಮದಿಯುಂಟಾಗುತ್ತದೆ. ಲಕ್ಷ್ಮೀನಾರಾಯಣರು ಪ್ರೀತರಾಗುತ್ತಾರೆ.

ಷೋಡಶ ಆರತಿ (ಹದಿನಾರು) – ಮಾಡುವುದರಿಂದ ವಿಶೇಷ ಧನಲಾಭವುಂಟಾಗುತ್ತದೆ. ಮಂಗಳಕಾರ್ಯಗಳು ನೆರವೇರುತ್ತವೆ.

ಏಕವಿಂಶತಿ (ಇಪ್ಪತ್ತೊಂದು) ಮಾಡುವುದರಿಂದ ರಾಜ್ಯಲಾಭ ದೊರೆಯುತ್ತದೆ.

ಚತುರ್ವಿಂಶತಿ ಆರತಿ (ಇಪ್ಪತ್ನಾಲ್ಕು) – ಉತ್ತಮ ಮಳೆ ಬೆಳೆ ಉಂಟಾಗುತ್ತದೆ.

ನಕ್ಷತ್ರ ಆರತಿ (ಇಪ್ಪತ್ತೇಳು)– ಸಕಲ ದೇವತೆಗಳು ಅನುಗ್ರಹಿಸುತ್ತಾರೆ.

ನಾಗ ಆರತಿ ಮಾಡುವುದರಿಂದ ಉತ್ತಮ ಸಂತಾನ ವೃದ್ಧಿಯಾಗುತ್ತದೆ.

ಕೂರ್ಮ ಆರತಿ– ಮಾಡುವುದರಿಂದ ಧೈರ್ಯ ಸ್ಥೈರ್ಯ ಧೃಡತೆವುಂಟಾಗಿ ಭಗವಂತನ ಪೂರ್ಣಾನುಗ್ರಹವಾಗುತ್ತದೆ.

(ನೂರೆಂಟು) ಅಷ್ಟೋತ್ತರ ಶತದೀಪ – ಲಕ್ಷ್ಮೀ ನಾರಾಯಣ ರ ಸಂಪೂರ್ಣ ಕೃಪಾಕಟಾಕ್ಷವುಂಟಾಗುತ್ತದೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

RELATED ARTICLES

Most Popular

error: Content is protected !!
Join WhatsApp Group