Homeಸುದ್ದಿಗಳುಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕದ ಗೌ. ಅದ್ಯಕ್ಷರಾಗಿ ವೆಂಕಟೇಶ

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕದ ಗೌ. ಅದ್ಯಕ್ಷರಾಗಿ ವೆಂಕಟೇಶ

spot_img

ಕರ್ನಾಟಕ ರಾಜ್ಯ ಬರಹಗಾರರ ಸಂಘವು ಒಂದು ನೋಂದಾಯಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಕೇಂದ್ರ ಕಛೇರಿ ಹೂವಿನ ಹಡಗಲಿಯಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು, ತಾಲ್ಲೂಕು ಘಟಕಗಳನ್ನು ಹೊಂದಿದೆ. ಅಲ್ಲದೇ ಹೊರ ರಾಜ್ಯದಲ್ಲೂ ತನ್ನ ಘಟಕಗಳನ್ನು ವಿಸ್ತರಿಸಿಕೊಂಡು ಈಗಾಗಲೇ ಹಲವಾರು ಸಾಹಿತ್ಯ ಕಾರ್ಯಕ್ರಮ, ಸಂಗೀತ ಗಾಯನ ಸ್ಪರ್ಧೆ, ನೃತ್ಯ ಸ್ಪರ್ಧೆ, ಚಿತ್ರ ಕಲಾ ಸ್ಪರ್ಧೆಯನ್ನು ಆನ್ ಲೈನ್ ನಲ್ಲಿ ಏರ್ಪಡಿಸಿಕೊಂಡು ಬಂದಿದೆ. ವರ್ಷಕ್ಕೊಮ್ಮೆ ನುಡಿ ವೈಭವ ಕಾರ್ಯಕ್ರಮವನ್ನು ಸoಘಟಿಸುತ್ತಾ ಐದಾರು ವರ್ಷಗಳಿಂದ ನಿರಂತರ ಚಟುವಟಿಕೆಯಲ್ಲಿದೆ.

ಪ್ರಸ್ತುತ ಹಾಸನ ಜಿಲ್ಲೆಯ ಉದಯ ವರದಿ ಪತ್ರಿಕೆಯ ಸಂಪಾದಕರಾಗಿದ್ದು ಉತ್ತಮ ಸಂಘಟಕರಾಗಿ ಯುವ ಬರಹಗಾರರಿಗೆ ಪ್ರೇರಣೆ ನೀಡುತ್ತಾ ಸಾಹಿತ್ಯ ಕಲೆ ಇದಕ್ಕೆ ಹೆಚ್ಚು ಪ್ರಾತಿನಿಧ್ಯ ಕೊಡುವ ಮೂಲಕ ಸಮಾಜಮುಖಿ ವ್ಯಕ್ತಿತ್ವ ಹೊಂದಿ ವಾಗ್ಮಿ ನೇರವಾದಿಗಳಾಗಿರುತ್ತಾರೆ. ವಿವಿಧ ಪತ್ರಿಕೆ ದೃಶ್ಯ ಮಾಧ್ಯಮಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.

ಇವರ ಸೇವೆಯನ್ನು ಪರಿಗಣಿಸಿ ಪತ್ರಕರ್ತರ ಸಂಘವು ರಾಜ್ಯ ಪತ್ರಕರ್ತರ ಪ್ರತಿಷ್ಠಿತ ಪ್ರಶಸ್ತಿಯಾದ ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ ಜಿಲ್ಲಾಡಳಿತ ನೀಡುವ ರಾಜ್ಯೋತ್ಸವ ಪ್ರಶಸ್ತಿ. ಕರ್ನಾಟಕ ಮಾಧ್ಯಮ ಅಕಾಡೆಮಿ ದತ್ತಿ ಪ್ರಶಸ್ತಿ,, ಹತ್ತಾರು ವಿವಿಧ ಸಂಘಟನೆಗಳು ಗೌರವ ಸನ್ಮಾನಗಳನ್ನು ನೀಡಿ ಗೌರವಿಸಿವೆ. ವೆಂಕಟೇಶ ರವರನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾ ಘಟಕದ ಗೌರವ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಾಧ್ಯಕ್ಷರಾದ ಮಧುನಾಯ್ಕ ಲಂಬಾಣಿ ಅವರು ಅನುಮೋದನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಸುಂದರೇಶ ಉಡುವಾರೆ, ಕಾರ್ಯದರ್ಶಿಗಳಾದ ದಿಬ್ಬೂರು ರಮೇಶ, ಸಂಘಟನಾ ಕಾರ್ಯದರ್ಶಿಗಳಾದ ಶಿವಕುಮಾರ ಆರ್. ಡಾ. ಬರಾಳು ಶಿವರಾಮ, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷರು. ವಿಶ್ವಾಸ ಡಿ. ಗೌಡರು ಸಕಲೇಶಪುರ ತಾ. ಅಧ್ಯಕ್ಷರು, ಡಾ. ಎಸ್. ಎಸ್. ಪುಟ್ಟೇಗೌಡರು ಅರಕಲಗೂಡು ತಾಲ್ಲೂಕು ಘಟ್ಟಕದ ಅಧ್ಯಕ್ಷರು, ಕವಿ ಪರಮೇಶ ಮಡಬಲು, ಗಿರಿಜಾ ನಿರ್ವಾಣಿ. ನಟಿ ರಾಣಿ ಚರಾಶ್ರಿ. ಲೋಕೇಶ, ಉಪನ್ಯಾಸಕರು, ಹೊಳೆನರಸೀಪುರ ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group