ವಿಜ್ಣಾನ ಪ್ರಗತಿಯ ಸಂಕೇತ- ಡಾ. ಸುರೇಶ ಉಕ್ಕಲಿ

Must Read

ಮೂಡಲಗಿ: ವಿಜ್ಞಾನವಿಲ್ಲದ ಆಧುನಿಕ ಪ್ರಪಂಚವನ್ನು ಊಹಿಸಲೂ ಅಸಾಧ್ಯ, ವಿಜ್ಞಾನ ಪ್ರಗತಿಯ ಸಂಕೇತವಾಗಿದೆ, ನಾವು ಬಳಸುವ ಪ್ರತಿ ವಸ್ತುವು ವಿಜ್ಞಾನದ ಕೊಡುಗೆಯಾಗಿದ್ದು, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಿಂದ ದೇಶದ ಪ್ರಗತಿ ದರ ಅಳೆಯಲಾಗುವುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಶೈ.ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ಸುರೇಶ ಉಕ್ಕಲಿ ಅಭಿಪ್ರಾಯ ಪಟ್ಟರು.

ತಾಲೂಕಿನ ಧರ್ಮಟ್ಟಿ ಗ್ರಾಮದ ಬಡ್ಡಿ ಸೆಂಟ್ರಲ್ ಶಾಲೆಯಲ್ಲಿ  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮೂಡಲಗಿ ತಾಲೂಕಾ ಘಟಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆಶ್ರಯದಲ್ಲಿ ಸೋಮವಾರ ಜರುಗಿದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಜ್ಞಾನ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನವು ಜೀವನ ಅವಿಭಾಜ್ಯ ಅಂಗವಾಗಿದ್ದು,  ವಿಜ್ಞಾನದ ಪ್ರಾಮುಖ್ಯತೆ ವಿಶ್ವದ ಜನತೆ ಅರಿಯುವುದು ಅಗತ್ಯವಾಗಿದೆ ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿ.ಇ.ಒ ಅಜೀತ ಮನ್ನಿಕೇರಿ ಮಾತನಾಡಿ, ಮಕ್ಕಳು ವೈಚಾರಿಕ  ಪ್ರಜ್ಞೆಯನ್ನು ಬಾಲ್ಯದಲ್ಲಿಯೇ ಬೆಳೆಸಿಕೊಂಡು ದೇಶದ ಆಸ್ತಿಯಾಗಲು ಇಂತಹ ವೇದಿಕೆಗಳು ಸಹಕಾರಿಯಾಗಲಿವೆ ಎಂದರು. 

ಸಮಿತಿಯ ಜಿಲ್ಲಾಕಾರ್ಯದರ್ಶಿ ಅರ್ಜುನ ನಿಡಗುಂದೆ, ಬಡ್ಡಿ ಸಂಟ್ರಲ್ ಶಾಲೆಯ ಅಧ್ಯಕ್ಷ ಚನ್ನಬಸು ಬಡ್ಡಿ  ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿ ಮೂಡಲಗಿ ತಾಲೂಕಾ ಘಟಕ ಅಧ್ಯಕ್ಷ ಬಸವರಾಜ ಭಜಂತ್ರಿ ಮಾತನಾಡಿದರು. 

ಸಮಾರಂಭವನ್ನು “ನೈರ್ಮಲ್ಯ ಹಾಗೂ ಆರೋಗ್ಯ” ಅಂತರ್ಜಾಲ ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳು ಉದ್ಘಾಟಿಸಿದರು. 

ಸಮಾರಂಭದ ವೇದಿಕೆಯಲ್ಲಿ ಮಾಧ್ಯಮಿಕ ಶಾಲಾ ನೌಕರ ಸಂಘದ ಮೂಡಲಗಿ ಘಟಕದ ಅಧ್ಯಕ್ಷ ರಾಘವೇಂದ್ರ ಸೂರಣ್ಣವರ, ಬಡ್ಡಿ ಶಾಲೆಯ ಕಾರ್ಯದರ್ಶಿ ಶಂಕರ ಡೊಣವಾಡ, ಪ್ರಾಚಾರ್ಯ ಸಾಜು ರಾಜನ್, ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಇದ್ದರು.  

ಇದಕ್ಕೂ ಮುಂಚೆ ಧ್ವಜಾರೋಹಣ ಮತ್ತು ಅಂತಾರಾಷ್ಟ್ರೀಯ ಯೋಗಪಟು ರೇವು ಕೋಟೂರು ಅವರಿಂದ  ಯೋಗ ಹಾಗೂ ಪ್ರಾರ್ಥನೆ ಜರುಗಿತು. ಬಸವರಾಜ ಭಜಂತ್ರಿ ಸ್ವಾಗತಿಸಿದರು, ಡಾ. ಮಹಾದೇವ ಪೋತರಾಜ ನಿರೂಪಿಸಿದರು,  ಶಿವಲಿಂಗ ಅರಗಿ ವಂದಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group