spot_img
spot_img

ವಿಭೂತಿ ಮತ್ತು ನಾಮಗಳನ್ನು ‘ಮೂರು’ ರೇಖೆಗಳಂತೆ ಯಾಕಿಡುತ್ತಾರೆ

Must Read

spot_img
- Advertisement -

ಮೂರರ ಸಂಖ್ಯೆ ಧರ್ಮ ಸೂಚಕವಾಗಿದೆ. ವೇದಯುಗದಲ್ಲಿ ಈ ಅಡ್ಡ ಉದ್ದದ ನಾಮಗಳಿಲ್ಲವೆನಿಸುತ್ತದೆ. ದ್ವಾಪರದ ಕೊನೆಯಲ್ಲಿ-ಕಲಿಯುಗ ಆರಂಭದಲ್ಲಿ ಈ ಧಾರಣಗಳು ಪ್ರಾರಂಭವಾಗಿವೆ ಎನ್ನಬಹುದು.

ಆದರೆ ಹಣೆಯ ಮೇಲೆ ಕೆಂಪು ತಿಲಕವನ್ನು ಸೂರ್ಯನ ದ್ಯೋತಕವಾಗಿ ಧಾರಣ ಮಾಡುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇದೆ. ನಮಗೆ ಸೂರ್ಯನೆ ಪ್ರತ್ಯಕ್ಷ ಪ್ರಥಮ ದೇವನಾಗಿದ್ದನು. ವೇದಯುಗದಲ್ಲಿಯೂ ಸೂರ್ಯ ಮತ್ತು ಅಗ್ನಿಗಳನ್ನು ಮಾತ್ರ ನಮ್ಮವರು ಪೂಜಿಸುತ್ತಿದ್ದರು. ಕುಂಕುಮವನ್ನು ಹಿಂದೂ ಸಂಪ್ರದಾಯಧರ್ಮವಾಗಿ ಎಲ್ಲರೂ ಧರಿಸುತ್ತಿದ್ದರು.

ವ್ಯಾಸ ಮಹರ್ಷಿಗಳು ವೇದಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ ನಂತರ ಮಹಾಭಾರತ, ಭಾಗವತ ಮತ್ತಿತರ ಪುರಾಣಗಳನ್ನು ಬರೆದರು. ಇದಕ್ಕೆ ಮುನ್ನವೇ ವಾಲ್ಮೀಕಿ ಮಹರ್ಷಿಗಳು ರಾಮಾಯಣ ಮಹಾಕಾವ್ಯವನ್ನು ಬರೆದಿದ್ದರು. ಏಕವಾಗಿದ್ದ ಪರಬ್ರಹ್ಮ ಚೈತನ್ಯ ಶಕ್ತಿಯನ್ನು (ಸೃಷ್ಟಿ, ಸ್ಥಿತಿ, ಲಯ – ಹೀಗೆ) ತ್ರಿಶಕ್ತಿಗಳಾಗಿ ವ್ಯಾಸರು ಕಂಡು ಪುರಾಣಗಳಲ್ಲಿ ಪೌರಾಣಿಕ ಶಕ್ತಿಗಳಾಗಿ ಬ್ರಹ್ಮ-ವಿಷ್ಣು-ಮಹೇಶ್ವರರಾಗಿ ತೋರಿದರು. ಇವರಲ್ಲಿ ವಿಷ್ಣು, ಶಿವರು ಪ್ರಧಾನ ದೇವರಾದರು. ಕ್ರಮೇಣ ಅವರಿಗೆ ಆಲಯಗಳಾದವು. ಬ್ರಹ್ಮ ಏಕೆ ಪೂಜನೀಯನಾಗಲಿಲ್ಲ, ಅವನಿಗೇಕೆ ಆಲಯಗಳಿಲ್ಲ ಎಂಬುದು ಪುರಾಣೇತಿಹಾಸಗಳಿಂದ ನಿಮಗೆಲ್ಲಾ ಗೊತ್ತೇ ಇದೆ. ಜನರು ವಿಷ್ಣುಭಕ್ತರೂ, ಇನ್ನೂ ಹಲವರು ಶಿವಭಕ್ತರೂ ಆದರು. ವಿಷ್ಣು ಭಕ್ತರು ವಿಷ್ಣುಮಹಿಮೆಗಳನ್ನು ಜನಾನುರಾಗವಾಗಿ ಹೇಳುತ್ತಾ ಜನಪ್ರಿಯತೆಗಳನ್ನು ಸಾಧಿಸುತ್ತಿದ್ದರು. ಶಿವಭಕ್ತರು ಶಿವನ ಮಹಿಮೆಗಳನ್ನು ಸಾರುತ್ತಾ ಹಾಡುತ್ತಾ ಸಾಗುತ್ತಿದ್ದರು. ಬರುಬರುತ್ತ ಇವು ಪಂಥಗಳಾಗಿ ಬೆಳೆದು ಶೈವ ವೈಷ್ಣವ ವೈಷಮ್ಯಗಳು ಪ್ರಾರಂಭವಾದವು.

- Advertisement -

ಶಿವನೇ ದೊಡ್ಡವನೆಂದು ಶೈವರು ಹರಿಯೇ ದೊಡ್ಡವನೆಂದು ವೈಷ್ಣವರು ಕಾದಾಡುತ್ತಿದ್ದರು. ಈ ಮತೋದ್ರೇಕದಿಂದ ಅನೇಕ ದಾರುಣ ಪರಿಸ್ಥಿತಿಗಳು ನಿರ್ಮಾಣವಾಗಿ ಮಾನವ ಹತ್ಯೆಗಳು ನಡೆದು ಹೋದವು. ಇದಕ್ಕೆ ರಾಜಮಹಾರಾಜರ ಬೆಂಬಲವೂ ಇತ್ತು. ಇಂತಹ ಸಮಯದಲ್ಲಿ ಶೈವ ವೈಷ್ಣವರನ್ನು ಸುಲಭವಾಗಿ ಗುರುತಿಸಲು ಈ ಅಡ್ಡ ವಿಭೂತಿಧಾರಣೆ, ಉದ್ದ ನಾಮಧಾರಣೆ ಪ್ರಾರಂಭವಾಗಿರಬೇಕು. ಅಂದರೆ ಮತಸೂಚಕವಾಗಿಯೇ ಈ ಅಡ್ಡ ವಿಭೂತಿಧಾರಣೆ ಮತ್ತು ಉದ್ದ ನಾಮಧಾರಣೆಗಳು ಸೃಷ್ಟಿಯಾಗಿವೆ ಎಂದಾಯಿತು. (ಆದಾಗ್ಯೂ ಇದನ್ನು ಎಲ್ಲರೂ ಒಪ್ಪಬೇಕೆಂದಿಲ್ಲ)

ಶ್ರೀರಾಮಾನುಜಾಚಾರ್ಯರು ವಿಶಿಷ್ಟ ಅದೈತಧರ್ಮವನ್ನು ಸ್ಥಾಪಿಸಿದ ನಂತರ ಜೀವಾತ್ಮ-ಪ್ರಕೃತಿ-ಪರಮಾತ್ಮಗಳ ಸಂಕೇತವಾಗಿ ಮೂರು ರೇಖೆಗಳನ್ನು ನಿರೂಪಿಸಿದ್ದಾರೆ. ಸೃಷ್ಟಿ ಸ್ಥಿತಿ, ಲಯ ಸಂಕೇತವಾಗಿಯೂ ಮೂರು ರೇಖೆಗಳನ್ನು ಸ್ಥಿರೀಕರಿಸಿದ್ದಾರೆ.

ಮೂರರ ಸಂಖ್ಯೆಯನ್ನು ವೈದಿಕಧರ್ಮವು ಪವಿತ್ರವಾಗಿ ಭಾವಿಸುತ್ತಿದೆ.

- Advertisement -

ಪವಿತ್ರ ಗಾಯತ್ರಿಯನ್ನು (ಯಜ್ಯೋಪವೀತ) ಮೂರು ಗಂಟುಗಳಾಗಿ ಧಾರಣ ಮಾಡುತ್ತಾರೆ. ಶಿವನಿಗೂ ಸಹ ‘ತ್ರಿಶೂಲವನ್ನು ಆಯುಧವನ್ನು ಕೊಟ್ಟಿದ್ದಲ್ಲದೆ ‘ತ್ರಿ’ ನೇತ್ರನಾಗಿಯೂ ವೈದಿಕಧರ್ಮವು ಹೇಳುತ್ತಿದೆ. ತ್ರಿಕರಣ (ಮನೋ-ವಾಕ್-ಕಾಯ) ತ್ರಿಕಾಲ (ಭೂತ, ಭವಿಷ್ಯ, ವರ್ತಮಾನ) ತ್ರಿಸಮಯ (ಉದಯ-ಮಧ್ಯಾಹ್ನ- ಸಂಜೆ) ತ್ರಿನಾಡಿ (ಇಡ-ಪಿಂಗಳ-ಸುಷುಮ್ನ) ಹೀಗೆ ತ್ರಿಸಂಖ್ಯಾಪದಗಳು ನೂರಾರಿವೆ. ಪ್ರಕೃತಿಯೇ ತ್ರಿಗುಣಾತ್ಮಕವಾಗಿದೆ. ಚಳಿ,ಮಳೆ,ಬಿಸಿಲು ಈ ಮೂರರಿಂದಲೇ ಸೃಷ್ಟಿನಿಯಮ ನಡೆಯುತ್ತಿದೆ.

ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾತ್‌ ಮೃತ್ಯೋರ್ಮೋಕ್ಷೀಯ ಮಾಮೃತಾತ್ ||

ಈ ಮಂತ್ರವು ಋಗ್ವೇದದ ಏಳನೆಯ ಮಂಡಲದಲ್ಲಿದೆ. ಈ ಮಂತ್ರಕರ್ತ ವಶಿಷ್ಠ ಮಹರ್ಷಿಗಳು. ವಿಭೂತಿಯ ಮೂರು ರೇಖೆಗಳ ಪರಮಾರ್ಥವೇನೆಂದರೆ ; ಪರಮಾತ್ಮಸತ್ಯವೆಂದು ಒಂದು ರೇಖೆ! ಜೀವಾತ್ಮಸತ್ಯವೆಂದು ಒಂದು ರೇಖೆ! ಜಗತ್ತು ಸತ್ಯವೆಂದು ಒಂದು ರೇಖೆ!

ಮೂರು ರೇಖೆಗಳ ಮೂಲಸತ್ಯವಿದು.

#ತ್ರಿಕ_ಅಥವಾ_ತ್ರಯ_ಮೂರರ_ಕೂಟಗಳು

 1. ಅಕ್ಷರ ತ್ರಯಗಳು – ಅ ಕಾರ ,ಉ ಕಾರ , ಮ ಕಾರ (ಓಂಕಾರ)
 2. ತ್ರಿಕಾಲ– ಮುಂಜಾನೆ ,ಮಧ್ಯಾಹ್ನ, ಸಂಜೆ
 3. ತ್ರಿಜಗ– ಸ್ವರ್ಗ, ಮರ್ತ್ಯ ,ಪಾತಾಳ
 4. ತ್ರಿಕರಣ– ಕಾಯಾ,ವಾಚಾ ,ಮನಸಾ
 5. ತ್ರಿಕಾಲ– ಭೂತ,ವರ್ತಮಾನ ,ಭವಿಷ್ಯತ್
 6. ತ್ರಿಲೋಕ– ಭೂಃ , ಭುವಃ , ಸುವಃ
 7. ತ್ರಿಭಂಗಿ – ಮೊಣಕಾಲು, ಸೊಂಟ, ಕತ್ತು
 8. ತ್ರಿದೋಷ – ವಾತ , ಪಿತ್ತ, ಕಫ
 9. ಅವಸ್ಥಾನ ತ್ರಯಗಳು – ಜಾಗೃತ್, ಸ್ವಪ್ನ , ಸುಷುಪ್ತಿ
 10. ತ್ರಿಲಿಂಗ -ಪುಲ್ಲಿಂಗ, ಸ್ತ್ರೀ ಲಿಂಗ, ನಪುಂಸಕ ಲಿಂಗ
 11. ತ್ರಿಕರ್ಮ– ಆಗಮಿ, ಸಂಚಿತ ,ಪ್ರಾರಬ್ಧ
 12. ತ್ರಿವಿಧ ಭಕ್ತಿ- ಗುರು, ಲಿಂಗ , ಜಂಗಮ
 13. ತಾಪ ತ್ರಯಗಳು– ಆದಿ ಭೌತಿಕ, ಆದಿ ದೈವಿಕ, ಆಧ್ಯಾತ್ಮಿಕ
 14. ತ್ರಿವಿಧ ಶಕ್ತಿ- ಜ್ಞಾನ ಶಕ್ತಿ, ಕ್ರಿಯಾಶಕ್ತಿ, ಇಚ್ಛಾಶಕ್ತಿ
 15. ತ್ರಿವಿಧಾಂಗ– ತ್ಯಾಗ, ಭೋಗ, ಯೋಗ
 16. ತ್ರಿಗುಣಕ್ಕೆ ಆಹಾರ– ಸಾತ್ವಿಕ, ರಾಜಸ,ತಾಮಸಿಕ
 17. ತ್ರಿಪದಿ– ಮೂರು ಸಾಲುಗಳುಳ್ಳ ಒಂದು ಬಗೆಯ ಪದ್ಯ
 18. ತ್ರಿಮತ – ದ್ವೈತ ,ಅದ್ವೈತ ವಿಶಿಷ್ಟಾದ್ವೈತ
 19. ತ್ರಿವೇಣಿ– ಗಂಗೆ, ಯಮುನೆ , ಸರಸ್ವತಿ
 20. ತ್ರಿಶೂಲ– ಮೂರು ಮೊನೆಯುಳ್ಳ ಶಿವನ ಆಯುಧ.
 21. ತ್ರಯೀ– ಋಗ್ವೇದ, ಯಜುರ್ವೇದ, ಸಾಮವೇದ
 22. ತ್ರಿಪಿಟಕಗಳು– ಸೂತ್ರ, ವಿನಯ, ಅಭಿಧರ್ಮ
 23. ತ್ರಿಪುಟ– ಜ್ಞಾತೃ, ಜ್ಞಾನ, ಜ್ಞೇಯ
 24. ತ್ರಿವರ್ಗ – ಧರ್ಮ,ಅರ್ಥ, ಕಾಮ
 25. ಪ್ರಸ್ಥಾನ ತ್ರಯಗಳು– ಉಪನಿಷತ್ತು, ಬ್ರಹ್ಮ ಸೂತ್ರ,ಭಗವದ್ಗೀತೆ
 26. ತ್ರಿ ರಾಮರು– ಶ್ರೀರಾಮ, ಪರಶುರಾಮ, ಬಲರಾಮ
 27. ಶಕ್ತಿ ತ್ರಯಗಳು– ಪ್ರಭು ಶಕ್ತಿ, ಮಂತ್ರ ಶಕ್ತಿ, ಉತ್ಸಾಹ ಶಕ್ತಿ
 28. ತೇಜ ತ್ರಯಗಳು– ಸೂರ್ಯ,‌ಚಂದ್ರ , ಅಗ್ನಿ
 29. ಋಣತ್ರಯ-ದೇವ ಋಣ, ಋಷಿ ಋಣ, ಪಿತೃ ಋಣ
 30. ಸ್ಥಾನ ತ್ರಯಗಳು– ನೇತ್ರ, ಕಂಠ,ಹೃದಯ
 31. ಗುರು ತ್ರಯ– ಮಾತಾ, ಪಿತೃ, ಆಚಾರ್ಯ
 32. ಮೂರು ಅವಸ್ಥೆಗಳು– ಬಾಲ್ಯ,ಯೌವನ, ವೃದ್ಧಾಪ್ಯ
 33. ತ್ರಿವಿಧ ಶೋತೃಗಳು– ಮುಕ್ತಿ, ಮುಮುಕ್ಷು, ವಿಷಯ
 34. ಜಗತ್ತಿನ ತ್ರಿವಿಧ ಅವಸ್ಥೆಗಳು– ಸೃಷ್ಟಿ, ಸ್ಥಿತಿ, ಲಯ
 35. ತ್ರಿ ಲೋಹ– ಚಿನ್ನ,ಬೆಳ್ಳಿ, ತಾಮ್ರ
 36. ತ್ರಿಫಲ– ತಾರಿ, ಅಣಿಲೆ, ನೆಲ್ಲಿ
 37. ಸೂತ್ರತ್ರಯ– ಸಾಂಖ್ಯ, ಯೋಗ, ಬ್ರಹ್ಮ
 38. ಗುಣತ್ರಯ – ಸತ್ವಗುಣ ರಜೋಗುಣ ,ತಮೋಗುಣ
 39. ತ್ರಿವಿಧ ಅರ್ಥ– ಶಬ್ದಾರ್ಥ, ವಾಚ್ಯಾರ್ಥ, ಭಾವಾರ್ಥ
 40. ಆತ್ಮ ತ್ರಯ-ಪರಮಾತ್ಮ, ಅಂತರಾತ್ಮ, ಜೀವಾತ್ಮ
 41. ಮತತ್ರಯಗಳು– ಪಾಪ,ಪುಣ್ಯ, ಮಿಶ್ರ
 42. ಅಗ್ನಿ ತ್ರಯಗಳು– ದಕ್ಷಿಣಾಗ್ನಿ,ಗಾರ್ಹಪತ್ಯ,ಆಹವನಿಯ
 43. ಮತತ್ರಯಗಳು– ಸ್ಮಾರ್ತ, ವೈಷ್ಣವ, ಶ್ರೀವೈಷ್ಣವಿ
 44. ತ್ರಿ ಕರ್ಮಗಳು– ಯಜನ, ವೇದಾಧ್ಯಯನ, ದಾನ
 45. ಈಷಣತ್ರಯ– ಲೋಕಪ್ರಶಂಸೆ, ಧನರಾಜ್ಯದಿ, ಸ್ತ್ರೀಪುತ್ರ
 46. ತ್ರಿವಿಧಾಂಗ– ತನು ,ಮನ ,ಭಾವ
 47. ತ್ರಿವಿಧ ಪ್ರಸಾದ– ಶುದ್ಧ, ಸಿದ್ಧ, ಪ್ರಸಿದ್ಧ
 48. ತ್ರಿವಿಧ ಪ್ರಜ್ಞೆ– ಶುದ್ಧ ,ದೇವ ,ಪ್ರಸಾದ
 49. ತ್ರಿಕಲ– ನಿಃಕಲ, ಸಕಲಾಸಕಲ, ಸಕಲ
 50. ತ್ರಿಕರಣ ಶುದ್ಧಿ– ತನು ಶುದ್ಧಿ, ಮನ ಶುದ್ಧಿ, ಭಾವ ಶುದ್ಧಿ.
 51. ತ್ರಿವಿಧ ದಾಸೋಹ– ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ.
 52. ಆಚಾರ್ಯತ್ರಯರು– ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು.
 53. ರತ್ನ ತ್ರಯರು – ರನ್ನ ,ಪೊನ್ನ , ಪಂಪ
 54. ತ್ರಿವಿಧ ತಪಸ್ಸು– ಶಾರೀರಿಕ ತಪಸ್ಸು, ವಾಙ್ಮಯ ತಪಸ್ಸು, ಮಾನಸಿಕ ತಪಸ್ಸು..

🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group