ಸಿಂದಗಿ : ಕರ್ನಾಟಕ ಸರ್ಕಾರ ಗೋಹತ್ಯಾ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ರ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮುಂಖಾತರ್ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಈ ಕುರಿತು ಪ್ರಾಂತ ಪ್ರಮುಖರಾದ ಶೇಖರಗೌಡ ಹರನಾಳ ಮಾತನಾಡಿ ಈಗಿನ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ MLA ಗಳು ಹಿಂದೂಗಳಲ್ಲವಾ, ನಿಮಗೆ ಹಿಂದೂಗಳ ವೋಟು ಬೇಕಾಗಿಲ್ಲವಾ, ಬರೀ ಮುಸ್ಲಿಮರ ವೋಟು ಬೇಕೆ? ಇದನ್ನು ಅರಿತು ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯಾ ತಿದ್ದುಪಡಿ ಕಾಯ್ದೆಗೆ ವಿರೋಧಿಸಿ ಗೋವುಗಳನ್ನು ರಕ್ಷಿಸಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಹೋರಾಟ ಉಗ್ರ ರೂಪ ತಾಳುವುದು ಎಂದು ಎಚ್ಚರಿಕೆ ನೀಡಿದರು.
vhp ಕಾರ್ಯದರ್ಶಿ ಬಸವರಾಜ ಬಿರಾದಾರ ಮಾತನಾಡಿ, ಗೋವನ್ನು ಹಿಂದೂಗಳು ಪೂಜ್ಯಭಾವನೆಯಿಂದ ಕಾಣುತ್ತಾರೆ ಹಾಗೂ ಪೂಜಿಸುತ್ತಾರೆ. ಅಂತಾ ಗೋಹತ್ಯೆ ಕಾಯ್ದೆಯನ್ನು ಸಡಿಲಿಸಿದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ vhp ತಾಲೂಕಾ ಅಧ್ಯಕ್ಷರಾದ ಡಾ. ಶರಣಗೌಡ ಬಿರಾದಾರ,ಬಜರಂಗದಳ ಸಂಯೋಜಕ ಪ್ರಶಾಂತ ಬಗಲಿ, ಗೋರಕ್ಷಾ ಪ್ರಮುಖ ಸಿದ್ದು ಯಂಕಂಚಿ, ಸಹಕಾರ್ಯದರ್ಶಿ ಶರಣಗೌಡ ಬಿರಾದಾರ,ರವಿ ಆಲಗೂರ ಎಬಿವಿಪಿ ಪ್ರಮುಖ ವಿನಾಯಕ ಹಿರೇಮಠ, RSS ಪ್ರಮುಖರಾದ ಶೇಖರ್ ಪಾಟೀಲ, ಸುರೇಶ್ ಪಾಟೀಲ ಸುನೀಲ್ ಬಳ್ಳುಂಡಗಿ,ಸಿದ್ದಲಿಂಗ ಪೂಜಾರಿ, ವಿನಯ್ ಪಾಟೀಲ,ಮುಂತಾದವರು ಭಾಗವಹಿಸಿದ್ದರು.

