ಹಳ್ಳೂರ- ಬೀದಿ ನಾಟಕ ಪ್ರದರ್ಶನ ಮಾಡುವುದರಿಂದ ಜನರಿಗೆ ತಿಳಿವಳಿಕೆ ನೀಡಿ ಗ್ರಾಮದ ಸುಧಾರಣೆಗೆ ಸಹಕಾರಿಯಾಗುತ್ತದೆ. ಶೌಚಾಲಯ ನಿರ್ಮಾಣ, ಅನಕ್ಷರತೆ, ಹೆಣ್ಣು ಗಂಡು ಭೇದ, ಭಾವ, ಹೆಣ್ಣು ಅಬಲೆ ಅಲ್ಲ ಸಬಲೆ,ಮಾದಕ ದ್ರವ್ಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಬಾಲ್ಯ ವಿವಾಹ ನಿಷೇಧ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹೀಗೆ ಅನೇಕ ಬಗೆಯ ಸತ್ಯ ಸಂಗತಿಗಳನ್ನು ಬೀದಿ ನಾಟಕ ಪ್ರದರ್ಶನ ಮಾಡುವುದರ ಮೂಲಕ ಜನರಿಗೆ ತಿಳಿವಳಿಕೆ ನೀಡಿದ್ದು ಮೆಚ್ಚುವಂತಹದ್ದು ಎಂದು ಮುರಿಗೆಪ್ಪ ಮಾಲಗಾರ ಹೇಳಿದರು.
ಅವರು ಶಿವಾಪೂರ ಗ್ರಾಮದವರು ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜ ಸುಧಾರಣೆಗಾಗಿ ಬಡ ಜನರ ಜೀವನ ಮಟ್ಟ ಉದ್ದಾರವಾಗುತ್ತಿದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಾ ಯೋಜನಾದಿಕಾರಿ ರಾಜು ನಾಯ್ಕ ಮಾತನಾಡಿ, ಬೀದಿ ನಾಟಕ ಪ್ರದರ್ಶನ ಮಾಡುವುದು ಗ್ರಾಮಕ್ಕೆ ಬಂದು ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು .ಹೆಣ್ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಬಾಲ್ಯ ವಿವಾಹ ಆಗೋದು ನಿಲ್ಲಿಸಬೇಕು ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜನರಿಗೆ ತಿಳಿವಳಿಕೆ ನೀಡಬೇಕು ಮಕ್ಕಳ ಕೈಗೆ ಮೊಬೈಲ್ ಕೊಡುವುದನ್ನು ತಪ್ಪಿಸಿ ವಿದ್ಯಾವಂತರನ್ನಾಗಿ ಮಾಡಿರಿ ಆರೋಗ್ಯವನ್ನು ಕಡೆಗಣಿಸದೆ ಲಕ್ಷ್ಯ ಕೊಟ್ಟು ರಕ್ಷಣೆ ಮಾಡಿಕೊಳ್ಳಿರಿ ಎಲ್ಲರೂ ಸರಕಾರದ ಸೌಲಭ್ಯ ಪಡೆದುಕೊಳ್ಳಿರೆಂದು ಹೇಳಿದರು.
ಈ ಸಮಯದಲ್ಲಿ ಗ್ರಾಂ ಪ ಸದಸ್ಯ ಮಲ್ಲಪ್ಪ ಢವಳೇಶ್ವರ, ದೇವಕಿ ರಬಕವಿ, ರೇವಣ್ಣ ಪಾಟೀಲ, ವಿಜಯಲಕ್ಷ್ಮಿ ಮೂರನಾಳ, ಕಸ್ತೂರಿ ಸವದಿ, ಕೌಸರ ಹಣಗಂಡಿ, ಭರತ್ ಕಲಾ ಚಂದ್ರ, ಪ್ರಕಾಶ ಜನಮಟ್ಟಿ, ಸಂತ್ರಾಮ ಮಯೂರ, ಪುಂಡಲೀಕ ನಾಯ್ಕ, ಮಹೇಶ ಪಕಾಲೆ. ಶಂಕರ ಖೋತ.ಸಾವಿತ್ರಿ ಹಳಕಲ್. ಸುಜಾತಾ ಮಗದುಮ್.ಸೇರಿದಂತೆ ಅನೇಕರಿದ್ದರು.

