ಸಿಂದಗಿ: ಬೆಳಗಾವಿ ಅಬಕಾರಿ ಜಂಟಿ ಆಯುಕ್ತರರವರ ಮಾರ್ಗದರ್ಶನದಲ್ಲಿ ಹಾಗೂ ವಿಜಯಪುರ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ, ಸಿಂದಗಿ ವಲಯದ ದೇವರಹಿಪ್ಪರಗಿ ತಾಲೂಕಿನ ಕೆರೂಟಗಿ ಗ್ರಾಮದಿಂದ ಕಲಕೇರಿ ಗ್ರಾಮಕ್ಕೆ ಹೋಗುವ ರಸ್ತೆಯ ಕೆರೂಟಗಿ ತಾಂಡಾದ ಬಸ್ ನಿಲ್ದಾಣದ ಹತ್ತಿರದಲ್ಲಿ ಅಬಕಾರಿ ದಾಳಿಯನ್ನು ಮಾಡಿ 8.640 ಲೀ ಗೋವಾ ರಾಜ್ಯದ ಮದ್ಯವನ್ನು ಮಾರುತಿ ಸುಜಕಿ ಕಂಪನಿಯ ಎರ್ಟಿಗಾ ನಾಲ್ಕು ಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಲಾಗಿದೆ.
ವಾಹನ ಸವಾರನು ಸ್ಥಳದಿಂದ ಪರಾರಿಯಾಗಿದ್ದು, ಸದರಿ ವಾಹನ ಸವಾರನ ವಿರುದ್ದ ಹಾಗೂ ವಾಹನ ಮಾಲೀಕನ ವಿರುದ್ದ ಅಬಕಾರಿ ನಿರೀಕ್ಷಕಿ ಆರತಿ ಖೈನೂರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
ದಾಳಿಯಲ್ಲಿ ಡಿ.ವ್ಹಿ.ರಜಪೂತ ಅಬಕಾರಿ ಉಪ ನಿರೀಕ್ಷಕರು ಸಿಂದಗಿ ವಲಯ ಹಾಗೂ ಸಿಂದಗಿ ವಲಯದ ಅಬಕಾರಿ ಸಿಬ್ಬಂದಿಗಳಾದ ಎಮ್.ಜೆ.ಮೊಕಾಶಿ, ಆರ್.ಬಿ.ಮುಳಸಾವಳಗಿ, ರೇವಣಸಿದ್ದಪ್ಪ ಅತಾಪಿ, ಜೈರಾಮ ರಾಠೋಡ, ಎನ್.ಎಸ್.ಸಾತಲಗಾಂವ, ಎನ್.ಪಿ.ಸೂರ್ಯವಂಶಿ, ವಾಹನ ಚಾಲಕ ಅಜೀಮ ಮನಗೂಳಿ ಭಾಗವಹಿಸಿದ್ದರು.
ವರದಿ: ಪಂಡಿತ್ ಯಂಪೂರೆ, ಸಿಂದಗಿ