ಕೇವಲ ೧೦೦ ಗ್ರಾಮ್ ತೂಕ ಹೆಚ್ಚಾಗಿದ್ದಕ್ಕೆ ಓಲಿಂಪಿಕ್ ಕುಸ್ತಿ ಕ್ರೀಡೆಯಿಂದ ಅನರ್ಹಗೊಂಡಿದ್ದ ಭಾರತೀಯ ಕುಸ್ತಿಪಟು ವಿನೇಶ ಫೋಗಟ್ ಅವರ ಪ್ರಕರಣದ ವಿಚಾರಣೆಯನ್ನು ಕ್ರೀಡಾ ವಿವಾದಗಳ ಕೋರ್ಟ್ ಇದೇ ದಿ. ೧೩ ಕ್ಕೆ ಮುಂದೂಡಿದೆ.
ದಿ.೧೦ ರಂದೇ ರಾತ್ರಿ ೯.೩೦ ಕ್ಕೆ ಅದು ತನ್ನ ನಿರ್ಣಯ ತಿಳಿಸಬೇಕಾಗಿತ್ತು ಆದರೆ ವಿಚಾರಣೆ ಯನ್ನು ಮತ್ತೆ ಎರಡು ದಿನಗಳ ಕಾಲ ಮುಂದೂಡಲಾಗಿದೆ ಇದರಿಂದ ಫೋಗಟ್ ಅವರಿಗೆ ಬೆಳ್ಳಿ ಪದಕ ದೊರಕುವುದೇ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಆದರೆ ಓಲಿಂಪಿಕ್ ಹಬ್ಬ ಮಾತ್ರ ದಿ.೧೧ ರಂದೇ ಮುಕ್ತಾಯಗೊಳ್ಳಲಿದ್ದು ಫೋಗಟ್ ಪ್ರಕರಣದ ವಿಚಾರಣೆಯನ್ನು ದಿ.೧೩ ಕ್ಕೆ ಮುಂದೂಡಿದ್ದು ಅಚ್ಚರಿ ತಂದಿದೆ.
ಕ್ರೀಡಾ ವಿವಾದಗಳ ಕೋರ್ಟ್ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು ಕ್ರೀಡೆಗೆ ಸಂಬಂಧಿಸಿದ ವಾದ ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತದೆ. ಶುಕ್ರವಾರ ಅದು ವಿನೇಶ ಫೋಗಟ್ ಪ್ರಕರಣದಲ್ಲಿ ತೀರ್ಪು ನೀಡಬೇಕಾಗಿತ್ತು. ಇತ್ತ ಭಾರತೀಯ ಓಲಿಂಪಿಕ್ ಸಂಸ್ಥೆಯು ತನ್ನ ವಾದ ಮುಂದುವರೆಸಿದ್ದು, ಕುಸ್ತಿ ಪಟು ವಿನೇಶ ಅವರು ಅನರ್ಹಗೊಂಡಿದ್ದು ಯಾವುದೇ ಮೋಸದ ಕೃತ್ಯದಿಂದಲ್ಲ ಆದರೆ ೫೦ ಕೆ ಜಿ ತೂಕದ ಅರ್ಹತಾ ಕುಸ್ತಿಯಲ್ಲಿ ಕೇವಲ ೧೦೦ ಗ್ರಾಮ್ ಹೆಚ್ಚು ತೂಕ ತೋರಿಸಿದ ಕಾರಣ ಅನರ್ಹಗೊಂಡಿದ್ದಾರೆ ಆದರೆ ಇದೇನು ಗಂಭೀರ ಕಾರಣವಲ್ಲ ಎಂದು ವಿನೇಶ ಅವರ ಪ್ರಕರಣದಲ್ಲಿ ವಕೀಲರಾಗಿರುವ ಹರೀಶ ಸಾಳ್ವೆ ಹಾಗೂ ವಿದುಷ್ಪತ್ ಸಿಂಘಾನಿಯಾ ಹೇಳಿದ್ದಾರೆ. ವಿಚಾರಣೆಯ ಮುಖಂಡತ್ವವನ್ನು ಆಸ್ಟ್ರೇಲಿಯಾದ ನ್ಯಾಯಾಧೀಶ ಡಾ. ಅನಾಬೆಲ್ಲೆ ಬೆನ್ನೆಟ್ ವಹಿಸಿಕೊಂಡಿದ್ದಾರೆ.
ವಿಚಾರಣೆ ಯ ತೀರ್ಪು ತಮ್ಮ ಪರವಾಗಿ ಬರಲಿದೆ ಎಂಬ ವಿಶ್ವಾಸವನ್ನು ಭಾರತೀಯ ಓಲಿಂಪಿಕ್ ಅಸೋಸಿಯೇಶನ್ ವಿಶ್ವಾಸ ವ್ಯಕ್ತಪಡಿಸಿದೆ