ರಾಜ್ಯದಲ್ಲಿನ ಎಲ್ಲ ರಸ್ತೆಗಳು ಸಂಪೂರ್ಣ ಕೆಟ್ಟು ಹೋಗಿವೆ. ರಸ್ತೆಗಳಲ್ಲಿ ತಗ್ಗು ದಿನ್ನೆಗಳದ್ದೇ ಕಾರುಬಾರು ಎನ್ನುವಂತಾಗಿದ್ದು ಸದ್ಯ ವಿಜಯಪುರ ದಿಂದ ಧಾರವಾಡಕ್ಕೆ ಹೋಗುವ ರಾಜ್ಯ ಹೆದ್ದಾರಿ (SH 34) ಕೂಡ ತೀರ ಹದಗೆಟ್ಟು ಹೋಗಿದ್ದು ರಸ್ತೆಯಲ್ಲೆಲ್ಲ ತಗ್ಗುಗಳು ತುಂಬಿಕೊಂಡು ಪ್ರಯಾಣ ನರಕ ಸದೃಶವಾಗಿದೆ.
ವಿಜಯಪುರ ದಿಂದ ಸುಮಾರು ೪೦ ಕಿಮೀ ವರೆಗಿನ ಚಿಕ್ಕಲಕಿ ಕ್ರಾಸ್ ವರೆಗೆ ರಾಜ್ಯ ಹೆದ್ದಾರಿ ತೀರ ಹದಗೆಟ್ಟು ಹೋಗಿದೆ.
ಬೆಳಗಾವಿ, ಬಾಗಲಕೋಟೆ ಹಾಗೂ ಮಹಾರಾಷ್ಟ್ರದಿಂದ ಸಾಕಷ್ಟು ವಾಹನಗಳಿಗೆ ಹೆದ್ದಾರಿಯಾಗಿರುವ ಈ ರಸ್ತೆಯ ರಿಪೇರಿಯಾಗಬೇಕಾಗಿದೆ.

